ಬೆಂಗಳೂರು: ವ್ಯಕ್ತಿಯೊಬ್ಬರು ತನ್ನ ಬೆಳೆದು ನಿಂತ ಮಗನನ್ನೇ ಗುಂಡು ಹಾರಿಸಿ ಕೊಲೆ (father Kills son) ಮಾಡಿ ಘಟನೆ ಗುರುವಾರ ರಾತ್ರಿ ಬೆಂಗಳೂರಿನಲ್ಲಿ (Bangalore News) ನಡೆದಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕರೆಕಲ್ನ ಮನೆಯಲ್ಲಿ ವಾಸವಾಗಿರುವ ಸುರೇಶ್ ಎಂಬವರೇ ತಮ್ಮ ಮಗ ನರ್ತನ್ ಬೋಪಣ್ಣ (32) ಅವರನ್ನು ಕೊಲೆ ಮಾಡಿದವರು (Man shoots down his own son). ಕುಡಿಯಲು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಈ ಕೊಲೆ (Murder Case) ನಡೆದಿದೆ.
ಕೊಡಗಿನ ಮೂಲದವರಾದ ನರ್ತನ್ ಬೋಪಣ್ಣ ಕರೇಕಲ್‌ನ ಮನೆಯಲ್ಲಿ ತಂದೆ ಸುರೇಶ್ ಮತ್ತು ತಾಯಿ ಜತೆ ವಾಸವಾಗಿದ್ದರು. ನರ್ತನ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಸುರೇಶ್‌ಗೆ ಕುಡಿತದ ಹುಚ್ಚು ವಿಪರೀತವಾಗಿದ್ದು, ಇದೇ ಕಾರಣದಿಂದ ಅವರು ತಮ್ಮ ಮಗನನ್ನೇ ಕೊಲೆ ಮಾಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ.
ಮನೆಯಲ್ಲೇ ಇರುತ್ತಿದ್ದ ಸುರೇಶ್ ಹೆಂಡತಿಯನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಸದಾ ಕಾಲ ಕುಡಿತದ ಗುಂಗಿನಲ್ಲೇ ಇರುತ್ತಿದ್ದ ಸುರೇಶ್ ಕುಡಿಯಲು ಹಣ ಬೇಕು ಎಂದು ಮಗನನ್ನು ಪೀಡಿಸುತ್ತಿದ್ದರು.
ಗುರುವಾರ ಸಂಜೆಯೂ ಕುಡಿತಕ್ಕೆ ಹಣ ಕೇಳಿ ವಿಪರೀತ ಹಿಂಸೆ ನೀಡಿದ್ದರು. ಹೊಡೆಯಲು ಬಂದಿದ್ದರು. ಇದನ್ನೆಲ್ಲ ನೋಡಿದ ನರ್ತನ್ ತನ್ನ ತಂದೆಯನ್ನು ಒಂದು ಕೋಣೆಯೊಳಗೆ ತಳ್ಳಿ ಬಾಗಿಲು ಹಾಕಿದ್ದರು. ಕೋಣೆಯ ಒಳಗಿನಿಂದಲೇ ಬೆದರಿಕೆ ಹಾಕುತ್ತಿದ್ದರು ಸುರೇಶ್.
