Candidates Chess: ಪ್ರಜ್ಞಾನಂದ, ವಿದಿತ್​ಗೆ ಗೆಲುವು; ವೈಶಾಲಿ, ಹಂಪಿಗೆ ಸೋಲು - Vistara News

ಕ್ರೀಡೆ

Candidates Chess: ಪ್ರಜ್ಞಾನಂದ, ವಿದಿತ್​ಗೆ ಗೆಲುವು; ವೈಶಾಲಿ, ಹಂಪಿಗೆ ಸೋಲು

Candidates Chess: ಪಜ್ಞಾನಂದ ಅವರು ಆರನೇ ಸುತ್ತಿನ ಪಂದ್ಯದಲ್ಲಿ ಅಜರ್‌ಬೈಜಾನ್‌ನ ನಿಜತ್‌ ಅಬಸೋವ್‌ ಅವರನ್ನು 45 ನಡೆಗಳಲ್ಲಿ ಮಣಿಸಿದರೆ, ಗುಜರಾತಿ ಅವರು ಬಿಳಿ ಕಾಯಿಗಳಲ್ಲಿ ಆಡಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರನ್ನು 40 ನಡೆಗಳಲ್ಲಿ ಸೋಲಿಸಿದರು.

VISTARANEWS.COM


on

Candidates Chess
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟೊರಾಂಟೊ: ಇಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌(Candidates Chess) ಟೂರ್ನಿಯಲ್ಲಿ ಭಾರತದ ಪಾಲಿಗೆ ಉತ್ತಮ ಫಲಿತಾಂಶ ಕಂಡುಬಂದಿದೆ. ಆರನೇ ಸುತ್ತಿನ ಸ್ಪರ್ಧೆಯಲ್ಲಿ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆರ್‌.ಪ್ರಜ್ಞಾನಂದ(R Praggnanandhaa) ಮತ್ತು ವಿದಿತ್ ಎಸ್‌.ಗುಜರಾತಿ(Vidit Gujrathi) ಗೆಲುವು ಸಾಧಿಸಿದ್ದಾರೆ. ಇನ್ನೊಂದೆಡೆ ಭಾರತದ ಇನ್ನೊಬ್ಬ ಆಟಗಾರ ಡಿ.ಗುಕೇಶ್ ಅಮೆರಿಕದ ಹಿಕಾರು ನಕಾಮುರಾ ಜತೆ ಡ್ರಾ ಸಾಧಿಸಿ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪಜ್ಞಾನಂದ ಅವರು ಆರನೇ ಸುತ್ತಿನ ಪಂದ್ಯದಲ್ಲಿ ಅಜರ್‌ಬೈಜಾನ್‌ನ ನಿಜತ್‌ ಅಬಸೋವ್‌ ಅವರನ್ನು 45 ನಡೆಗಳಲ್ಲಿ ಮಣಿಸಿದರೆ, ಗುಜರಾತಿ ಅವರು ಬಿಳಿ ಕಾಯಿಗಳಲ್ಲಿ ಆಡಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಅವರನ್ನು 40 ನಡೆಗಳಲ್ಲಿ ಸೋಲಿಸಿದರು. ಗುಜರಾತಿ ಎರಡು ಸುತ್ತುಗಳಲ್ಲಿ ಹಿನ್ನಡೆ ಕಂಡರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ಪಂದ್ಯದಲ್ಲಿ ಹಿಡಿತ ಸಾಧಿಸಿದರು.

ಓಪನ್ ವಿಭಾಗದಲ್ಲಿ 17 ವರ್ಷದ ಗುಕೇಶ್ ಮತ್ತು ಇಯಾನ್‌ ನೆಪೊಮ್‌ನಿಯಾಚಿ ಅವರು ತಲಾ ನಾಲ್ಕು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಫಿಡೆ ಧ್ವಜದಡಿಯಲ್ಲಿ ಆಡುತ್ತಿರುವ ರಷ್ಯಾದ ನೆಪೋಮ್ನಿಯಾಚಿ, ಅಗ್ರ ಶ್ರೇಯಾಂಕದ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರೊಂದಿಗೆ ಡ್ರಾ ಸಾಧಿಸಿದರು.

