ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಮತ್ತೊಮ್ಮೆ ದಿನಾಂಕ ವಿಸ್ತರಿಸಿದೆ. ಅನುತ್ತೀರ್ಣರಾದ ಹಾಗೂ ಪುನರಾವರ್ತಿತ ಅಭ್ಯರ್ಥಿಗಳಿಗೆ ಜೂನ್ 27ರಿಂದ ಜುಲೈ 04ರವರೆಗೆ ಪರೀಕ್ಷೆ ನಡೆಯಲಿದೆ. ಫೋಷಕರು ಹಾಗೂ ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಇದೀಗ ಮಂಡಳಿಯು ಪರೀಕ್ಷಾ ನೋಂದಣಿಗೆ ದಿನಾಂಕ ವಿಸ್ತರಿಸಿದ್ದು ಜೂನ್ 9 (ಗುರುವಾರ) ಕೊನೆಯ ದಿನವಾಗಿದೆ.
ಈಗಾಗಲೇ ಎರಡು ಬಾರಿ ನೋಂದಣಿ ದಿನಾಂಕ ವಿಸ್ತರಿಸಲಾಗಿದ್ದು, ಮತ್ತೊಮ್ಮೆ ಗಡುವು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದ ಸ್ಪಷ್ಟಪಡಿಸಿರುವ ಮಂಡಳಿ, ಒಂದು ವೇಳೆ ಯಾವುದಾದರೂ ವಿದ್ಯಾರ್ಥಿಗೆ ನೋಂದಣಿಗೆ ತೊಂದರೆಯಾದಲ್ಲಿ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರೇ ಹೊಣೆಗಾರರಾಗುತ್ತಾರೆ ಎಂದು ತಿಳಿಸಿದೆ. ಆಸಕ್ತರು https://sslc.karnataka.gov.in ಜಾಲತಾಣದ ಮೂಲಕ ನೋಂದಣಿ ಮಾಡಬಹುದಾಗಿದೆ.
ಕ್ರಮ ಸಂಖ್ಯೆ | ವಿವರ | ವಿಸ್ತರಣೆ ಮಾಡಿದ ಅಂತಿಮ ದಿನಾಂಕ |
1 | ಮಂಡಳಿ ಜಾಲತಾಣದ ಶಾಲಾಲಾಗಿನ್ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಲು ನಿಗದಿಪಡಿಸಿದ ಅಂತಿಮ ದಿನಾಂಕ | 09.06.2022 |
2 | ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಈ ಹಿಂದಿನ ಸಾಲಿನಂತೆ ಭೌತಿಕವಾಗಿ ಮಂಡಳಿಯ ನೆಫ್ಟ್ ಚಲನ್ ಮೂಲಕ ಬ್ಯಾಂಕ್‌ಗೆ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ : | 10.06.2022 |
3 | ದಿನಾಂಕ : 08.00 2022 ಮತ್ತು 09.06.2022 ರಂದು ನೋಂದಾಯಿಸಿದ ವಿದ್ಯಾರ್ಥಿಗಳ ಮಾಹಿತಿಯ ನಾಮಿನಲ್‌ರೋಲ್ , ಎಂ.ಎಸ್.ಎ ಮತ್ತು ಬ್ಯಾಂಕ್ ಚಲನ್‌ನೊಂದಿಗೆ ಭೌತಿಕವಾಗಿ ಮಂಡಳಿಗೆ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ : | 14.06.2022 |
ಇದನ್ನೂ ಓದಿ: ಭಿಕ್ಷೆ ಬೇಡುತ್ತಿದ್ದ ಅನಾಥ ಬಾಲಕಿಗೆ SSLCಯಲ್ಲಿ 96% ಅಂಕ