Site icon Vistara News

Electric Vehicle: ದೇಶಾದ್ಯಂತ ಇವಿ ಚಾರ್ಜಿಂಗ್ ಸೌಲಭ್ಯ ಒದಗಿಸಲು ಶೆಲ್ ಜತೆ ಸಹಯೋಗಕ್ಕೆ ಸಹಿ ಹಾಕಿದ ಟಿಪಿಇಎಂ

TPEM has signed a collaboration with Shell to provide the best EV charging facility across the country

ಬೆಂಗಳೂರು: ಭಾರತದ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಕ್ರಾಂತಿಯ ಪ್ರವರ್ತಕರೆಂದೇ ಹೆಸರುವಾಸಿಯಾಗಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ) ಭಾರತದಾದ್ಯಂತ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಶೆಲ್ ಇಂಡಿಯಾ ಮಾರ್ಕೆಟ್ಸ್ ಪ್ರೈವೇಟ್ ಲಿಮಿಟೆಡ್ (ಎಸ್‌ಐಎಂಪಿಎಲ್) ಜತೆಗೆ ಬದ್ಧವಲ್ಲದ ತಿಳುವಳಿಕೆ ಪತ್ರ (ಮೆಮೊರಾಂಡಮ್‌ ಆಫ್ ಅಂಡರ್ ಸ್ಟ್ಯಾಂಡಿಂಗ್ -ಎಂಓಯು) ಕ್ಕೆ ಸಹಿ (Electric Vehicle) ಹಾಕಿದೆ.

ಈ ಸಹಯೋಗವು ಭಾರತದ ರಸ್ತೆಗಳಲ್ಲಿ 1.4 ಲಕ್ಷ ಟಾಟಾ ಇವಿಗಳನ್ನು ಹೊಂದಿರುವ ಟಿಪಿಇಎಂನ ಒಳನೋಟಗಳನ್ನು ಬಳಸಿಕೊಂಡು ಟಾಟಾ ಇವಿ ಮಾಲೀಕರು ಆಗಾಗ್ಗೆ ಭೇಟಿ ಕೊಡುವ ಸ್ಥಳಗಳಲ್ಲಿ ಚಾರ್ಜರ್‌ಗಳನ್ನು ಸ್ಥಾಪಿಸಲು ಶೆಲ್‌ನ ವ್ಯಾಪಕವಾದ ಇಂಧನ ಕೇಂದ್ರ ಜಾಲವನ್ನು ಬಳಸಿಕೊಳ್ಳಲಿದೆ. ಹೆಚ್ಚುವರಿಯಾಗಿ, ಈ ಎರಡೂ ಕಂಪನಿಗಳು ಅತ್ಯುನ್ನತ ಚಾರ್ಜಿಂಗ್ ಅನುಭವಗಳನ್ನು ಒದಗಿಸಲು ಜಂಟಿಯಾಗಿ ಕೆಲಸ ಮಾಡಲಿವೆ.

ಇದನ್ನೂ ಓದಿ: Kodagu News: ಕಾವೇರಿ ತವರು ಕೊಡಗಿನಲ್ಲಿ ವರುಣನ ಕೃಪೆಗಾಗಿ ದೇವರ ಮೊರೆ ಹೋದ ಜನತೆ

ಭಾರತದಾದ್ಯಂತ ಇರುವ ಇವಿ ಮಾಲೀಕರ ಚಾರ್ಜಿಂಗ್ ಸೌಲಭ್ಯ ಸುಧಾರಣೆ ಮಾಡಲು ನಡೆದಿರುವ ಟಿಪಿಇಎಂ ಮತ್ತು ಶೆಲ್ ಇಂಡಿಯಾ ಮಾರ್ಕೆಟ್ಸ್ ಪ್ರೈವೇಟ್ ಲಿಮಿಟೆಡ್ (ಎಸ್ಐಎಂಪಿಎಲ್) ನಡುವಿನ ಈ ಒಪ್ಪಂದವು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಜನರಿಗೆ ಪ್ರೇರೇಪಣೆ ನೀಡಲಿದೆ. ಈ ಎರಡೂ ಕಂಪನಿಗಳು ಅನುಕೂಲಕರ ಪಾವತಿ ವ್ಯವಸ್ಥೆಗಳು ಮತ್ತು ಲಾಯಲ್ಟಿ ಕಾರ್ಯಕ್ರಮಗಳನ್ನು ಪರಿಚಯಿಸಲು ಎದುರು ನೋಡುತ್ತಿದ್ದು, ಟಿಪಿಇಎಂನ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಲಿದೆ.

ಭಾರತದ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ವಿವಿಧ ಚಾರ್ಜ್ ಪಾಯಿಂಟ್ ಆಪರೇಟರ್‌ಗಳ ಜತೆಗೆ ಕೆಲಸ ಮಾಡುವ ಸಲುವಾಗಿ ಗುರುಗ್ರಾಮದಲ್ಲಿ ತನ್ನ ಮೊದಲ ಇವಿ- ಎಕ್ಸ್‌ಕ್ಲೂಸಿವ್ ಸ್ಟೋರಿ ಪರಿಚಯಿಸಿದೆ. ಆ ಮೂಲಕ ಟಿಪಿಇಎಂ ದೇಶದಲ್ಲಿನ ಇವಿ ಪರಿಸರ ವ್ಯವಸ್ಥೆಯ ಪ್ರಗತಿಗೆ ಕಾರಣವಾಗಿದೆ.

