ಬೆಂಗಳೂರು: ಈ ವರ್ಷ ಡಿಸೆಂಬರ್ ವೇಳೆಗೆ ವೈಟ್‌ಫೀಲ್ಡ್‌ಗೆ ನಮ್ಮ ಮೆಟ್ರೊ ರೈಲು ಸಂಚಾರ ವಿಸ್ತರಣೆಯಾಗಲಿದೆ ಎಂದು ಸರ್ಕಾರ ತಿಳಿಸಿದೆ.
ರಷ್ಯಾ-ಉಕ್ರೇನ್ ಸಂಘರ್ಷದ ಪರಿಣಾಮ ಉತ್ತಮ ಗುಣಮಟ್ಟದ ಉಕ್ಕಿಗೆ ಕೊರತೆ ಉಂಟಾಗಿತ್ತು. ಹೀಗಾಗಿ ಯೋಜನೆ ವಿಳಂಬವಾಗಿತ್ತು. ಆದರೆ ಸೆಪ್ಟೆಂಬರ್ ವೇಳೆಗೆ ವೈಟ್‌ಫೀಲ್ಡಿಗೆ ಮೆಟ್ರೊ ಪ್ರಾಯೋಗಿಕ ಸಂಚಾರ ನಡೆಯಲಿದೆ.
ಹೀಗಾಗಿ ಡಿಸೆಂಬರ್ ವೇಳೆಗೆ ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿದೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ೧೫.೨೫ ಕಿ.ಮೀ ತನಕ ಮೆಟ್ರೊ ರೈಲು ವಿಸ್ತರಣೆಯಾಗುತ್ತಿದೆ.
ನಗರದ ಪ್ರತಿಷ್ಠಿತ ವೈಟ್‌ಫೀಲ್ಡ್ ವಲಯದಲ್ಲಿ ಹಲವಾರು ಐಟಿ ಕಂಪನಿಗಳು ಇದ್ದು, ಇಲ್ಲಿನ ಜನತೆಗೆ ಮತ್ತು ಉದ್ಯೋಗಿಗಳಿಗೆ ಮೆಟ್ರೊ ಸೇವೆ ಸಹಕಾರಿಯಾಗಲಿದೆ. ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಪ್ರಕಾರ ೩ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಅನುಕೂಲವಾಗಲಿದೆ.