ಬೆಂಗಳೂರು: ಸ್ಟೂಡೆಂಟ್, ಬ್ಯುಸಿನೆಸ್ ವೀಸಾದಲ್ಲಿ ಬಂದು ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯ ಮೂಲದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಚೀಕಾ ಹಾಗು ವಿಕ್ಟರ್ ಬಂಧಿತ ನೈಜೀರಿಯನ್ ಪ್ರಜೆಗಳು. ಬಂಧಿತರಿಂದ 25 ಲಕ್ಷ ಮೌಲ್ಯದ 47 ಗ್ರಾಂ ಎಂಡಿಎಂಎ, 0.25 ಗ್ರಾಂಂ ಎಲ್‌ಎಸ್‌ಡಿ, 21 ಗ್ರಾಂ ಎಂಡಿಎಂಎ ಎಕ್ಸ್‌ಟಸಿ ಪಿಲ್ಸ್, 2 ಕೇಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಆರು ವರ್ಷಗಳ ಹಿಂದೆ ಸ್ಟೂಡೆಂಟ್ ಹಾಗೂ ಬ್ಯುಸಿನೆಸ್ ವೀಸಾದಲ್ಲಿ ಆರೋಪಿಗಳು ನಗರಕ್ಕೆ ಬಂದಿದ್ದರು. ಕಡಿಮೆ ಸಮಯದಲ್ಲಿ ಹೆಚ್ಚಿಗೆ ಹಣ ಗಳಿಸುವ ಉದ್ದೇಶದಿಂದ ಅಡ್ಡ ದಾರಿ ಹಿಡಿದಿದ್ದರು. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪರಿಚಯಸ್ಥ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದರು. ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ | ಮುಂಬೈನಲ್ಲಿ ಸಿಕ್ಕಸಿಕ್ಕವರಿಗೆ ಚಾಕುವಿನಿಂದ ಇರಿದ ನೈಜೀರಿಯಾ ವ್ಯಕ್ತಿ; 8 ಮಂದಿಗೆ ಗಾಯ