-ಶೀಲಾ ಸಿ. ಶೆಟ್ಟ, ಬೆಂಗಳೂರು
ಅಸೆಮ್ಮಿಟ್ರಿಕಲ್ ಉಡುಪುಗಳು ಫ್ಯಾಷನ್ ಲೋಕದಲ್ಲಿ ಹಂಗಾಮಾ (Fashion Trend) ಎಬ್ಬಿಸಿವೆ. ನಾನಾ ಡಿಸೈನ್‌ಗಳಲ್ಲಿ ಯುವತಿಯರನ್ನು ಸೆಳೆದಿವೆ.
ಏನಿದು ಅಸೆಮ್ಮಿಟ್ರಿಕಲ್ ಡ್ರೆಸ್?
ನೋಡಲು ಒಂದೆಡೆ ಗಿಡ್ಡ, ಇನ್ನೊಂದೆಡೆ ಉದ್ದ, ಸೈಡಿನಲ್ಲಿ ಕ್ರಿಸ್‌ಕ್ರಾಸ್, ಇಲ್ಲವೇ ಜಿಗ್‌ಜಾಗ್ ಹೀಗೆ ನೆಟ್ಟಗಿಲ್ಲದ ಸೊಟ್ಟಗಿನ ಕಟ್. ಮಧ್ಯದಲ್ಲಿ ಎದ್ದು ನಿಂತಂತೆ ಕಾಣುವ ಸೆಂಟರ್ ಕಟ್, ಇಲ್ಲವೇ ಅಗಲವಾಗಿ ಹರಡಿಕೊಂಡಂತೆ ಕಾಣುವ ಅಂಬ್ರೆಲ್ಲಾಕಟ್. ಹೌದು. ಇದೆಲ್ಲಾ ಅಸೆಮ್ಮಿಟ್ರಿಕಲ್ ಡ್ರೆಸ್‌ಗಳ ಉದಾಹರಣೆಗಳು. ಇನ್ನು ಎಥ್ನಿಕ್ ಲುಕ್ ನೀಡುವ ಸಲ್ವಾರ್ ಕಮೀಜ್ ನಲ್ಲಾದಲ್ಲಿ ಜಿಗ್‌ಜಾಗ್‌ನಂತಹ ಮಲ್ಟಿಪಲ್ ಕಟ್ಸ್‌ನವು ಬಂದಿವೆ. ಅದೇ ವೆಸ್ಟರ್ನ್ ಡ್ರೆಸ್ ಹಾಗೂ ಟಾಪ್‌ಗಳಲ್ಲಿಊಹೆಗೂ ಸಿಗದ ವೆರೈಟಿ ಅಸೆಮ್ಮಿಟ್ರಿಕಲ್ ಕಟ್ಸ್‌ನವು ಟ್ರೆಂಡಿಯಾಗಿವೆ. ಸಿಂಪಲ್ ಆಗಿ ಹೇಳಬೇಕೆಂದರೇ ಇವು ನೀಟಾಗಿ ಕರಾರುವಕ್ಕಾಗಿ ಕಾಣುವ ಉಡುಪುಗಳು ಇವಲ್ಲ. ನೋಡುಗರಿಗೆ ಕನ್‌ಫ್ಯೂಸ್ ಕ್ರಿಯೇಟ್ ಮಾಡುವ ಡ್ರೆಸ್‌ಗಳಿವು ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ಕವಿತಾ.
ಇದನ್ನೂ ಓದಿ | Celebrity Fashion Corner: ಫ್ಯಾಷನ್ ಎಂಬುದು ಹರಿಯುವ ನೀರಿನಂತೆ!
ವೆಸ್ಟರ್ನ್‌ವೇರ್‌ನಲ್ಲಿ ವೆರೈಟಿ ಡ್ರೆಸ್
ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸದವು ದೊರೆಯುತ್ತವೆ. ಇದೀಗ ವಿಭಿನ್ನ ಲುಕ್ ನೀಡುವ ಪ್ಯಾಂಟ್ ಟಾಪ್‌ಗಳು ಸಿಗಲಾರಂಭಿಸಿವೆ. ಈ ಉಡುಪುಗಳಲ್ಲಿ ಕಟ್‌ಗಳದ್ದೇ ಪಾರುಪತ್ಯ. ಅದರಲ್ಲೂ ಫ್ರಾಕ್‌ಗಳು ಹೆಚ್ಚು ಮೆಚ್ಚುಗೆ ಪಡೆದಿವೆ. ಲೈಟ್ ಕಲರ್‌ನ ಪ್ರಿಂಟೆಡ್ ಅಸೆಮ್ಮಿಟ್ರಿಕಲ್ ಡ್ರೆಸ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುವ ಮಾಡೆಲ್ ಚಂದನಾ ಪ್ರಕಾರ, ಕ್ಯಾಶುವಲ್ ಉಡುಪುಗಳಲ್ಲಿ ಇವು ಡಿಫರೆಂಟ್ ಲುಕ್ ನೀಡುತ್ತವೆ ಎನ್ನುತ್ತಾರೆ.
