ಬೆಂಗಳೂರು: ಆನ್‌ಲೈನ್ ಮೂಲಕ ಹಣ ದೋಚುವ ದಂಧೆ ಸರ್ವೇಸಾಮಾನ್ಯವಾಗಿದೆ. ಇದೀಗ ಫೇಸ್‌ಬುಕ್‌ನಲ್ಲಿ (Facebook Cheating ) ಕೂಡ ಚಾಟಿಂಗ್ ಮೂಲಕ ಹಣ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದೀಗ ಫಾರಿನ್ ಲೇಡಿ ಜತೆ ಯುವಕ ಚಾಟಿಂಗ್ ಮಾಡಿ ಹಣ ಕಳೆದುಕೊಂಡಿದ್ದಾನೆ. ಫಾರಿನ್ ಲೇಡಿ ಹಣ ಹಾಕಿಸಿಕೊಂಡು ಯುವಕನಿಗೆ ಚೀಟಿಂಗ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವಕ ಮತ್ತು ಫಾರಿನ್ ಲೇಡಿ ಮಧ್ಯೆ ಹಲವು ದಿನಗಳಿಂದ ಫೇಸ್ ಬುಕ್ ಚಾಟಿಂಗ್ ನಡೆದಿತ್ತು. ಭಾರತದಲ್ಲಿ ಚಿನ್ನದಂಗಡಿ ಆರಂಭಿಸುವುದರ ಬಗ್ಗೆ ಇಂಗ್ಲೆಂಡ್ ಲೇಡಿ ನ್ಯಾನ್ಸಿ ವಿಲಿಯಮ್ ಯುವಕ ವಿನ್ಸೆಂಟ್‌ಗೆ ಐಡಿಯಾ ಕೊಟ್ಟಿದ್ದಳು.
ಇದನ್ನೂ ಓದಿ | ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಿಎ ಎಂದು ಹೇಳಿಕೊಂಡು ವಂಚನೆ !
ʼನನಗೆ ನೀನು ಹೆಲ್ಪ್ ಮಾಡು, ನೀನು ನನ್ನ ಪಾರ್ಟನರ್ ಆಗುತ್ತೀಯಾʼ ಎಂದು ಆಸೆ ತೋರಿಸಿದ್ದಳು. ಯುವಕನನ್ನು ನಂಬಿಸಲು ಮೊದಲಿಗೆ ತನ್ನ ಎಟಿಎಂ ಕಾರ್ಡ್ ಕಳಿಸಿದ್ದಳು. ಈ ಕಾರ್ಡ್ ಬಳಸಿ ಐದು ಸಾವಿರ ರೂಪಾಯಿ ಡ್ರಾ ಮಾಡಿದ್ದ. ಯುವಕನ ಕೈಗೆ ಹಣ ಬರುತ್ತಿದ್ದಂತೆ, ಫಾರಿನ್ ಲೇಡಿ, ತನ್ನ ಎಟಿಎಂ ಬ್ಲಾಕ್ ಆಗಿದೆ. ಅನ್ನು ಕ್ಲಿಯರ್ ಮಾಡಿಕೊಳ್ಳುವುದಕ್ಕೆ ಸ್ವಲ್ಪ ದುಡ್ಡು ಬೇಕು ಎಂದು ಯುವಕನಲ್ಲಿ ಕೇಳಿದ್ದಾಳೆ. ಇದನ್ನು ನಂಬಿದ ವಿನ್ಸೆಂಟ್, ಲೇಡಿ ಖಾತೆಗೆ ₹3 ಲಕ್ಷ ಹಾಕಿದ್ದ. ಇದೇ ರೀತಿ ಹಂತಹಂತವಾಗಿ ಬರೊಬ್ಬರಿ ₹25 ಲಕ್ಷ ಹಾಕಿದ್ದ.
ಹಣ ಹಾಕಿದ ನಂತರ ಹಲವು ದಿನ ಕಳೆದರೂ ಫಾರಿನ್‌ಲೇಡಿ ರಿಪ್ಲೈ ಬಾರದ ಹಿನ್ನೆಲೆಯಲ್ಲಿ ಮೋಸ ಹೋಗಿರುವುದು ಯುವಕನ ಅರಿವಿಗೆ ಬಂದಿತ್ತು. ವಿನ್ಸೆಂಟ್ ಪೂರ್ವ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಇದೀಗ ವಂಚನೆ ಮಾಡಿದ ಲೇಡಿಗಾಗಿ ಸಿಇಎನ್ ಪೊಲೀಸರು ಬಲೆ ಬೀಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ತಮ್ಮ ಆಪ್ತರಿಂದ ತುರ್ತಾಗಿ ಹಣಸ ಸಹಾಯ ಯಾಚಿಸುವಂತೆ ನಕಲಿ ಸಂದೇಶಗಳು ರವಾನೆ ಆಗುತ್ತಿವೆ. ಸಂದೇಶ ಕಳಿಸುವ ಖದೀಮರು ನಿಗದಿತ ಮೊತ್ತದ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡಿ ವಂಚನೆಗೋಳಗಾದ ಬಹುತೇಕ ಮಂದಿ ಮರ್ಯಾದೆಗೆ ಅಂಜಿ ದೂರು ನೀಡದೆ ಸುಮ್ಮನಾಗುತ್ತಿದ್ದಾರೆ.
ಇದನ್ನೂ ಓದಿ | ವಂಚನೆ ಆರೋಪದಲ್ಲಿ ಭೋವಿ ಅಭಿವೃದ್ಧಿ ನಿಗಮದ ಎಂಡಿ ಬಂಧನ