Site icon Vistara News

Robbery Case : ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೆ ದರೋಡೆ ಮಾಡಿದ್ದ 8 ಮಂದಿ ಸೆರೆ

Robbers arrested in Bangalore

ಬೆಂಗಳೂರು : ಕಳೆದ ಡಿಸೆಂಬರ್‌ 4ರ ರಾತ್ರಿ ಪೀಣ್ಯದಲ್ಲಿ ಪೊಲೀಸರ ಸೋಗಿನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ, (Robbery at Businessmans house) ಮನೆಯಲ್ಲಿದ್ದವರ ಮೇಲೆ ಹಲ್ಲೆ ಮಾಡಿ, 700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗದು ದರೋಡೆ (Robbery Case) ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಪೀಣ್ಯ ಪೊಲೀಸ್ ಠಾಣೆಯ ಹೆಚ್​ಎಂಟಿ ಲೇಔಟ್​ನಲ್ಲಿ ಇರುವ ಎಸ್.ಎನ್.ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿ ಮಾಲೀಕ ಮನೋಹರ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿತ್ತು.

ರಾತ್ರಿ 7.30ರ ಸುಮಾರಿಗೆ ಮನೆಯಲ್ಲಿ ಉದ್ಯಮಿ ಮನೋಹರ್ ಅವರು ಇಲ್ಲದ ವೇಳೆ ಯಾರೋ ಬಾಗಿಲು ತಟ್ಟಿದ್ದಾರೆ. ಮನೆಯಲ್ಲಿ ಮನೋಹರ್‌ ಅವರ ಪತ್ನಿ ಸುಜಾತ ಮತ್ತು ಮಗ ರೂಪೇಶ್‌ ಇದ್ದರು. ಬಾಗಿಲು ಬಡಿದ ವ್ಯಕ್ತಿ ತಾನು ಪೊಲೀಸ್‌ ಎಂದು ಪರಿಚಯಿಸಿಕೊಂಡಿದ್ದಾನೆ. ಮನೋಹರ್‌ ಅವರ ಕುಟುಂಬದಲ್ಲಿ ಅಣ್ಣ-ತಮ್ಮರ ಜಗಳವಿದ್ದು, ಅದಕ್ಕೆ ಸಂಬಂಧಿಸಿ ಪೊಲೀಸರು ಬಂದಿರಬಹುದು ಎಂದು ರೂಪೇಶ್‌ ಭಾವಿಸಿದ್ದರು. ಅವರು ಬಾಗಿಲು ತೆರೆಯುತ್ತಿದ್ದಂತೆಯೇ ಸುಮಾರು ಐದಾರು ಮಂದಿ ಒಮ್ಮಿಂದೊಮ್ಮೆಗೆ ಮಾರಕಾಸ್ತ್ರಗಳೊಂದಿಗೆ ಮನೆಯೊಳಗೆ ನುಗ್ಗಿದ್ದರು. ಬಂದವರೇ ರೂಪೇಶ್ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ನಗದು ಲೂಟಿ ಮಾಡಿದ್ದರು. ಸುಜಾತಾ ಅವರಿಗೂ ಗಾಯಗಳಾಗಿದ್ದವು.

ದರೋಡೆಕೋರರು ಮನೆಯನ್ನು ಸಂಪೂರ್ಣವಾಗ ಜಾಲಾಡಿ 700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿದ್ದರು. ಕೃತ್ಯದ ಬಳಿಕ ಮನೆಯಲ್ಲಿನ ಸಿಸಿಟಿವಿ ಡಿವಿಆರ್‌ನ್ನು ಕೂಡಾ ಎತ್ತಿಕೊಂಡು ಹೋಗಿದ್ದರು. ಯಾವುದೇ ಸುಳಿವು ಬಿಡಬಾರದು ಎಂಬ ಅವರ ಪ್ರಯತ್ನ ಸಫಲವಾಗಿತ್ತು.

ಇದನ್ನೂ ಓದಿ: Murder Case : ಅಮ್ಮನ ಸಾವಿನ ರಹಸ್ಯ ಬಿಚ್ಚಿಟ್ಟ 6 ವರ್ಷದ ಬಾಲಕಿ!

ಆದರೆ, ಪೊಲೀಸರನ್ನು ಯಾಮಾರಿಸಲು ಸಾಧ್ಯವಾಗಿಲ್ಲ!

ದರೋಡೆಗೆ ಸಂಬಂಧಿಸಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಬಳಿಕ ನಡೆಸಿದ ತನಿಖೆಯ ವೇಳೆ ಸಿಕ್ಕಿದ ಕೆಲವು ಸುಳಿವುಗಳನ್ನು ಆಧರಿಸಿ ಈಗ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಕಳ್ಳರು ಮನೆಯ ಸಿಸಿಟಿವಿ ಫೂಟೇಜ್‌ ಗಳನ್ನು ಕದ್ದೊಯ್ದಿದ್ದಾರೆ. ಆದರೆ, ಅಕ್ಕಪಕ್ಕದ ಮನೆಯ ಸಿಸಿಟಿವಿಗಳು ಅವರ ಚಹರೆ ಮತ್ತು ಅವರು ಬಂದಿದ್ದ ವಾಹನಗಳ ಮಾಹಿತಿಯನ್ನು ಬಿಟ್ಟುಕೊಟ್ಟಿತ್ತು. ಹೀಗೆ ದರೋಡೆಕೋರರು ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.

Exit mobile version