Site icon Vistara News

Toll Rate | ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ; ಜುಲೈ 1ರಿಂದ ಪರಿಷ್ಕೃತ ದರ ಜಾರಿ

Electronic City

ಬೆಂಗಳೂರು: ನೀವೇನಾದರೂ ನಗರದ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಟೋಲ್‌ ಮಾರ್ಗವಾಗಿ ಪ್ರಯಾಣಿಸುವವರಾಗಿದ್ದರೆ ನಿಮಗೊಂದು ಬ್ಯಾಡ್‌ ನ್ಯೂಸ್‌ ಇಲ್ಲಿದೆ. ಈ ಮಾರ್ಗದ ಟೋಲ್‌ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಜುಲೈ 1ರಿಂದ ಹೊಸ ದರ ಜಾರಿಗೆ ಬರಲಿದೆ.

ಇದನ್ನೂ ಓದಿ | ಅವೈಜ್ಞಾನಿಕ ಟೋಲ್ ಗಳಿಂದ ಜನರ ಜೇಬಿಗೆ ಕತ್ತರಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿ ಶಾಪ

ಬರೋಬ್ಬರಿ ಶೇ.20ರಷ್ಟು ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರವೇ ರಸ್ತೆ ಬಳಕೆ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಹೊಸ ಶುಲ್ಕ ದರವು 2023ರ ಜೂನ್ 30ರವರೆಗೆ ಜಾರಿಯಲ್ಲಿ ಇರಲಿದೆ.

ಪರಿಷ್ಕೃತ ಶುಲ್ಕದ ವಿವರ ಹೀಗಿದೆ (ಜುಲೈ 1ರಿಂದ ಅನ್ವಯ)
ವಾಹನ ಒಂದು ಬದಿ- ಎರಡೂ ಬದಿ- ಮಾಸಿಕ ಪಾಸ್‌
ದ್ವಿಚಕ್ರವಾಹನ 1 ಸೈಡ್ 25 ರೂ- 2 ಸೈಡ್ 35 – ಮಾಸಿಕ ಪಾಸ್-720
ಕಾರು, ಜೀಪು, ವ್ಯಾನ್-1 ಸೈಡ್ 60- 2ಸೈಡ್ 90 – ಮಾಸಿಕ ಪಾಸ್ 1795
ಲಘುವಾಹನ, ಮಿನಿ ಬಸ್ 1 ಸೈಡ್ 85- 2 ಸೈಡ್ 125- ಮಾಸಿಕ ಪಾಸ್ 2515
ಟ್ರಕ್, ಬಸ್ 1 ಸೈಡ್ 170- 2 ಸೈಡ್- 250 ಮಾಸಿಕ ಪಾಸ್ 5030‌

ಹಣದುಬ್ಬರದ ಈ ಸಮುದಲ್ಲಿ ಟೋಲ್‌ ಶುಲ್ಕವನ್ನೂ ಹೆಚ್ಚು ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶೇ. 20ರಷ್ಟು ಟೋಲ್‌ ಶುಲ್ಕ ಹೆಚ್ಚಳ ಅತಿಯಾಯಿತು ಎಂದು ಅವರು ದೂರುತ್ತಿದ್ದಾರೆ.

ಇದನ್ನೂ ಓದಿ | ಮನೆ ಬಾಗಿಲಿಗೆ ಮೆಟ್ರೋ : ಶೀಘ್ರವೇ ಓಡಾಡಲಿದೆ ನಿಯೋ ರೈಲು

Exit mobile version