ಶೆಲ್ ಇವಿ ರಿಚಾರ್ಜ್ ಸ್ಥಳಗಳು 98%-99% ರಷ್ಟು ಪರಿಣಾಮಕಾರಿ ಚಾರ್ಜರ್ ಬಳಕೆ ಸೌಲಭ್ಯ ನೀಡುತ್ತಿದ್ದು, ವಿಶ್ವಾಸಾರ್ಹ ಮತ್ತು ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ಒದಗಿಸುತ್ತವೆ. ಈ ಸ್ಥಳಗಳು ತಾಜಾ ಆಹಾರ ಮತ್ತು ಪಾನೀಯ ಲಭ್ಯತೆ ಒಳಗೊಂಡಂತೆ ಅನುಕೂಲಕರ ರಿಟೇಲ್ ವ್ಯಾಪಾರ ವ್ಯವಸ್ಥೆಯನ್ನೂ ಒದಗಿಸುತ್ತದೆ. ಈ ಎಲ್ಲಾ ಅಂಶಗಳು ಒಟ್ಟಾರೆಯಾಗಿ ಗ್ರಾಹಕರ ಅನುಭವವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಅನುಕೂಲತೆಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Candidates Chess: ಪ್ರಜ್ಞಾನಂದ, ವಿದಿತ್​ಗೆ ಗೆಲುವು; ವೈಶಾಲಿ, ಹಂಪಿಗೆ ಸೋಲು

ಈ ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಬಾಲಾಜೆ ರಾಜನ್, “ಭಾರತದ ಇವಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮುಕ್ತ ಸಹಯೋಗ ಹೊಂದುವ ನಮ್ಮ ಪ್ರಯತ್ನದ ಭಾಗವಾಗಿ ಶೆಲ್ ಜತೆ ಪಾಲುದಾರಿಕೆ ಹೊಂದಲು ನಾವು ಉತ್ಸುಕರಾಗಿದ್ದೇವೆ. ಈ ಪಾಲುದಾರಿಕೆಯ ಮೂಲಕ ಈಗಾಗಲೇ ಅಸ್ತಿತ್ವದಲ್ಲಿರುವ ಚಾರ್ಜಿಂಗ್ ಮೂಲಸೌಕರ್ಯವನ್ನು ಬೆಳೆಸುವ ಗುರಿಯನ್ನು ಹೊಂದಿದ್ದೇವೆ. ಇದು ದೇಶದಲ್ಲಿ ಇವಿ ಬಳಕೆಯನ್ನುಹೆಚ್ಚಿಸಲಿದೆ ಮತ್ತು ವಿಶೇಷವಾಗಿ ಗ್ರಾಹಕರ ನೆಲೆಯು ವಿಸ್ತಾರಗೊಳ್ಳಲು ನೆರವಾಗಲಿದೆ. ಟಿಪಿಇಎಂನ ಇವಿ ಬಳಕೆಯ ಆಳವಾದ ತಿಳುವಳಿಕೆ ಮತ್ತು ಶೆಲ್‌ನ ಗ್ರಾಹಕ ಸೌಕರ್ಯದ ಆಧಾರದ ಮೇಲೆ ನಡೆದ ಈ ಸಹಯೋಗವು ಖಂಡಿತವಾಗಿಯೂ ಭಾರತದ ಚಾರ್ಜಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತದೆ ಮತ್ತು ದೇಶದಲ್ಲಿ ಇವಿ ಅಳವಡಿಕೆಯನ್ನು ಹೆಚ್ಚಿಸಲಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Jasprit Bumrah: 5 ವಿಕೆಟ್​ ಕಿತ್ತು ಆರ್​ಸಿಬಿ ವಿರುದ್ಧ ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

ಈ ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿರುವ ಶೆಲ್ ಇಂಡಿಯಾ ಮಾರ್ಕೆಟ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸಂಜಯ್ ವರ್ಕಿ, “ಅನುಕೂಲತೆ, ಸುರಕ್ಷತೆ ಮತ್ತು ಸುಸ್ಥಿರತೆಗೆ ಆದ್ಯತೆ ನೀಡುವ ಸಮಗ್ರ ಪರಿಹಾರೋತ್ಪನ್ನಗಳನ್ನು ಒದಗಿಸುವ ಮೂಲಕ ಇವಿ ಚಾರ್ಜಿಂಗ್ ಅನುಭವವನ್ನು ಹೆಚ್ಚಿಸಲು ಶೆಲ್ ಬದ್ಧವಾಗಿದೆ. ನಮ್ಮ ಅಲ್ಟ್ರಾ-ಫಾಸ್ಟ್ ಮತ್ತು ವಿಶ್ವಾಸಾರ್ಹ ಚಾರ್ಜರ್‌ಗಳ ಮೂಲಕ 100% ಪ್ರಮಾಣೀಕೃತ ನವೀಕರಿಸಬಹುದಾದ ಮೂಲಗಳನ್ನು ಬಳಸುವ ನಮ್ಮ ಬದ್ಧತೆಯಿಂದಾಗಿ ನಮ್ಮ ಗ್ರಾಹಕರು ಸುಸ್ಥಿರ, ತೊಂದರೆ ಮುಕ್ತ ಮತ್ತು ಪರಿಣಾಮಕಾರಿ ಚಾರ್ಜಿಂಗ್ ಅನುಭವ ಪಡೆಯಲಿದ್ದಾರೆ. ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ ಜತೆಗಿನ ನಮ್ಮ ಪಾಲುದಾರಿಕೆಯು ಡಿಜಿಟಲ್ ಏಕೀಕರಣ ಮತ್ತು ಗ್ರಾಹಕ-ಕೇಂದ್ರಿತ ಉಪಕ್ರಮಗಳ ಮೂಲಕ ದೇಶದಲ್ಲಿನ ಎಲೆಕ್ಟ್ರಿಕ್ ವಾಹನಗಳ ವ್ಯಾಪಕ ಅಳವಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ” ಎಂದು ತಿಳಿಸಿದ್ದಾರೆ.

Exit mobile version