Site icon Vistara News

Encroachment | ಒತ್ತುವರಿದಾರರಿಗೆ ಶಾಕ್‌; ರೈನ್‌ ಬೋ ಡ್ರೈವ್‌ ನಿವಾಸಿಗಳಿಗೆ ಮನೆ ತೆರವು ನೋಟಿಸ್‌!

ಬೆಂಗಳೂರು: ಇಲ್ಲಿನ ರೈನ್ ಬೋ ಡ್ರೈವ್ ನಿವಾಸಿಗಳಿಗೆ ಮಳೆಯಿಂದ ಆದ ಹಾನಿಯಿಂದ ಹೊರ ಬರುವ ಮುನ್ನವೇ ಈಗ ತಹಸೀಲ್ದಾರ್‌ ಅಜೀತ್ ರೈ ನೋಟಿಸ್‌ ಕೊಟ್ಟು ಶಾಕ್‌ ಕೊಟ್ಟಿದ್ದಾರೆ. ಕಾಲುವೆ ಒತ್ತುವರಿ (Encroachment) ಜಾಗ ತೆರವುಗೊಳಿಸುವಂತೆ ರೈನ್‌ ಬೋ ಡ್ರೈವ್‌ ಲೇಔಟ್‌ ನಿವಾಸಿಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುರಿದ ಮಳೆಗೆ ಮಹದೇಪುರ ವಿಧಾನಸಭಾ ಕ್ಷೇತ್ರದ ಬಹುತೇಕ ಲೇಔಟ್‌ಗಳು ಮುಳುಗಡೆಯಾಗಿದ್ದವು. ಮಳೆ (Bengaluru Rain) ನಿಂತರೂ ಮಳೆಯಿಂದ ಅನಾಹುತ ಇಂದಿಗೂ ಕಡಿಮೆ ಆಗುತ್ತಿಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗದೇ ಇದ್ದ ಪರಿಣಾಮ ಆ ಪ್ರದೇಶಗಳು ದ್ವೀಪದಂತೆ ನಿರ್ಮಾಣವಾಗಿದ್ದವು. ರಾಜಕಾಲುವೆ ಒತ್ತುವರಿಯೇ ಇದಕ್ಕೆಲ್ಲ ಮೂಲ ಕಾರಣವೆಂದು ಆರೋಪಿಸಲಾಗಿತ್ತು.

ಈ ನಿಟ್ಟಿನಲ್ಲಿ ಸರ್ವೇ ನಡೆಸಿರುವ ಅಧಿಕಾರಿಗಳು ಕಾಲುವೆ ಜಮೀನನ್ನು ಒತ್ತುವರಿ ಮಾಡಿರುವವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಆ ಪ್ರಕಾರ ಕಾಲುವೆ ತೆರವು ಮಾಡಿ ಇಲ್ಲವೇ ನಾವು ತೆರವು ಕಾರ್ಯಾಚರಣೆಯನ್ನು ಮಾಡುತ್ತೇವೆ ಎಂದು ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ತೆರವು ಕಾರ್ಯಾಚರಣೆಯ ವೆಚ್ಚವನ್ನು ಸ್ವತಃ ಒತ್ತುವರಿದಾರರೇ ಭರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಬೆಂಗಳೂರು ಪೂರ್ವ ತಾಲೂಕಿನ ತಹಸೀಲ್ದಾರ್‌ ಅಜೀತ್‌ ರೈ ಅವರು ಸುಮಾರು 15ಕ್ಕೂ ಹೆಚ್ಚು ವಿಲ್ಲಾ ನಿವಾಸಿಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಜಿಲ್ಲಾಡಳಿತ ನಡೆಸಿದ ಸರ್ವೇಯಲ್ಲಿ ಕಾಲುವೆ ಒತ್ತುವರಿ ಮಾಡಿರುವುದು ತಿಳಿದು ಬಂದಿದೆ.

ಕಳೆದ ಏಪ್ರಿಲ್‌ನಲ್ಲಿ ನೋಟಿಸ್‌ ನೀಡಿದ್ದ ತಹಸೀಲ್ದಾರ್‌

ಈ ಹಿಂದೆಯೂ ನೋಟಿಸ್‌ ಜಾರಿ

ಜುನ್ನಸಂದ್ರದಿಂದ ಸರ್ಜಾಪುರ‌ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯಲ್ಲಿ ಕೆಲ ನಿವಾಸಿಗಳು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆಯೂ ಅಧಿಕಾರಿಗಳು ನೋಟಿಸ್‌ ನೀಡಿ ತೆರವು ಕಾರ್ಯಾಚರಣೆ ಹೋದಾಗ ನಿವಾಸಿಗಳು ಕೋರ್ಟ್‌ ಮೆಟ್ಟಿಲೇರಿದ್ದರು.

ಆ ಬಳಿಕ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್‌ ನೀಡಲಾಗಿತ್ತು. ಈಗ ಮತ್ತೊಮ್ಮೆ ತೆರವು ಮಾಡುವಂತೆ ಬೆಂಗಳೂರು ಪೂರ್ವ ತಾಲೂಕಿನ ತಹಶೀಲ್ದಾರ್ ಅಜೀತ್ ರೈ ನೋಟಿಸ್‌ ನೀಡಿದ್ದಾರೆ. ಹೀಗಾಗಿ ಒಂದೆಡೆ ಮಳೆಯಿಂದಾದ ನಷ್ಟ ಹಾಗೂ ‌ಮತ್ತೊಂದೆಡೆ ತೆರವಿನ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ | ರೈನ್‌ಬೋ ಬಡಾವಣೆಗೆ ಕಂಟಕವಾದ ರೈನ್‌, ನಿವಾಸಿಗಳು ಸ್ಥಳಾಂತರ

Exit mobile version