ಬೆಂಗಳೂರು: ಇತ್ತೀಚಿಗೆ ನಕಲಿ ಪತ್ರಕರ್ತರ ಹಾವಳಿ (Fake journalist) ಹೆಚ್ಚಾಗಿದೆ. ಈ ನಕಲಿ ಪತ್ರಕರ್ತರು ಕೈಯಲ್ಲಿ ಮೈಕ್ ಹಿಡಿದು ರೌಂಡ್ಸ್‌ಗೆ ಇಳಿದರೆ ರೋಲ್‌ಕಾಲ್ ಫಿಕ್ಸ್ ಅಂತಲೇ ಅರ್ಥ.. ಹೀಗೆ ನಗರದ ಬೇಕರಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಹುಳಿಮಾವು ಪೊಲೀಸರು ಮಹಮ್ಮದ್ ಶಫಿ ಎಂಬಾತನನ್ನು ಬಂಧನ ಮಾಡಿದ್ದಾರೆ. ಈತ ಸಂಘಟನೆಯ ಜತೆಗೆ ಒಂದು ಯೂಟ್ಯೂಬ್‌ನಲ್ಲಿ ನ್ಯೂಸ್ ಚಾನಲ್‌ವೊಂದನ್ನು ಮಾಡಿಕೊಂಡು, ಬೆದರಿಕೆ, ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿದೆ.
ಕುತ್ತಿಗೆ ಐಡಿ ಕಾರ್ಡ್, ಪ್ರಜಾಪರ ಟಿವಿ ಎಂಬ ಕೈಯಲ್ಲಿ ಲೋಗೋ ಹಾಗೂ ಮೊಬೈಲ್ ಹಿಡಿದು ಪತ್ರಕರ್ತನಾಗಿರುವ ಮಹಮ್ಮದ್ ಶಫಿ, ತನ್ನ ಅಸಿಸ್ಟೆಂಟ್ ಜತೆಗೆ ಹೊರಟರೆ ಅಂದು ರೋಲ್ ಕಾಲ್ ಫಿಕ್ಸ್ ಅಂತಲೇ ಅರ್ಥ. ಹುಳಿಮಾವು ಬಳಿ ರಮೇಶ್ ಎಂಬುವವರ ಒಡೆತನದಲ್ಲಿರುವ ಎಸ್‌ಎಲ್‌ವಿ ಬೇಕರಿಗೆ ಎಂಟ್ರಿ ಕೊಟ್ಟ ಮಹಮ್ಮದ್ ಶಫಿ ತಾನು ಪತ್ರಕರ್ತ ಎಂದು ಪ್ರಜಾಪರ ಟಿವಿಯ ಲೋಗೋ ಹಿಡಿದು ಬಂದಿದ್ದ.
ಕ್ಲೀನಿಂಗ್ ವೇಳೆ ಒಳ ನುಗ್ಗುವ ಈತ, ವಾಶ್ ಮಾಡುವ ಸಂದರ್ಭದಲ್ಲಿ ಅದನ್ನು ವಿಡಿಯೊ ಮಾಡಿಕೊಂಡಿದ್ದ. ನಂತರ ಅಲ್ಲಿದ್ದ ಸಿಬ್ಬಂದಿ ಮುಂದೆ ದರ್ಪ ಮರೆದು ಫುಡ್ ಕ್ಲೀನ್ ಇಲ್ಲ, ತಯಾರಿಸುವ ಸ್ಥಳ ಸ್ವಚ್ಚವಿಲ್ಲ ಎಂದು ಕ್ಯಾತೆ ತೆಗೆದಿದ್ದ. ಎಲ್ಲಿ ಕ್ಲೀನ್ ಮಾಡುತ್ತಾರೋ, ಕಸ ಒಟ್ಟು ಮಾಡುತ್ತಾರೋ ನಿರ್ದಿಷ್ಟವಾಗಿ ಅಲ್ಲಿಯ ವಿಡಿಯೊ ತೆಗೆಯುತ್ತಿದ್ದ. ನಂತರ ತಾನು ಪ್ರೆಸ್ ರಿಪೋರ್ಟರ್ ಈ ಸುದ್ದಿನ ಹಾಕುತ್ತಿನಿ ನಂತರ ಆಟೋಮ್ಯಾಟಿಕ್ ಆಗಿ ನಿಮ್ಮ ಲೈಸೆನ್ಸ್ ಕ್ಯಾನ್ಸಲ್ ಆಗುತ್ತೆ ಎಂದು ಭಯ ಬೀಳಿಸುತ್ತಿದ್ದ.
ನಂತರ ಸುದ್ದಿ ಹಾಕಬಾರದು ಅಂದರೆ 50 ಸಾವಿರ ಕೊಡಬೇಕು ಇಲ್ಲದಿದ್ದರೆ, ನಂಗೆ ಲೋಕಲ್ ಎಎಲ್‌ಎ , ಬಿಡಿಎ ಅಧಿಕಾರಿಗಳು , ಫುಡ್ ಆಫೀಸರ್‌ಗಳೆಲ್ಲರೂ ಗೊತ್ತು . ನೀ ಹೇಗೆ ಬೇಕರಿ ನಡಿಸ್ತಿಯಾ ನೋಡ್ತಿನಿ ಎಂದು ಧಮ್ಕಿ ಹಾಕಿದ್ದ. ಇದರಿಂದ ಹೆದರಿದ ರಮೇಶ್ ಆತನಿಗೆ ಕನ್ವಿಯೆನ್ಸ್ ಮಾಡಿ ಹತ್ತು ಸಾವಿರ ಗೂಗಲ್ ಪೇ ಮಾಡಿದ್ದ. ನಂತರ ರಮೇಶ್ ಬೇಕರಿ ಅಸೋಸಿಯೇಷನ್ ಗಮನಕ್ಕೆ ತಂದಾಗ ಸುಮಾರು ನಲವತ್ತು ಐವತ್ತು ಜನರಿಗೆ ಇದೇ ರೀತಿಯಲ್ಲಿ ಬ್ಲ್ಯಾಕ್ ಮೇಲ್ ಮಾಡಿರುವುದು ತಿಳಿದು ಬಂದಿದೆ. ಹುಳಿಮಾವು ಪೊಲೀಸರು ನಕಲಿ ಪ್ರೆಸ್ ರಿಪೋರ್ಟರ್‌ನನ್ನು ಹೆಡೆಮುರಿ ಕಟ್ಟಿ ವಿಚಾರಣೆ ನಡೆಸುತ್ತಿದ್ದಾರೆ . ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