ಇದನ್ನೂ ಓದಿ Vidit Gujrathi: ಮ್ಯಾಗ್ನಸ್‌ ಕಾರ್ಲ್‌ಸನ್​ಗೆ ಆಘಾತವಿಕ್ಕಿದ ವಿದಿತ್ ಗುಜರಾತಿ

ಮಹಿಳೆಯರ ವುಭಾಗದ ಸ್ಪರ್ಧೆಯಲ್ಲಿ ಆರ್. ವೈಶಾಲಿ ಅವರು ರಷ್ಯಾದ ಕಟೆರಿನಾ ಲಗ್ನೊ ವಿರುದ್ಧ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿದರು. ಪ್ರಗ್ನಾನಂದ ಅವರ ಹಿರಿಯ ಸಹೋದರಿಯಾಗಿರುವ ವೈಶಾಲಿ ಮುಂದಿನ ಪಂದ್ಯದಲ್ಲಿ ಗೆಲುವು ಸಅಧಿಸಿದರೆ ಮತ್ತೆ ಕಮ್​ ಬ್ಯಾಕ್​ ಮಾಡಬಹುದು. ಕೊನೇರು ಹಂಪಿ ಚೀನಾದ ಟಿಂಗ್ಜಿ ಲೀ ವಿರುದ್ಧ ಸೋತರು. ವನಿತೆಯರ ವಿಭಾಗದ ಇನ್ನೆರಡು ಪಂದ್ಯಗಳಲ್ಲಿ ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ, ಬಲ್ಗೇರಿಯಾದ ನುರ್ಗ್ಯುಲ್ ಸಲಿಮೋನಾ ಅವರನ್ನು, ಚೀನಾದ ಝೊಂಗ್‌ವಿ ತಾನ್, ಉಕ್ರೇನ್‌ನ ಅನ್ನಾ ಮುಝಿಚುಕ್ ಅವರನ್ನು ಮಣಿಸಿದರು.

ಕರುವಾನಾ ಮತ್ತು ಪ್ರಜ್ಞಾನಂದ ತಲಾ 3.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಎರಡನೇ ಶ್ರೇಯಾಂಕದ ಹಿಕಾರು ನಕಾಮುರಾ ಮತ್ತು ವಿದಿತ್‌ ಗುಜರಾತಿ ತಲಾ ಮೂರು ಪಾಯಿಂಟ್ಸ್ ಶೇಖರಿಸಿದ್ದಾರೆ. ಅಬಸೋವ್ ಮತ್ತು ಅಲಿರೇಝಾ (ತಲಾ 1.5) ಕೊನೆಯ ಸ್ಥಾನದಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Kane Williamson: ನಾಯಕತ್ವದಿಂದ ಕೆಳಗಿಳಿದ ಕೇನ್​ ವಿಲಿಯಮ್ಸನ್

Kane Williamson: “ವಿಲಿಯಮ್ಸನ್ ಅವರು ಕೇಂದ್ರ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದ ಮಾತ್ರಕ್ಕೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂದರ್ಥವಲ್ಲ ಭವಿಷ್ಯದಲ್ಲಿ ಅವರು ಮತ್ತೆ ಕೇಂದ್ರ ಒಪ್ಪಂದವನ್ನು ಸ್ವೀಕರಿಸಲು ಸಿದ್ಧರಿದ್ದಾರೆ” ಎಂದು ಕ್ರಿಕೆಟ್​ ಮಂಡಳಿ ತಿಳಿಸಿದೆ.

VISTARANEWS.COM


on

Kane Williamson
Koo

ವೆಲ್ಲಿಂಗ್ಟನ್​: ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ(T20 World Cup 2024) ನ್ಯೂಜಿಲ್ಯಾಂಡ್​ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿ ಲೀಗ್​ ಹಂತದಿಂದಲೇ ಹೊರ ಬಿದ್ದಿತ್ತು. ಈ ಸೋಲಿನಿಂದ ಹತಾಶರಾದ ಕೇನ್​ ವಿಲಿಯಮ್ಸನ್(Kane Williamson)​ ಅವರು ನಾಯಕ್ವದಿಂದ ಕೆಳಗಿಳಿದಿದ್ದಾರೆ. ಜತೆಗೆ 2024-25 ಋತುವಿಗಾಗಿ ಮಂಡಳಿಯಿಂದ ಕೇಂದ್ರೀಯ ಒಪ್ಪಂದವನ್ನು ನಿರಾಕರಿಸಿದ್ದಾರೆ. ನ್ಯೂಜಿಲ್ಯಾಂಡ್​ ಕ್ರಿಕೆಟ್ ಮಂಡಳಿಯು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಲಿಯಮ್ಸನ್ ತೆಗೆದುಕೊಂಡ ನಿರ್ಧಾರವನ್ನು ಪ್ರಕಟಿಸಿದೆ. ನಾಯಕತ್ವದಿಂದ ಕೆಳಗಿಳಿದರೂ ಕೂಡ ತಂಡದ ಪರ ಕೆಲ ಕಾಲ ಆಡುವುದಾಗಿ ವಿಲಿಯಮ್ಸನ್​ ಖಚಿತಪಡಿಸಿದ್ದಾರೆ.