ಸೆಲೆಬ್ರಿಟಿಗಳ ಆಯ್ಕೆ
ಬಾಲಿವುಡ್ ತಾರೆಯರು ವಿಭಿನ್ನ ಲುಕ್ ಪಡೆಯಲು ಈ ಅಸೆಮ್ಮೆಟ್ರಿಕಲ್ ಉಡುಪುಗಳನ್ನು ಪ್ರಯೋಗಿಸಲಾರಂಭಿಸಿದ್ದಾರೆ. ಇತ್ತೀಚೆಗೆ ನಟಿ ಶಮಿತಾ ಹಾಗೂ ತಮನ್ನಾ ಈ ಉಡುಪಿನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು ಕೂಡ.
ಫೆಸ್ಟೀವ್ ಸೀಸನ್‌ಗೆ ಎಥ್ನಿಕ್ ಅಸೆಮ್ಮೆಟ್ರಿಕಲ್ ಡ್ರೆಸ್
ಶಾರ್ಟ್ ಕುರ್ತಾ, ಕಮೀಜ್ ಗಳು ಈ ಡಿಸೈನ್‌ನಲ್ಲಿ ಹಬ್ಬಗಳ ಹಿನ್ನೆಲೆಯಲ್ಲಿ ಆಗಮಿಸಿದ್ದು, ಇಂಡೋ-ವೆಸ್ಟರ್ನ್ ಲುಕ್ ನೀಡುತ್ತದೆ. ಇನ್ನು ಲಾಂಗ್ ಕುರ್ತಾಗಳಲ್ಲೂ ಇವು ಕಾಣಿಸಿಕೊಂಡಿದ್ದು, ಇವಕ್ಕೆ ಟೈಟ್ ಪ್ಯಾಂಟ್ ಅಥವಾ ಲೆಗ್ಗಿಂಗ್ಸ್ ಮ್ಯಾಚಿಂಗ್ ಮಾಡಬಹುದು. ಇನ್ನು ಅಸೆಮ್ಮಿಟ್ರಿಕಲ್ ಕಟ್ಸ್ ಹೊಂದಿರುವ ಕಮೀಝ್‌ಗಳನ್ನು ಪಾರ್ಟಿಗಳಲ್ಲೂ ಧರಿಸಬಹುದು.
ಪ್ರಯೋಗಾತ್ಮಕ ಉಡುಪಿದು…
ಇವು ಡಿಸೆಂಟ್ ಲುಕ್ ಬಯಸುವವರಿಗೆ ಸೂಟ್ ಆಗದು. ಏನಿದ್ದರೂ ಪ್ರಯೋಗ ಮಾಡುವ ಫ್ಯಾಷನ್ ಪ್ರಿಯರಿಗೆ ಹಾಗೂ ವೆಸ್ಟರ್ನ್ ಔಟ್‌ಫಿಟ್ ಧರಿಸುವ ಅಭ್ಯಾಸವಿರುವವರಿಗೆ ಇದು ಬೆಸ್ಟ್ ಎನ್ನುತ್ತಾರೆ.
ಅಸೆಮ್ಮಿಟ್ರಿಕಲ್ ಸ್ಟೈಲ್ ಪ್ರಿಯರು ತಿಳಿದುಕೊಳ್ಳಬೇಕಾದ ವಿಷಯ:
- ಧರಿಸುವ ಮುನ್ನ ಟ್ರಯಲ್ ನೋಡಿ, ಸೂಟ್ ಆದಲ್ಲಿ ಮಾತ್ರ ಖರೀದಿಸಿ.
- ಎಥ್ನಿಕ್ ಹಾಗೂ ವೆಸ್ಟರ್ನ್ನಲ್ಲಿ ಯಾವುದು ನಿಮಗೆ ಸೂಕ್ತ ಎಂಬುದರ ಅರಿವಿರಲಿ.
- ಸ್ಟಿಚ್ ಮಾಡಿಸುವುದಾದಲ್ಲಿ ಕಟ್ಸ್ ಆಯ್ಕೆ ಸರಿಯಾಗಿರಲಿ.
- ಅಸೆಮ್ಮಿಟ್ರಿಕಲ್ ಕಟ್ಸ್ನ ಲಾಂಗ್ ಕಮೀಝ್ ಡಿಫರೆಂಟ್ ಲುಕ್ ನೀಡುತ್ತವೆ ಎಂಬುದು ನೆನಪಿರಲಿ.
……ಇದನ್ನೂ ಓದಿ |Fashion Colour Trend: ಫ್ಯಾಷನ್ ನಲ್ಲಿ ಸನ್ ಕಲರ್ ಡಿಸೈನ್ ವೇರ್