Site icon Vistara News

Engineers day | ಕತಾರ್‌ನಲ್ಲಿ ಕರ್ನಾಟಕ ಸಂಘದಿಂದ ಎಂಜಿನಿಯರ್‌ಗಳ ದಿನಾಚರಣೆ

Engineers day

ದೋಹಾ: ಇಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಕತಾರ್‌ನ ಕರ್ನಾಟಕ ಸಂಘದಿಂದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ 162 ನೇ ಜನ್ಮದಿನದ ಸ್ಮರಣಾರ್ಥ ಎಂಜಿನಿಯರ್‌ಗಳ ದಿನ(Engineers day) ಆಚರಿಸಲಾಯಿತು.

ಕರ್ನಾಟಕ ಸಂಘದ ಅಧ್ಯಕ್ಷ ಮಹೇಶ್ ಗೌಡ ಮಾತನಾಡಿ, ಸ್ವಾಗತ ಭಾಷಣದಲ್ಲಿ ಬಾಲ್ಯದ ದಿನಗಳಲ್ಲಿ ಸರ್ ಎಂ.ವಿ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿದ್ದು ನೆನಪಿಸಿಕೊಂಡರು ಹಾಗೂ ಸರ್ ಎಂ.ವಿ ಅವರು ಭಾರತದ ಲಕ್ಷಾಂತರ ಯುವಕರಿಗೆ ಎಂಜಿನಿಯರ್‌ಗಳಾಗಲು ಸ್ಫೂರ್ತಿ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಕರ್ನಾಟಕ ಸಂಘ ಆಯೋಜಿಸಿದ ಕಾರ್ಯಕ್ರಮಕ್ಕೆ ಹಾಜರಾಗಿ ಹಾಗೂ ಬೆಂಬಲಿಸಿದ ಎಲ್ಲಾ ಸಭಿಕರಿಗೆ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ | Mysore Dasara | ದಸರಾ ಮಹೋತ್ಸವದ ಯುವ ಸಂಭ್ರಮಕ್ಕೆ ಚಾಲನೆ ಕೊಟ್ಟ ನಟ ಧನಂಜಯ್‌

ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಪಿ.ಎನ್.ಬಾಬುರಾಜನ್ ಮಾತನಾಡಿ, ಕರ್ನಾಟಕ ಸಂಘ ಕತಾರ್ ಎಂಜಿನಿಯರ್‌ಗಳ ದಿನಾಚರಣೆಯನ್ನು ಆಚರಿಸುತ್ತಿರುವುದನ್ನು ಶ್ಲಾಘಿಸಿ, ಮುಂದಿನ ವರ್ಷ ಈ ಆಚರಣೆಯನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ಎಲ್ಲ ಭಾರತೀಯ ಎಂಜಿನಿಯರ್‌ಗಳು ಮತ್ತು ಅಂಗಸಂಸ್ಥೆಗಳನ್ನು ಆಹ್ವಾನಿಸುವ ಮೂಲಕ ದೊಡ್ಡ ಮಟ್ಟದಲ್ಲಿ ನಡೆಸಬೇಕೆಂದು ವಿನಂತಿಸಿದರು.

ಗೌರವ ಅತಿಥಿ ಅಮೀರ್ ಮಾತನಾಡಿ, ಎಂಜಿನಿಯರಿಂಗ್ ವಿಕಾಸ ಮತ್ತು ಅವರು ಎಂಜಿನಿಯರ್ ಆಗಲು ಅವರಿಗೆ ಸಿಕ್ಕ ಪ್ರೇರಣೆಯ ಕುರಿತ ಮಾಹಿತಿ ನೀಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಗೌರವಾನ್ವಿತ ಅತಿಥಿಗಳು ಮತ್ತು ತಾಂತ್ರಿಕ ಭಾಷಣಕಾರರಿಗೆ ಸ್ಮರಣಿಕೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಪ್ರಮುಖ ಅಂಗವಾಗಿ ಎಂಜಿನಿಯರ್ ಹೇಮಚಂದ್ರನ್ ಅವರು “ತಂತ್ರಜ್ಞಾನ ಹಾಗೂ ಅದರಿಂದ ಜೀವನಶೈಲಿಗಳ ಮೇಲೆ ಪರಿಣಾಮ”, ಕಿಶೋರ್ ಶ್ರೀವೆಂಕಟೇಶ್ ಅವರು “ವಿದ್ಯುತ್ ಉತ್ಪಾದನೆ ಹಾಗೂ ಅದರ ಪ್ರಯೋಜನ” ಮತ್ತು ಪ್ರದೀಪ್ ಕುಮಾರ್ ದಿಲೀಪ್ ಅವರು “ವೈಮಾನಿಕ ಕ್ಷೇತ್ರದಲ್ಲಿ ಡ್ರೋನ್ ಗಳ ಬಳಕೆ” ವಿಷಯಗಳ ಬಗ್ಗೆ ತಾಂತ್ರಿಕ ಮಾಹಿತಿಗಳನ್ನು ಸಭೆಗೆ ನೀಡಿದರು.

ಕಾರ್ಯಕ್ರಮವನ್ನು ಕರ್ನಾಟಕ ಸಂಘ ಕತಾರ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ದಿಲೀಪ್ ನಿರ್ವಹಿಸಿದರು ಮತ್ತು ವಂದನಾರ್ಪಣೆಯನ್ನು ಕರ್ನಾಟಕ ಸಂಘ ಕತಾರ್‌ನ ಕೋಶಾಧಿಕಾರಿ ರಮೇಶ ಅವರು ನಡೆಸಿಕೊಟ್ಟರು.

ಗೌರವ ಅತಿಥಿಗಳಾಗಿ ಎಂಜಿನಿಯರ್ ಎಂ.ಜಿ. ಅಮೀರ್ ಫರೋಖ್‌ಜಾದ್, ಕತಾರ್ ಕೆಮಿಕಲ್ ಲಿಮಿಟೆಡ್‌ನ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಎಂಜಿಜಿನಿಯರ್ ಮೊಹಮ್ಮದ್ ಅಲ್-ಜೌಬಿ, ಪ್ರಾಜೆಕ್ಟ್ ಎಂಜಿನಿಯರ್, ಕತಾರ್ ಕೆಮಿಕಲ್ ಲಿಮಿಟೆಡ್. ಪ್ರಧಾನ ಟೆಕ್ನಿಕಲ್ ಕೀನೋಟ್ ಸ್ಪೀಕರ್ ಎಂಜಿನಿಯರ್ ಹೇಮಚಂದ್ರನ್, ಸೀನಿಯರ್ ಜನರಲ್ ಮ್ಯಾನೇಜ್ ಇನ್ಫ್ರಾಸ್ಟ್ರಕ್ಚರ್ ಮತ್ತು ಫೆಸಿಲಿಟಿ ಮ್ಯಾನೇಜ್‌ಮೆಂಟ್, ಗಲ್ಫಾರ್ ಅಲ್ ಮಿಶಾದ್. ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಕತಾರ್‌ನ ಸಲಹಾ ಮಂಡಳಿಯ ಸದಸ್ಯರು ಮತ್ತು ಕರ್ನಾಟಕ ಸಂಘ ಕತಾರ್‌ನ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ | Modi Birthday | ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತ 15 ದಿನಗಳ ಕಾಲ ಆರೋಗ್ಯ ರಕ್ಷಣೆ ವಿಶೇಷ ಅಭಿಯಾನ

Exit mobile version