Site icon Vistara News

Drivers Fight : ಆ್ಯಪ್ ಆಧಾರಿತ ಬೈಕ್‌- ಆಟೋ ಚಾಲಕನ ಫೈಟ್‌; ಬಟ್ಟೆ ಬಿಚ್ಚಿ ಹೈಡ್ರಾಮಾ!

Drivers fight

ಬೆಂಗಳೂರು‌: ರಾಜಧಾನಿಯಲ್ಲಿ (Bangalore News) ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ (App Based Bike Taxi) ಮತ್ತು ಸಾಮಾನ್ಯ ಆಟೋ ಚಾಲಕರ (Auto Drivers) ನಡುವಿನ ಫೈಟ್‌ ಜೋರಾಗಿದೆ. ಆ್ಯಪ್ ಆಧಾರಿತ ಉಬರ್‌, ಓಲಾ, ರ‍್ಯಾಪಿಡೊ ಮೊದಲಾದ ಬೈಕ್‌ ಸೇವೆಗಳನ್ನು (Bike Taxi Service) ನೀಡಲೇಬಾರದು ಎಂದು ಆಟೋ ರಿಕ್ಷಾ ಚಾಲಕರು ಆಗ್ರಹಿಸುತ್ತಿದ್ದಾರೆ. ನಗರದ ಹಲವು ಕಡೆಗಳಲ್ಲಿ ಬೈಕ್‌ ಟ್ಯಾಕ್ಸಿಗಳನ್ನು ತಡೆಯುವ ಕೆಲಸಗಳು ನಡೆಯುತ್ತಲೇ ಇವೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಬೈಕ್‌ ಟ್ಯಾಕ್ಸಿಯವರು ಹೇಗೋ ತಪ್ಪಿಸಿಕೊಂಡು ಹೋಗುತ್ತಾರೆ. ಆದರೆ, ಇದೀಗ ಮೊದಲ ಬಾರಿಗೆ ತಮ್ಮನ್ನು ತಡೆದ ಆಟೋ ರಿಕ್ಷಾ ಚಾಲಕನನ್ನು ಆ್ಯಪ್ ಆಧಾರಿತ ಬೈಕ್‌ ಟ್ಯಾಕ್ಸಿ ಸವಾರರು ಜತೆಯಾಗಿ ಸೇರಿ ಎದುರಿಸಿದ್ದಾರೆ (Drivers Fight). ಈ ಸಂದರ್ಭದಲ್ಲಿ ಆಟೋ ಚಾಲಕ ಬಟ್ಟೆ ಬಿಚ್ಚಿ ಹೈ ಡ್ರಾಮಾ (High Drama By Auto Driver) ಸೃಷ್ಟಿಸಿದ್ದಾನೆ.

ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಯುವಕನೊಬ್ಬ ತನ್ನ ಬೈಕ್‌ ಟ್ಯಾಕ್ಸಿಯಲ್ಲಿ ಇನ್ನೊಬ್ಬ ವ್ಯಕ್ತಿಯೊನ್ನು ಕೂರಿಸಿಕೊಂಡು ಹೋಗುತ್ತಿದ್ದ. ಆತ ಒಬ್ಬ ರಿಕ್ಷಾ ಚಾಲಕ ಅವರನ್ನು ತಡೆದಿದ್ದಾನೆ. ನಿನಗೆ ಬಾಡಿಗೆ ಮಾಡಲು ಪರ್ಮಿಷನ್‌ ಇಲ್ಲ ಎಂದು ಜಟಾಪಟಿ ನಡೆದಿದೆ.

ಈ ನಡುವೆ ಏನಾಗುತ್ತಿದೆ ಎಂದು ತಿಳಿಯಲು ಇನ್ನೂ ಕೆಲವು ಬೈಕ್‌ ಟ್ಯಾಕ್ಸಿದಾರರು ಅಲ್ಲಿಗೆ ಬಂದಿದ್ದಾರೆ. ಆಗ ಬೈಕ್‌ ಟ್ಯಾಕ್ಸಿ ಚಾಲಕರ ಕೈ ಮೇಲಾಗಿದೆ. ಸಾಮಾನ್ಯ ಆಟೋ ಚಾಲಕರು ಕೆಲವೇ ಮಂದಿ ಇದ್ದರು.

