Site icon Vistara News

Fake ACP | ಲಕ್ಷಾಂತರ ರೂಪಾಯಿ ವಂಚಿಸಿದ ಪೊಲೀಸ್‌ ಇನ್ಸ್‌ಪೆಕ್ಟರ್‌ ಮಗ : ನಕಲಿ ಎಸಿಪಿ ಇದ್ದಾನೆ ಎಚ್ಚರಿಕೆ!

Fake ACP

ಬೆಂಗಳೂರು : ಎಸಿಪಿ ಎಂದುಕೊಂಡೇ ಬೆಂಗಳೂರಿನ ಬಡ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನವೀನ್‌ ಅಲಿಯಾಸ್‌ ಎಸಿಪಿ ಆರೋಪಿಯು ಬೆಂಗಳೂರಿನ ಶಂಕರಪ್ಪ ಎಂಬವರಿಗೆ ಲಕ್ಷಾಂತರ ರೂ. ವಂಚಿಸಿದ್ದಾನೆ. ಅಷ್ಟೇ ಅಲ್ಲದೇ ಆತ ಪೊಲೀಸ್ ಇನ್ಸ್‌ಪೆಕ್ಟರ್‌ ಮಗ (Fake ACP) ಎಂಬ ಭಯಾನಕ ಸತ್ಯ ಕೂಡ ಹೊರಗೆ ಬಿದ್ದಿದೆ.

ಕಾರು ಸರ್ವಿಸ್‌ಗಾಗಿ ಕೆಂಗೇರಿ ಹುಂಡೈ ಶೋ ರೂಂಗೆ ಆರೋಪಿ ಬಂದಿದ್ದ. ಹುಂಡೈ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಶಂಕರಪ್ಪ ಎಂಬವರನ್ನು ಪರಿಚಯ ಮಾಡಿಕೊಂಡಿದ್ದ. ಹೀಗೆ ಪರಿಚಯ ಮಾಡಿಕೊಂಡ ನವೀನ್‌, ತಾನು ಎಸಿಪಿ ಎಂದು ಶಂಕರಪ್ಪ ಅವರ ಬಳಿ ಪುಂಗಿದ್ದ. ಸಿಕ್ಕ ಸಿಕ್ಕ ಎಸಿಪಿಗಳ ಹೆಸರನ್ನು ಹೇಳಿ ಮೊದಲು ಬಿಲ್ಡಪ್‌ ಕೊಟ್ಟಿದ್ದ. ಕಡಿಮೆ ಹಣಕ್ಕೆ ಪ್ರಾಪರ್ಟಿ ಕೊಡಿಸುವುದಾಗಿ ಶಂಕರಪ್ಪನನ್ನು ನಂಬಿಸಿದ್ದ.

ಇದನ್ನೂ ಓದಿ | Sexual assault | ತಾನೇ ಶ್ರೀಕೃಷ್ಣ ಎಂದ ನಕಲಿ ಸ್ವಾಮಿ; 7 ವರ್ಷದಿಂದ ಯುವತಿಗೆ ಲೈಂಗಿಕ ದೌರ್ಜನ್ಯ ಆರೋಪ

ಪೊಲೀಸ್ ಇನ್ಸ್‌ಪೆಕ್ಟರ್‌ ಆಂಜನೇಯ

ಹೀಗೆ ನಾನಾ ವಿಚಾರಗಳನ್ನು ಶಂಕರಪ್ಪ ಅವರ ತಲೆಗೆ ಹಾಕಿ ಬಲೆ ಬೀಸಿ ಲಕ್ಷ ಲಕ್ಷ ಹಣವನ್ನು ಜೇಬಿಗಿಳಿಸಿಕೊಂಡಿದ್ದ. ಇದೀಗ ಫೇಕ್ ಎಸಿಪಿಯ ಹಣೆಬರಹ ಬಟಾಬಯಲಾಗಿದೆ. ಆರೋಪಿ ನವೀನ್‌ ಹಾವೇರಿ ಜಿಲ್ಲೆಯ ಆಂಜನೇಯ ಎಂಬ ಪೊಲೀಸ್ ಇನ್ಸ್‌ಪೆಕ್ಟರ್‌ ಮಗ ಎಂಬ ಸತ್ಯ ಹೊರಗೆ ಬಿದ್ದಿದೆ. ಆ ಇನ್ಸ್‌ಪೆಕ್ಟರ್‌ ನೆರವಿನಿಂದಲೇ ಮಗ ನವೀನ ನೂರಾರು ಜನರಿಗೆ ವಂಚಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ ಅಲಿಯಾಸ್‌ ಎಸಿಪಿ ನವೀನನಿಗಾಗಿ ಕೆಂಗೇರಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ | ಅಪಘಾತದಲ್ಲಿ ಬಾಲಕಿ ಸತ್ತ ಬಳಿಕ ಪತ್ತೆಯಾಯ್ತು ನಕಲಿ ನಂಬರ್ ಪ್ಲೇಟ್ ವಂಚನೆ

Exit mobile version