Site icon Vistara News

ED Raid: ಬೆಂಗಳೂರು, ಧಾರವಾಡದಲ್ಲಿ ಕೆಐಎಡಿಬಿ ಕಚೇರಿಗಳಿಗೆ ಇಡಿ ದಾಳಿ; 26 ಗಂಟೆ ಪರಿಶೀಲಿಸಿದರೂ ಮುಗಿಯದ ಹಗರಣದ ದಾಖಲೆ!

ed raid

ಬೆಂಗಳೂರು: ಬೆಂಗಳೂರು (Bangalore) ಹಾಗೂ ಧಾರವಾಡದಲ್ಲಿ (Dharwad) ಕೆಐಎಡಿಬಿ (KIADB) ಕಚೇರಿಗಳಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ (ED Raid) ನಡೆಸಿದ್ದು, ನಿನ್ನೆ ಮುಂಜಾನೆಯಿಂದ ಆರಂಭವಾದ ದಾಖಲೆಗಳ ಪರಿಶೀಲನೆ ಇಂದೂ ಮುಂದುವರಿದಿದೆ.

ಬೆಂಗಳೂರಿನ ಖನಿಜ ಭವನದಲ್ಲಿರುವ ಕೆಐಎಡಿಬಿ ಮುಖ್ಯ ಕಚೇರಿ ಹಾಗೂ ಧಾರವಾಡ ಕೆಐಎಡಿಬಿ ಭೂ ಸ್ವಾಧೀನ ಕಚೇರಿಗಳಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿನ್ನೆಯಿಂದಲೂ ದಾಖಲೆಗಳ ಹಾಗೂ ಲೆಕ್ಕಪತ್ರಗಳ ಪರಿಶೀಲನೆ ನಡೆಯುತ್ತಿದೆ. ಕೆಐಎಡಿಬಿ ಬಹುಕೋಟಿ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಭೂ ಸ್ವಾಧೀನ ಹೆಸರಲ್ಲಿ ಕೆಐಇಡಿಬಿ ಅಧಿಕಾರಿಗಳು ನೂರಾರು ಕೋಟಿ ಲೂಟಿ ಮಾಡಿದ ಆರೋಪವಿದೆ. ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರ ನೀಡುವ ನೆಪದಲ್ಲಿ ಹಣಕಾಸಿನ ಅಕ್ರಮ, ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಓಪನ್‌ ಮಾಡಿ ಕಾಸು ಲಪಟಾಯಿಸಿರುವುದು ಕಂಡುಬಂದಿದೆ. IDBI ಬ್ಯಾಂಕ್‌ನ ಒಂದೇ ಶಾಖೆಯಲ್ಲಿ 24 ನಕಲಿ ಖಾತೆಗಳನ್ನು ತೆರೆದು ಹಣ ಕಳಿಸಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂ ಸ್ವಾಧೀನದ ಹೆಸರಲ್ಲಿ, ಧಾರವಾಡ ಕೆಲಗೇರಿ ಹಾಗು ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿಯೂ ಲೂಟಿ ಮಾಡಲಾಗಿದೆ.

ನಿನ್ನೆ ಬೆಳಗ್ಗೆ 9 ಗಂಟೆಯಿಂದಲೂ ಇಡಿ ಅಧಿಕಾರಿಗಳು ಶೋಧಕಾರ್ಯ ಆರಂಭಿಸಿದ್ದು, ಕಚೇರಿಯನ್ನು ಇಂಚಿಂಚೂ ಜಾಲಾಡುತ್ತಿದ್ದಾರೆ. ಬರೋಬ್ಬರಿ 26 ಗಂಟೆಗಳಿಂದ ಶೋಧ ನಡೆಸುತ್ತಿದ್ದಾರೆ. ಧಾರವಾಡದ ಲಕಮನಹಳ್ಳಿಯಲ್ಲಿರುವ ಕೆಐಎಡಿಬಿ ಕಚೇರಿಯಲ್ಲಿ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಓರ್ವ ಏಜೆಂಟ್‌ನನ್ನು ವಶಕ್ಕೆ ಪಡೆದಿದ್ದಾರೆ. ರವಿ ಕುರಬೇಟ್ ಎಂಬ ಏಜೆಂಟ್‌ನನ್ನು ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

ಧಾರವಾಡದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಸೇರಿ ಅನೇಕ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸಿಐಡಿ ತನಿಖೆಯಲ್ಲಿ 19.50 ಕೋಟಿ ರೂ. ಅಕ್ರಮ ನಡೆದಿರುವುದು ಪತ್ತೆಯಾಗಿತ್ತು. ಸಿಐಡಿ ಎಫ್‌ಐಆರ್ (CID FIR) ಆಧರಿಸಿ ಇಡಿ ತನಿಖೆಗಿಳಿದಿದೆ.

ಇನ್ಮುಂದೆ ಖಾಸಗಿ ಪದವಿ ಕಾಲೇಜುಗಳಲ್ಲೂ ಸಿಗಲಿದೆ ಸರ್ಕಾರಿ ಕೋಟಾ ಸೀಟ್!

ಬೆಂಗಳೂರು: ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟ್ ಹಂಚಿಕೆ ಮಾದರಿಯಂತೆ ಇನ್ನು ಮುಂದೆ ಖಾಸಗಿ ಪದವಿ ಕಾಲೇಜುಗಳಲ್ಲೂ ಸರ್ಕಾರಿ ಕೋಟಾದಡಿ ಸೀಟು ಹಂಚಿಕೆ (Govt Quota Seats) ಮಾಡಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.

ಬಡ ವಿದ್ಯಾರ್ಥಿಗಳಿಗೆ ಬಿಎ, ಬಿಎಸ್ಸಿ, ಬಿ.ಕಾಂ ಸೇರಿ ಇನ್ನಿತರ ಪದವಿ ಕೋರ್ಸ್‌ ವ್ಯಾಸಂಗ ಮಾಡಲು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲೂ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಖಾಸಗಿ ಕಾಲೇಜುಗಳಲ್ಲಿ ಇನ್ಮುಂದೆ ಶೇ.40 ಸರ್ಕಾರಿ ಕೋಟಾದಡಿಯಲ್ಲಿ ಪದವಿ ಸೀಟ್‌ಗಳನ್ನ ಸರ್ಕಾರಕ್ಕೆ ಪಡೆಯಲು ಮುಂದಾದ ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಈ ಹಿಂದೆ ಖಾಸಗಿ ಪದವಿ ಕಾಲೇಜುಗಳು 100ಕ್ಕೆ 100 ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟ್ ದಾಖಲಾತಿ ಇತ್ತು. ಖಾಸಗಿ ಕೋಟಾದಡಿಯೇ ಪದವಿ ದಾಖಲಾತಿ ಪಡೆಯುತ್ತಿದ್ದರು. ಹೀಗಾಗಿ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಓದಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶುಲ್ಕ ಕಟ್ಟಲಾಗದೆ ಪರದಾಡ್ತಾ ಇದ್ದರು.

ಸರ್ಕಾರ ಪದವಿ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಾದ ಶೇ.40 ಸರ್ಕಾರಿ ಕೋಟಾದ ಸೀಟ್ ಗಳನ್ನು ಈ ವರ್ಷದಿಂದ ಪಡೆಯಲು ಮುಂದಾಗಿದೆ. ಈ ಸೀಟ್‌ಗಳನ್ನ ಕೆಇಎ ಅಥವಾ ಕಾಮೆಡ್‌ ಕೆ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Anganawadi workers: ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನೇ ಎಗರಿಸುತ್ತಿದ್ದ ಅಂಗನವಾಡಿ ಶಿಕ್ಷಕಿ, ಸಹಾಯಕಿ ವಜಾ!

Exit mobile version