33 ವರ್ಷದ ಕೇನ್​ ವಿಲಿಯಮ್ಸನ್​ ಈ ಬೇಸಿಗೆಯಲ್ಲಿ ಒಂದು ವಿಶ್ರಾಂತಿ ಪಡೆಯಲು ಬಯಸಿದ್ದಾರೆ. 2024-25ರ ಸಾಲಿನಲ್ಲಿ ನ್ಯೂಜಿಲ್ಯಾಂಡ್​ ತಂಡ ಕಡಿಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತದೆ. ಇದೇ ಕಾರಣದಿಂದ ಅವರು ಮೂರು ಮಾದರಿ ಕ್ರಿಕೆಟ್​ನ ಕೇಂದ್ರೀಯ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದು ನ್ಯೂಜಿಲ್ಯಾಂಡ್​ ಕ್ರಿಕೆಟ್ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

“ವಿಲಿಯಮ್ಸನ್ ಅವರು ಕೇಂದ್ರ ಒಪ್ಪಂದವನ್ನು ನಿರಾಕರಿಸಿದ್ದಾರೆ ಎಂದ ಮಾತ್ರಕ್ಕೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂದರ್ಥವಲ್ಲ ಭವಿಷ್ಯದಲ್ಲಿ ಅವರು ಮತ್ತೆ ಕೇಂದ್ರ ಒಪ್ಪಂದವನ್ನು ಸ್ವೀಕರಿಸಲು ಸಿದ್ಧರಿದ್ದಾರೆ” ಎಂದು ಕ್ರಿಕೆಟ್​ ಮಂಡಳಿ ತಿಳಿಸಿದೆ.

ಇದನ್ನೂ ಓದಿ USA vs SA: ಇಂದು ದಕ್ಷಿಣ ಆಫ್ರಿಕಾ-ಅಮೆರಿಕ ನಡುವೆ ಸೂಪರ್​-8 ಕದನ

“ಕ್ರಿಕೆಟ್‌ ಹೊರಗಿನ ನನ್ನ ಜೀವನವು ಬದಲಾಗಿದೆ. ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ಮತ್ತು ಮನೆಯಲ್ಲಿ ಅಥವಾ ವಿದೇಶದಲ್ಲಿ ಅವರೊಂದಿಗೆ ಅನುಭವಗಳನ್ನು ಆನಂದಿಸುವುದು ನನಗೆ ಇನ್ನೂ ಹೆಚ್ಚು ಮುಖ್ಯವಾದ ವಿಷಯವಾಗಿದೆ” ಎಂದು ಹೇಳುವ ಮೂಲಕ ಕೇನ್​ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಕೇನ್​ ವಿಲಿಯಮ್ಸನ್​ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್​ ತಂಡ ಚೊಚ್ಚಲ ಟೆಸ್ಟ್​ ವಿಶ್ವಕಪ್​ ಗೆದ್ದ ಸಾಧನೆ ಮಾಡಿದೆ. 2019ರಲ್ಲಿ ಏಕದಿನ ವಿಶ್ವಕಪ್​ ಫೈನಲ್​, 2023ರ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ 2016 ಮತ್ತು 2022ರ ಟಿ20 ವಿಶ್ವಕಪ್​ನಲ್ಲಿ ತಂಡ ಸೆಮಿಫೈನಲ್​ ಪ್ರವೇಶಿಸಿದ ಸಾಧನೆ ಮಾಡಿದೆ.


