ಬೆಂಗಳೂರು: ಮೊದಲ ಬಾರಿಗೆ ನಾಯಕ ನಟನಾಗಿ ಪ್ರಮೋದ್ ಶೆಟ್ಟಿ ಅವರು ಅಭಿನಯಿಸಬೇಕಿದ್ದ ʼಶಬಾಷ್ ಬಡ್ಡಿ ಮಗನೇʼ ಫಿಲಂ ಅರ್ಧಕ್ಕೆ ನಿಂತಿದೆ. ವಂಚನೆ ಪ್ರಕರಣದಲ್ಲಿ ಚಿತ್ರದ ನಿರ್ಮಾಪಕ ಅರೆಸ್ಟ್ ಆಗಿರುವುದು ಇದಕ್ಕೆ ಕಾರಣ.
ʼಶಬಾಷ್ ಬಡ್ಡಿ ಮಗನೇʼ ಪ್ರಮೋದ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಲು ಮುಂದಾಗಿದ್ದ ಮೊದಲ ಸಿನಿಮಾ ಆಗಿತ್ತು. ಕಳೆದ ವರ್ಷ ಅಕ್ಟೋಬರ್ 2022ರ ದಸರಾ ವೇಳೆಗೆ ಸಿನಿಮಾ ಮುಹೂರ್ತ ಆಗಿತ್ತು. ಇದೀಗ ಅದರ ನಿರ್ಮಾಪಕ ಪ್ರಕಾಶ್ ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಆಡುಗೋಡಿ ಠಾಣೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.
KMFನಲ್ಲಿ ವಿವಿಧ ಹುದ್ದೆ ಕೊಡಿಸುತ್ತೇನೆಂದು ಹಲವರಿಂದ ಹಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಪ್ರಕಾಶ್ ಪೊಲೀಸರಿಗೆ ಬೇಕಾಗಿದ್ದಾರೆ. 20 ಲಕ್ಷಕ್ಕೆ KMFನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬವರಿಂದ ಮುಂಗಡವಾಗಿ 10 ಲಕ್ಷ ಪಡೆದಿದ್ದರು. ಕಳೆದ ಡಿಸೆಂಬರ್ನಲ್ಲಿ KMFಗೆ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ ನಡೆದಿತ್ತು. KMF ನಿರ್ದೇಶಕರ ಸರ್ಕಾರಿ ಲಾಂಛನ ನಕಲು ಮಾಡಿ ಪ್ರಕಾಶ್ ಆದೇಶ ಪ್ರತಿ ನೀಡುತ್ತಿದ್ದ. ಚರಣ್ ರಾಜ್ ಬಳಿ ಇದ್ದ ನಕಲಿ ಆದೇಶ ಪ್ರತಿ ಕಂಡು KMF ಅಧಿಕಾರಿಗಳು ಆಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನನ್ವಯ ಐಪಿಸಿ 420 ಅಡಿಯಲ್ಲಿ ನಿರ್ಮಾಪಕ ಪ್ರಕಾಶ್ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ : School affiliation : CBSE ಮಾನ್ಯತೆಯೇ ಇಲ್ಲದೆ ವಂಚನೆ; ನಾಗರಬಾವಿ ಸ್ಕೂಲ್ನ ಮೋಸದಾಟಕ್ಕೆ ಪೋಷಕರ ಆಕ್ರೋಶ