ಇದರ ನಡುವೆ ಬೈಕ್‌ ಟ್ಯಾಕ್ಸಿಯನ್ನು ಪ್ರಶ್ನೆ ಮಾಡಿದ ಆಟೋ ಚಾಲಕನ ವಾಹನಕ್ಕೆ ನಂಬರ್‌ ಪ್ಲೇಟ್‌ ಕೂಡಾ ಇರಲಿಲ್ಲ. ಇದನ್ನು ಬೈಕ್‌ ಚಾಲಕರು ಪ್ರಶ್ನೆ ಮಾಡಿದಾಗ, ತನ್ನ ಹಳೆ ವಾಹನವನ್ನೇ ತೋರಿಸಿ ಇದು ಹೊಸದು ಇದಕ್ಕೆ ಇನ್ನೂ ನಂಬರ್‌ ಪ್ಲೇಟ್‌ ಬಂದಿಲ್ಲ ಎಂದು ಹೇಳಿದ್ದಾರೆ ಚಾಲಕ.

ಈ ಹಂತದಲ್ಲಿ ಬೈಕ್‌ ಟ್ಯಾಕ್ಸಿ ಚಾಲಕರು ಆತನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ನೀನು ಅಕ್ರಮವಾಗಿ ಆಟೋ ಓಡಿಸುತ್ತಾ ನಮ್ಮನ್ನು ಪ್ರಶ್ನೆ ಮಾಡುತ್ತಿಯಾ ಎಂದು ಕೇಳಿದರು. ಇದರಿಂದ ಮುಂದೇನು ಮಾಡಬೇಕು ಎಂದು ತಿಳಿಯದಾದ ಆಟೋ ಚಾಲಕ ಪ್ಯಾಂಟ್‌ ಬಿಚ್ಚಿ ಅಯ್ಯಯ್ಯೋ ಓಲಾ, ಊಬರ್‌ನವರು ನನಗೆ ಹೊಡೆಯುತ್ತಿದ್ದಾರೆ ಎಂದು ನಾಟಕವಾಡಿದ.

ಎಲ್ಲ ಘಟನಾವಳಿಗಳನ್ನು ವಿಡಿಯೊದಲ್ಲಿ ಸೆರೆ ಹಿಡಿಯುತ್ತಿದ್ದ ಬೈಕ್‌ ಟ್ಯಾಕ್ಸಿಯವರು ನಿನ್ನ ಆಟ ನಡೆಯಲ್ಲ ಎಂದು ಗೇಲಿ ಮಾಡಿದರು. ಆಗ ಆಟೋ ಚಾಲಕ ತನ್ನ ಆಟೊವನ್ನು ಹತ್ತಿ ತಪ್ಪಿಸಿಕೊಂಡ. ಈ ಎಲ್ಲ ಘಟನಾವಳಿಗಳನ್ನು ಬೈಕ್‌ ಚಾಲಕರು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ : Electric Bike taxi Service : ನಿರ್ಬಂಧ ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿಗೆ ಮಾತ್ರ; ರ‍್ಯಾಪಿಡೊ ಸೇವೆಗೆ ತೊಂದರೆ ಇಲ್ಲ

ಆ್ಯಪ್ ಆಧಾರಿತ ಬೈಕ್‌ ಟ್ಯಾಕ್ಸಿಗಳಿಗೆ ಸಂಬಂಧಿಸಿ ಹೊಸ ನಿಯಮವೇನು?

ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್‌ ಟ್ಯಾಕ್ಸಿಗಳಿಗೆ ಕೆಲವು ನಿರ್ಬಂಧಗಳಿವೆ. ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿಗಳನ್ನು ಬಳಸಬಾರದು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ. ಆದರೆ, ಪೆಟ್ರೋಲ್‌ ಆಧರಿದ ಎಲೆಕ್ಟ್ರಿಕ್‌ ಬೈಕ್‌ಗಳನ್ನು ಬಳಸಲು ಅವಕಾಶವಿದೆ. ಆದರೆ, ಈ ವಿಚಾರದಲ್ಲಿ ಆಟೋ ಮತ್ತು ಬೈಕ್‌ ಟ್ಯಾಕ್ಸಿಗಳ ನಡುವೆ ವಿವಾದ ಮುಂದುವರಿದಿದೆ.

Exit mobile version