ವಿಲಿಯಮ್ಸನ್​ ಟೆಸ್ಟ್ ಕ್ರಿಕೆಟ್​ನಲ್ಲಿ 40 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 22 ಪಂದ್ಯಗಳನ್ನು ಗೆದ್ದಿದ್ದಾರೆ. 8 ಪಂದ್ಯ ಡ್ರಾ ಮತ್ತು 10 ಪಂದ್ಯಗಳಲ್ಲಿ ಸೋಲನುಭವಿಸಿದೆ. 91 ಏಕದಿನ ಪಂದ್ಯಗಳಲ್ಲಿ 46 ಜಯ, 40 ಸೋಲು ಕಂಡಿವೆ. ಟಿ20 ಕ್ರಿಕೆಟ್​ನಲ್ಲಿ 75 ಪಂದ್ಯಗಳಲ್ಲಿ ಮುನ್ನಡೆಸಿ 39 ಜಯ, 34 ಸೋಲು ಕಂಡಿದ್ದಾರೆ. ಒಟ್ಟಾರೆಯಾಗಿ ನ್ಯೂಜಿಲ್ಯಾಂಡ್​ ತಂಡ ಕೇನ್​ ವಿಲಿಯಮ್ಸನ್​ ನಾಯಕತ್ವದಲ್ಲಿ ಶೇ.50 ಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಗೆಲುವು ಕಂಡಿದೆ. 2019ರಲ್ಲಿ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಚೊಚ್ಚಲ ವಿಶ್ವಕಪ್​ ಗೆಲ್ಲಲಿದೆ ಎನ್ನುವಷ್ಟರಲ್ಲಿ ಅಂಪೈರ್​ ಧರ್ಮಶೇನ ನೀಡಿದ ತೀರ್ಪು ಮತ್ತು ಆ ಬಳಿಕ ಬೌಂಡರಿ ಲೆಕ್ಕಾಚಾರದ ಫಲಿತಾಂಶದಿಂದ ನ್ಯೂಜಿಲ್ಯಾಂಡ್​ ಕಪ್​ ಎತ್ತುವ ಅವಕಾಶವನ್ನು ಕಳೆದುಕೊಂಡಿತ್ತು.

Continue Reading

ಕ್ರಿಕೆಟ್

USA vs SA: ಇಂದು ದಕ್ಷಿಣ ಆಫ್ರಿಕಾ-ಅಮೆರಿಕ ನಡುವೆ ಸೂಪರ್​-8 ಕದನ

USA vs SA: ಅಮೆರಿಕ ಕ್ರಿಕೆಟ್​ ಲೋಕಕ್ಕೆ ಹೊಸ ತಂಡವಾಗಿದ್ದರೂ ಕೂಡ ಆಟಗಾರರು ಮಾತ್ರ ಹೊಸಬರಲ್ಲ. ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​ ತಂಡದ ಪರ ಆಡಿ ಈಗ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಆಟಗಾರರಿಗೆ ಕ್ರಿಕೆಟ್​ ಹೊಸತಲ್ಲ.

VISTARANEWS.COM


on

USA vs SA
Koo

ಆಂಟಿಗುವಾ: ಇಂದು ನಡೆಯುವ ಟಿ20 ವಿಶ್ವಕಪ್​ನ ಸೂಪರ್​-8 ಪಂದ್ಯದಲ್ಲಿ (T20 World Cup 2024) ದಕ್ಷಿಣ ಆಫ್ರಿಕಾ(south africa) ಮತ್ತು ಅಮೆರಿಕ(United States) ಮುಖಾಮುಖಿಯಾಗಲಿವೆ. ಟೂರ್ನಿಯ ಮೊದಲ ಸೂಪರ್​-8 ಪಂದ್ಯ ಇದಾಗಿದೆ. ಇದು ಇತ್ತಂಡಗಳ (USA vs SA) ನಡುವಣ ಮೊದಲ ಕ್ರಿಕೆಟ್​ ಮುಖಾಮುಖಿಯೂ ಹೌದು.

