Site icon Vistara News

Electric Shock | ಹೈಟೆನ್ಶನ್ ವೈರ್‌ ಸ್ಪರ್ಶಿಸಿ ಗಾಯಗೊಂಡಿದ್ದ ಬಾಲಕ ಚಂದ್ರು ಸಾವು

Electric Shock

ಬೆಂಗಳೂರು: ನಗರದ ನಂದಿನಿ ಲೇಔಟ್ ವಿಜಯಾನಂದ ನಗರದಲ್ಲಿ ಪಾರಿವಾಳ ಹಿಡಿಯಲು ಹೋಗಿ‌ದ್ದಾಗ ಹೈಟೆನ್ಶನ್ ವೈರ್‌ ಸ್ಪರ್ಶಿಸಿ (Electric Shock) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಚಂದ್ರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ವಿದ್ಯುತ್‌ ಅವಘಡದಲ್ಲಿ ಒಟ್ಟು ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿದ್ದರು. ಒಬ್ಬ ಬಾಲಕ ಸುಪ್ರೀತ್ ಎರಡು ದಿನಗಳ ಹಿಂದೆಯೇ ಮೃತಪಟ್ಟಿದ್ದ. ಈಗ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಚಂದ್ರು ಕೂಡ ಕೊನೆಯುಸಿರೆಳೆದಿದ್ದಾನೆ.

ಬೆಂಗಳೂರಿನ ನಂದಿನಿ ಲೇಔಟ್ ವಿಜಯಾನಂದ ನಗರದಲ್ಲಿ ಡಿ.೧ ರಂದು ಚಂದ್ರು (10) ಮತ್ತು ಸುಪ್ರೀತ್ (12) ಪಾರಿವಾಳ ಹಿಡಿಯಲು ಹೋದಾಗ ವಿದ್ಯುತ್‌ ತಂತಿ ತಗುಲಿತ್ತು. ಹೈಟೆನ್ಶನ್‌ ವೈರ್‌ ಆಗಿದ್ದರಿಂದ ಇಬ್ಬರಿಗೂ ತೀವ್ರ ಸುಟ್ಟ ಗಾಯಗಳಾಗಿದ್ದವು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ | Road accident | ಬೈಕ್‌- ಬೊಲೆರೊ ನಡುವೆ ಅಪಘಾತ: ಸವಾರ ಸ್ಥಳದಲ್ಲೇ ಸಾವು

Exit mobile version