ಬೆಂಗಳೂರು: ತೆಲಂಗಾಣದ ಸೈಬರಾಬಾದ್ ಮತ್ತು ಶಮ್ಶಾಬಾದ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಉತ್ತರ ಭಾರತದಿಂದ ಬರುತ್ತಿದ್ದ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ (Drugs Seized) ಮಾಡಲಾಗಿದೆ. ಈ ಮೂಲಕ ಐವರು ಅಂತರಾಜ್ಯ ಡ್ರಗ್ ಪೆಡ್ಲರ್‌ಗಳನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಮಾದಕ ವಸ್ತು, ಸಾಗಾಟ ಮಾಡುತ್ತಿದ್ದ ವಾಹನ ಸೇರಿ 2 ಕೋಟಿ 94 ಲಕ್ಷದ 75ಸಾವಿರ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಒಡಿಶಾದಿಂದ ಮಹಾರಾಷ್ಟ್ರ- ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಓಡಿಶಾ ಮತ್ತು ಕರ್ನಾಟಕ ಮೂಲದ ಡ್ರಗ್ ಪೆಡ್ಲರ್‌ಗಳು ಲಾಕ್ ಆಗಿದ್ದಾರೆ. ರಾಮು, ಸೋಮನಾಥ ಖರ, ಸುರೇಶ್ ಮಾರುತಿ ಪಾಟೀಲ್ ಹಾಗೂ ಹರಡೇ ಸಂಜೀವ್ ವಿಠ್ಠಲ್ ರೆಡ್ಡಿ, ಸಂಜೀವ್ ಕುಮಾರ್ ಹೊಲ್ಲಪ್ಪ, ಸುನೀಲ್ ಕೊಲಸ, ಜಗ ಸುನಾ ಗ್ಯಾಂಗ್ ಬಂಧನವಾಗಿದೆ.
ಬಂಧಿತರಿಂದ ಸುಮಾರು 803kg ಗಾಂಜಾ, ಎರ್ಟಿಗಾ ಕಾರು, ಏಳು ಮೊಬೈಲ್ ಸೇರಿ 2,94,75,000 ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ. ಈ ಗ್ಯಾಂಗ್ ಹಲವು ವರ್ಷಗಳಿಂದ ಗಾಂಜಾ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದರು. ಸದ್ಯ ಗ್ಯಾಂಗ್ ಅನ್ನು ಬಂಧಿಸಿ ಸೈಬರಾಬಾದ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Drowned in water : ಮಾರ್ಕಂಡೇಯ ನದಿಗೆ ಆಯತಪ್ಪಿ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಓಲಾ, ಊಬರ್ ಡ್ರೈವಿಂಗ್ ಜತೆಗೆ ಡ್ರಗ್ಸ್ ಮಾರಾಟ; 6 ಕೋಟಿ ರೂ.ಮೌಲ್ಯದ ಡ್ರಗ್ಸ್ ಸೀಜ್
ಬೆಂಗಳೂರು: ಸೆರಲ್ಯಾಕ್ ಪ್ಯಾಕ್‌ನಲ್ಲಿ 6 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ (Drugs Seized) ಸಪ್ಲೈ ಮಾಡುತ್ತಿದ್ದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಟ್ಟೆ ವ್ಯಾಪಾರ ಮಾಡಲು ಬ್ಯುಸಿನೆಸ್ ವೀಸಾದಲ್ಲಿ ಬಂದಿದ್ದ ವಿದೇಶಿ ಪ್ರಜೆಯೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದ.
ಮುಂಬೈನ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿದ್ದ ಎಂಡಿಎಂ ಪೌಡರ್ ಅನ್ನು ಮಕ್ಕಳು ಸೇವಿಸುವ ಸೆರಲ್ಯಾಕ್, ಕಾರ್ನ್ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ, ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದರು. ಬಳಿಕ ಸಣ್ಣ ಸಣ್ಣ ಪ್ಯಾಕ್ ಮಾಡಿ ಡೀಲರ್‌ಗಳಿಗೆ ಮಾರಾಟ ಮಾಡಲಾಗುತ್ತಿತ್ತು.
ನೈಜಿರೀಯ ಮೂಲದ ಆರೋಪಿಯೊಬ್ಬ ಸಿಸಿಬಿ ಮಾದಕದ್ರವ್ಯ ನಿಗ್ರಹದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ನಾಲ್ಕು ಕೆಜಿ ಡ್ರಗ್‌ನನ್ನು ಮನೆಯಲ್ಲಿ ಸಂಗ್ರಹಿಸಿದ್ದ. ಎಲೆಕ್ಟ್ರಾನಿನ್ ಸಿಟಿ ಪೊಲೀಸ್ ಠಾಣ ವ್ಯಾಪ್ತಿಯ ಬೆಟ್ಟದಾಸನಪುರದಲ್ಲಿ ಸೀಜ್ ಮಾಡಲಾಗಿದ್ದು, ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಡ್ರಗ್ ಪೆಡ್ಲರ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಡ್ರೈವಿಂಗ್ ಜತೆಗೆ ಡ್ರಗ್ ಸೇಲ್
ಓಲಾ, ಉಬರ್ ಡ್ರೈವಿಂಗ್ ಜತೆ ಜತೆಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧಿತನಿಂದ ಒಂದು ಕೋಟಿ 50 ಲಕ್ಷ ಮೌಲ್ಯದ 19.9 ಎಂಡಿಎಂಎ ಕ್ರಿಸ್ಟಲ್, 746 ಕೊಕೇನ್ ವಶಕ್ಕೆ ಪಡೆಯಲಾಗಿತ್ತು. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ವಾಸವಾಗಿದ್ದ .
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