ಎಚ್ಚರ ಅಗತ್ಯ

ಲೀಗ್​ ಹಂತದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯ ಎನಿಸಿಕೊಂಡಿದ್ದರೂ ಕೂಡ ಅಮೆರಿಕವನ್ನು ಕಡೆಗಣಿಸುವಂತಿಲ್ಲ. ಬಲಿಷ್ಠ ಪಾಕಿಸ್ತಾನಕ್ಕೆ ನೀರು ಕುಡಿಸಿದ್ದು ಮತ್ತು ಭಾರತಕ್ಕೆ ತೀವ್ರ ಪೈಪೋಟಿ ನೀಡಿದ್ದನ್ನು ಮರೆಯುವಂತಿಲ್ಲ. ಅಮೆರಿಕ ಕ್ರಿಕೆಟ್​ ಲೋಕಕ್ಕೆ ಹೊಸ ತಂಡವಾಗಿದ್ದರೂ ಕೂಡ ಆಟಗಾರರು ಮಾತ್ರ ಹೊಸಬರಲ್ಲ. ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​ ತಂಡದ ಪರ ಆಡಿ ಈಗ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಆಟಗಾರರಿಗೆ ಕ್ರಿಕೆಟ್​ ಹೊಸತಲ್ಲ. ಎಲ್ಲರು ಉತ್ಕೃಷ್ಟ ಮಟ್ಟದ ಆಟವನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಲೀಗ್​ ಪಂದ್ಯಗಳಲ್ಲಿಯೂ ಪ್ರಯಾಸದ ಗೆಲುವು ಸಾಧಿಸಿತ್ತು. ಒಮ್ಮೆಯೂ 120 ಗಡಿ ದಾಟಿರಲಿಲ್ಲ. ಹಾಗಂತ ದಕ್ಷಿಣ ಆಫ್ರಿಕಾಗೆ ದೊಡ್ಡ ಮೊತ್ತ ಬಾರಿಸುವ ಸಾಮರ್ಥ ಇಲ್ಲವೆಂದಲ್ಲ. ಅದು ಆಡಿದ ಪಿಚ್ ನ್ಯೂಯರ್ಕ್​ನ ಅಪಾಯಕಾರಿ ನಾಸೌ ಕೌಂಟಿ ಸ್ಟೇಡಿಯಂನ ಪಿಚ್​ನಲ್ಲಿ. ಇಲ್ಲಿ ಹರಣಿ ಪಡೆ ಮಾತ್ರವಲ್ಲ ಆಡಿದ ಎಲ್ಲ ತಂಡಗಳು ಕೂಡ 120ಕ್ಕಿಂತ ಅಧಿಕ ಮೊತ್ತವನ್ನು ಬಾರಿಸಿಲ್ಲ. ಪಾಕ್​ ವಿರುದ್ಧ ಭಾರತ 119 ರನ್​ ಬಾರಿಸಿದ್ದೇ ಗರಿಷ್ಠ ಮೊತ್ತ. ಇದೀಗ ಸೂಪರ್​-8 ಪಂದ್ಯಗಳನ್ನು ವಿಂಡೀಸ್​ನಲ್ಲಿ ಆಡುತ್ತಿರುವ ಕಾರಣ ಮಾರ್ಕ್ರಮ್​ ಪಡೆ ದೊಡ್ಡ ಮೊತ್ತವನ್ನು ಪೇರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ; ಅಭ್ಯಾಸದ ವೇಳೆ ಸ್ಟಾರ್​ ಆಟಗಾರನಿಗೆ ಗಾಯ

ಲೀಗ್​ ಹಂತದ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕ್ವಿಂಟನ್​ ಡಿ ಕಾಕ್​, ನಾಯಕ ಐಡೆನ್​ ಮಾರ್ಕ್ರಮ್,​ ರೀಜಾ ಹೆಂಡ್ರಿಕ್ಸ್ ಸೂಪರ್​-8 ಪಂದ್ಯದಲ್ಲಾದರೂ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್​ ಮಿಲ್ಲರ್​ ಮತ್ತು ಹೆನ್ರಿಚ್​ ಕ್ಲಾಸೆನ್​ ಸಿಡಿದು ನಿಂತು ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ರಬಾಡ, ಜಾನ್ಸೆನ್​, ಮಹಾರಾಜ್​, ನೋರ್ಜೆ ಅವರನ್ನೊಳಗೊಂಡ ಬೌಲಿಂಗ್​ ವಿಭಾಗ ಘಾತಕವಾಗಿದೆ.

ಅಮೆರಿಕ ಪರ ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ಮೊನಾಂಕ್ ಪಟೇಲ್, ವಿಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ವಿಂಡೀಸ್​ ಪಿಚ್​ನಲ್ಲಿ ಆಡಿದ ಅನುಭವ ಅಷ್ಟಾಗಿ ಇರದ ಕಾರಣ ನಾಳಿನ ಪಂದ್ಯದಲ್ಲಿ ಹೇಗೆ ಪ್ರದರ್ಶನ ತೋರಬಹುದು ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.