ನೋಡೋಣ ಸ್ವಲ್ಪ ಹೊತ್ತು ಕಳೆದರೆ ಸರಿಯಾದೀತು ಎಂದು ನರ್ತನ್ ನಿರೀಕ್ಷಿಸಿದ್ದರು. ಅದಕ್ಕೆ ಪೂರಕವಾಗಿ ಸುರೇಶ್ ಒಳಗಿನಿಂದ ಸ್ವಲ್ಪ ತಣ್ಣಗಿದ್ದಂತೆ ಕಂಡಿತು. ಇತ್ತ ಒಳಗಿನಿಂದ ಸುರೇಶ್ ದೊಡ್ಡದೊಂದು ಕೃತ್ಯಕ್ಕೆ ಸಜ್ಜಾಗುತ್ತಿದ್ದರು. ಮಗ ತನ್ನನ್ನು ಕೋಣೆಯೊಳಗೆ ಹಾಡಿ ಹಾಕಿದ್ದರಿಂದ ಸಿಟ್ಟಿಗೆದ್ದ ಅವರು ತಮ್ಮ ಬಳಿ ಇದ್ದ ಲೈಸೆನ್ಸ್ ಹೊಂದಿದ ಸಿಂಗಲ್ ಬ್ಯಾರಲ್ ಗನ್ ಅನ್ನು ಹೊರಗೆ ತೆಗೆದು ನೇರವಾಗಿ ಗುಂಡು ಹೊಡೆದರು.
ನಿಜವೆಂದರೆ ಆ ಕೋಣೆಯ ಬಾಗಿಲು ಹಾಕಿತ್ತು. ಅದನ್ನು ಒಡೆಯಲೆಂದು ಅವರು ಬಾಗಿಲಿಗೆ ಗುಂಡು ಹಾರಿಸಿದರು. ಹಾಗೆ ಹಾರಿಸಿದ ಗುಂಡು ಬಾಗಿಲನ್ನು ಒಡೆದುದಲ್ಲದೆ ನೇರವಾಗಿ ಹೊರಗೆ ಕುಳಿತಿದ್ದ ನರ್ತನ್ ಬೋಪಣ್ಣ ಅವರ ತೊಡೆಯ ಮೇಲ್ಭಾಗಕ್ಕೆ ಹೊಕ್ಕಿದೆ.
ಇದನ್ನೂ ಓದಿ: Missing Mystery : ಬೆಂಗಳೂರಿನಿಂದ ಕಾಣೆಯಾದ ಬಾಲಕನ ಪತ್ತೆ ಹಚ್ಚಿದ್ದು ಒಬ್ಬ ಪತ್ರಕರ್ತೆ! ಇಲ್ಲಿದೆ ರೋಚಕ ಕಥೆ!
Father Kills son: ಮೂರು ಗಂಟೆ ನೆತ್ತರ ಮಗುವಲ್ಲೇ ಬಿದ್ದಿದ್ದ ನರ್ತನ್
ಹೀಗೆ ಗುಂಡು ಕಾಲನ್ನು ಹೊಕ್ಕುತ್ತಿದ್ದಂತೆಯೇ ನರ್ತನ್ ತನ್ನ ಸಹೋದರಿಗೆ ಕರೆ ಮಾಡಿ ತಂದೆ ನನ್ನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದ. ಸಹೋದರಿ ಸಂಬಂಧಿಕರೊಬ್ಬರನ್ನ ಮನೆ ಬಳಿ ಹೋಗುವಂತೆ ಹೇಳಿದ್ದರು. ಆದರೆ, ಅವರೆಲ್ಲ ಬಂದು ನೋಡಿದಾಗ ಸುಮಾರು ಮೂರು ಗಂಟೆ ಆಗಿತ್ತು. ಅಷ್ಟೂ ಹೊತ್ತು ರಕ್ತ ಬಸಿದುಹೋಗಿ ನಿತ್ರಾಣಗೊಂಡಿದ್ದ ನರ್ತನ್ ಏಳುವ ಸ್ಥಿತಿಯಲ್ಲೇ ಇರಲಿಲ್ಲ. ಆ ಬಳಿಕ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾರೆ.
ಇಷ್ಟೆಲ್ಲ ಆದರೂ ತಂದೆಯ ಕೋಪ ತಗ್ಗಿರಲಿಲ್ಲ. ಇತ್ತ ನರ್ತನ್ ತಾಯಿ ಹಾಸಿಗೆಯಲ್ಲೇ ಅಸಹಾಯಕರಾಗಿ ಬಿದ್ದುಕೊಂಡಿದ್ದರು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.