ಸಂಭಾವ್ಯ ತಂಡ


ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೀ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಆನ್ರಿಚ್ ನೋರ್ಜೆ, ಒಟ್ನೀಲ್ ಬಾರ್ಟ್‌ಮನ್.

Continue Reading

ಕರ್ನಾಟಕ

Shira News: ಶಿರಾದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ; ಶಾಸಕ ಜಯಚಂದ್ರ ಪರಿಶೀಲನೆ

Shira News: ಶಿರಾ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಶಿರಾ ನಗರದ ಸಮೀಪ ಪ್ರಾರಂಭಿಸಲು ಜಮೀನು ಗುರುತಿಸಲಾಗಿದೆ ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

VISTARANEWS.COM


on

Construction of International Cricket Stadium at Shira MLA T B Jayachandra KSCA team inspection
Koo

ಶಿರಾ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಶಿರಾ (Shira News) ನಗರದ ಸಮೀಪ ಪ್ರಾರಂಭಿಸಲು ಜಮೀನು ಗುರುತಿಸಲಾಗಿದೆ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು. ನಗರದ ಶಿವಾಜಿ ನಗರ ಬಡಾವಣೆ ಸಮೀಪದಲ್ಲಿ ಮಂಗಳವಾರ ಕೆ.ಎಸ್.ಸಿ.ಎ. ಪ್ರತಿನಿಧಿಗಳಿಗೆ ಕ್ರೀಡಾಂಗಣಕ್ಕಾಗಿ ಕಾಯ್ದಿರಿಸಿದ ಜಮೀನಿನ್ನು ಪರಿಶೀಲಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Fortis Hospital: 32 ವರ್ಷದ ಮಹಿಳೆಗೆ ಯಶಸ್ವಿ ಕಿಡ್ನಿ ಕಸಿ

ಖೇಲೋ ಭಾರತ್ ಯೋಜನೆಯಡಿ ಕ್ರೀಡಾ ಗ್ರಾಮ ನಿರ್ಮಾಣಕ್ಕಾಗಿ ಭುವನಹಳ್ಳಿ, ಕಲ್ಲುಕೋಟೆ ವಿವಿಧ ಸರ್ವೆ ನಂಬರ್‌ಗಳಲ್ಲಿ 100 ಎಕರೆ ಜಮೀನಿದ್ದು, ಅಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಸಲುವಾಗಿ 20 ಎಕರೆ ನೀಡಲು ಉದ್ದೇಶಿಸಲಾಗಿದೆ. ಅಂತಯೇ ಈ ಕ್ರೀಡಾಂಗಣಕ್ಕೆ ಬರಲು 100 ಅಡಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಕೆ.ಎಸ್.ಸಿ.ಎ ಪ್ರತಿನಿಧಿ ರಘುರಾಮ್ ಭಟ್ ಮಾತನಾಡಿ, ಕ್ರೀಡಾಂಗಣ ನಿರ್ಮಿಸಲು ಈ ಸ್ಥಳ ಸೂಕ್ತವಾಗಿದೆ. ಮುಂದಿನ ವಾರದಲ್ಲಿ ಕೆ.ಎಸ್‌.ಸಿ.ಎ. ಎಂಜಿನಿಯರ್‌ಗಳ ತಂಡ ಆಗಮಿಸಿ, ವರದಿ ನೀಡಿದ ಬಳಿಕ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Banavasi News: ಹೆಬ್ಬತ್ತಿ ಗ್ರಾಮದಲ್ಲಿ ಕಾಡುಹಂದಿ ಬೇಟೆ; ಇಬ್ಬರ ಬಂಧನ

ಈ ಸಂದರ್ಭದಲ್ಲಿ ತಹಸೀಲ್ದಾರ್ ದತ್ತಾತ್ರೇಯ ಜೆ. ಗಾದ, ನಗರಸಭೆ ಅಯುಕ್ತ ರುದ್ರೇಶ್, ನಗರಸಭಾ ಸದಸ್ಯರಾದ ಬುರಾನ್ ಅಹಮದ್, ಬಿ.ಎಂ.ರಾಧಕೃಷ್ಣ, ಮುಖಂಡರಾದ ಸುಧಾಕರ್ ಗೌಡ ಸೇರಿದಂತೆ ಹಲವರು ಇದ್ದರು.

Continue Reading

ಕರ್ನಾಟಕ

Bengaluru News: ಎಲ್ಲ ಕಾಮಗಾರಿಗಳಿಗೂ ಟೆಂಡರ್‌; ಸಿದ್ದರಾಮಯ್ಯ ಸೂಚನೆ

Bengaluru News: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಇಲಾಖೆಯ ಕಾಮಗಾರಿಗಳ ಯೋಜನೆ ರೂಪಿಸಲು, ಮೇಲ್ವಿಚಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ಇಬ್ಬರು ಎಂಜಿನಿಯರುಗಳ ಸೇವೆ ಪಡೆಯುವಂತೆ ಸೂಚಿಸಿದರು. ಎಲ್ಲ ಕಾಮಗಾರಿಗಳನ್ನು ಟೆಂಡರ್‌ ಆಹ್ವಾನಿಸಿಯೇ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

VISTARANEWS.COM


on

Youth Empowerment and Sports Department Progress Review Meeting by CM Siddaramaiah
Koo

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ (Bengaluru News) ನಡೆಸಿದರು. ಹೊಸಪೇಟೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಾಗೂ 120 ತಾಲೂಕುಗಳಲ್ಲಿ ತಾಲೂಕು ಕ್ರೀಡಾಂಗಣಗಳಿಲ್ಲ. ಕಳೆದ ಐದು ವರ್ಷಗಳಲ್ಲಿ ಶೇ.95 ರಷ್ಟು ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್. ಮೂಲಕ ಮಾಡುತ್ತಿದ್ದಾರೆ. ಟೆಂಡರ್‌ ಕರೆಯದೇ ಮಾಡುತ್ತಿದ್ದಾರೆ. ಎರಡು ಕೋಟಿ ಮಿತಿಯಲ್ಲಿ ಕಾಮಗಾರಿಗಳನ್ನು ಸೀಮಿತಗೊಳಿಸಿ, ಅಪೂರ್ಣವಾಗಿರುವಂತಹ ಸ್ಥಿತಿ ಒದಗಿಸಿದೆ ಎಂದು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ತಿಳಿಸಿದರು.

ಇಲಾಖೆಯ ಕಾಮಗಾರಿಗಳ ಯೋಜನೆ ರೂಪಿಸಲು, ಮೇಲ್ವಿಚಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ಇಬ್ಬರು ಎಂಜಿನಿಯರುಗಳ ಸೇವೆ ಪಡೆಯುವಂತೆ ಸೂಚಿಸಿದರು. ಎಲ್ಲ ಕಾಮಗಾರಿಗಳನ್ನು ಟೆಂಡರ್‌ ಆಹ್ವಾನಿಸಿಯೇ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಇದನ್ನೂ ಓದಿ: Karnataka Weather : ಗುಡುಗು, ಸಿಡಿಲಿನ ಮಳೆಗೆ ಮನೆಯ ಗೋಡೆ ಕುಸಿತ; ನಾಳೆಗೂ ಇದೆ ಅಲರ್ಟ್‌

174 ಕೋಚ್‌ಗಳ ನೇಮಕಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ವೃಂದ ಮತ್ತು ನೇಮಕಾತಿ ನಿಯಮ ಅಂತಿಮಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು. 1486 ಕ್ರೀಡಾಪಟುಗಳಿಗೆ ಕ್ರೀಡಾ ಪ್ರೋತ್ಸಾಹಧನ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಬೆಂಗಳೂರಿನಲ್ಲಿ ಬಾಸ್ಕೆಟ್‌ ಬಾಲ್‌ ಹಾಗೂ ಮೈಸೂರಿನಲ್ಲಿ ಸೈಕ್ಲಿಂಗ್‌ ವೆಲೋಡ್ರೋಂ ಘೋಷಣೆ ಬಗ್ಗೆ ಭೂಮಿ ಗುರುತಿಸಲಾಗುತ್ತಿದೆ ಎಂದು ತಿಳಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಕುರಿತಂತೆ ಯಾವುದೇ ಕ್ರಮ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದರು.

ಆಯವ್ಯಯದ ಘೋಷಣೆಗಳ ಕುರಿತಂತೆ ಕೂಡಲೇ ಆದೇಶ ಹೊರಡಿಸುವಂತೆ ಸೂಚಿಸಿದರು. ಪ್ರಸಕ್ತ ಆಯವ್ಯಯದ ಘೋಷಣೆಗಳಿಗೆ ಸಂಬಂಧಿಸಿದಂತೆ ಒಂಬತ್ತು ಘೋಷಣೆಗಳ ಪೈಕಿ ಎಂಟು ಘೋಷಣೆಗಳ ಕುರಿತು ಸರ್ಕಾರಿ ಆದೇಶವಾಗಿದ್ದು, ಒಂದು ಆದೇಶ ಮುಖ್ಯಮಂತ್ರಿಯವರ ಅನುಮೋದನೆಗೆ ಕಡತ ಸಲ್ಲಿಸಲಾಗಿದೆ ಎಂದರು.

ಇದನ್ನೂ ಓದಿ: Migraine Problem: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!

ಸಭೆಯಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್‌, ಆಯುಕ್ತ ಶಶಿಕುಮಾರ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Continue Reading
Advertisement
Sunny Leone reaction about actor darshan incident
ಸ್ಯಾಂಡಲ್ ವುಡ್9 mins ago

Sunny Leone: ಬೆಂಗಳೂರಿಗೆ ಬಂದ ಸನ್ನಿ ಲಿಯೋನ್ ; ದರ್ಶನ್ ಬಗ್ಗೆ ಕೇಳಿದ್ದಕ್ಕೆ ಗರಂ ಆದ ಹಾಟ್‌ ಬೆಡಗಿ!

actor Darshan and Sumalatha Ambareesh
ಪ್ರಮುಖ ಸುದ್ದಿ15 mins ago

Actor Darshan: ʼದರ್ಶನ್‌ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ ಅಂಬರೀಶ್‌ ಏಕೀ ಗಾಢ ಮೌನ?

Shot Dead
ವಿದೇಶ18 mins ago

ಮುಂದುವರಿದ ʼಅಪರಿಚಿತರʼ ಕಾರ್ಯಾಚರಣೆ; ಭಾರತೀಯ ಸೇನಾನೆಲೆ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಹತ

Kane Williamson
ಕ್ರೀಡೆ23 mins ago

Kane Williamson: ನಾಯಕತ್ವದಿಂದ ಕೆಳಗಿಳಿದ ಕೇನ್​ ವಿಲಿಯಮ್ಸನ್

Actor Darshan Renuka Swamy murder case umapathy counter
ಸ್ಯಾಂಡಲ್ ವುಡ್38 mins ago

Actor Darshan: ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು ಎಂದು ದರ್ಶನ್‌ಗೆ ತಿರುಗೇಟು ಕೊಟ್ಟ ಉಮಾಪತಿ!

International Yoga Day 2024
ಆರೋಗ್ಯ51 mins ago

International Yoga Day 2024: ಹಿರಿಯರಿಗೆ ಸೂಕ್ತವಾದ ಯೋಗಾಸನಗಳಿವು

Lucknow Airport
ದೇಶ57 mins ago

Lucknow Airport: ವಿಮಾನ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ನಡೆಸಿದ ಮಹಿಳೆ; ಕಾರಣ ಏನು?

USA vs SA
ಕ್ರಿಕೆಟ್59 mins ago

USA vs SA: ಇಂದು ದಕ್ಷಿಣ ಆಫ್ರಿಕಾ-ಅಮೆರಿಕ ನಡುವೆ ಸೂಪರ್​-8 ಕದನ

Vastu Tips
ಧಾರ್ಮಿಕ1 hour ago

Vastu Tips: ಗಂಗಾ ಜಲ ಮನೆಯಲ್ಲಿಟ್ಟರೆ ಸಾಲದು; ಅದನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು?

actor Darshan Arrested
ಕ್ರೈಂ1 hour ago

Actor Darshan: `ನಾನೇ 30 ಲಕ್ಷ ರೂ. ಕೊಟ್ಟೆ….’ ಕೊಲೆ ಬಗ್ಗೆ ಸ್ವ ಇಚ್ಛೆ ಹೇಳಿಕೆ ನೀಡಿದ ದರ್ಶನ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ3 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