Site icon Vistara News

Fire Accident : ಬೆಂಗಳೂರಲ್ಲಿ ಬೆಂಕಿ ಅವಘಡಕ್ಕೆ 25 ಕೋಟಿ ರೂ. ಮೌಲ್ಯದ ಟಯರ್‌ಗಳು ಸುಟ್ಟುಕರಕಲು

ಬೆಂಗಳೂರು: ಬೆಂಗಳೂರಿನ ಹೃದಯ ಭಾಗದಲ್ಲಿರುವ ಚಾಮರಾಜಪೇಟೆ ನಿವಾಸಿಗಳು ಪ್ರತಿ ಭಾನುವಾರ ಗಾಢ ನಿದ್ದೆಗೆ ಜಾರುತ್ತಿದ್ದರು. ಸಂಡೇ ಅನ್ನೋ ಕಾರಣಕ್ಕೆ ಲೇಟ್‌ ಎದ್ದು ತಮ್ಮ ದಿನನಿತ್ಯದ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗುತ್ತಿದ್ದರು. ಆದರೆ ಇವತ್ತು ಅದೊಂದು ಅಗ್ನಿ ದುರಂತ ಸುತ್ತಮುತ್ತಲ ಜನರ ನಿದ್ದೆ ಕಸಿದಿತ್ತು. ಯಾಕೆಂದರೆ ಮುಗಿಲೆತ್ತರದವರೆಗೂ ಬೆಂಕಿಯ ಕೆನ್ನಾಲಿಗೆ (Fire Accident) ಚಾಚಿತ್ತು. ನಿಯಂತ್ರಣ ಸಿಗದೆ, ಬೆಂಕಿ ಆರಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಸಹಸವೇ ಪಡಬೇಕಾಯಿತು.

ಚಾಮರಾಜಪೇಟೆ ಸಮೀಪದಲ್ಲಿರುವ ಟಯರ್‌ ಗೋಡಾನ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿತ್ತು. ಮಾಲೀಕ ರಾಜೇಶ್ ಅಗರ್ವಾಲ್ ಸುಮಾರು 30 ವರ್ಷಗಳಿಂದ ಟಯರ್‌ ಬ್ಯುಸಿನೆಸ್‌ ಮಾಡುತ್ತಿದ್ದು, ಇದೇ ಗೋಡಾನ್‌ನಿಂದ ಬೇರೆ ಬೇರೆ ಕಡೆಗಳಿಗೆ ಸರಬರಾಜು ಮಾಡುತ್ತಿದ್ದರು.

ವಿವಿಧ ಕಡೆಗಳಲ್ಲಿ ಒಟ್ಟು 47 ಅಂಗಡಿಗಳಿಗೆ ಚಾಮರಾಜಪೇಟೆಯಲ್ಲಿರುವ ಇದೇ ಗೋಡಾನ್‌ನಿಂದ ಟಯರ್ ಸಪ್ಲೈ ಮಾಡಲಾಗುತ್ತದೆ. ಹೀಗಾಗಿ ಸುಮಾರು 25 ಕೋಟಿ ಮೌಲ್ಯದ ಟಯರ್‌ಗಳು ಇಲ್ಲಿದ್ದವು. ಆದರೆ ಬೆಂಕಿಯ ತೀವ್ರೆತೆಗೆ ಸಂಪೂರ್ಣವಾಗಿ ಸುಟ್ಟುಹೋಗಿದೆ.

ಇದನ್ನೂ ಓದಿ: Road Accident : ಹಜ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾವು; ಮಕ್ಕಳಿಬ್ಬರು ಗಂಭೀರ

ಭಾನುವಾರ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಅಗ್ನಿ ಅವಘಡ ಸಂಭವಿಸಿತ್ತು. ರಂಜಾನ್‌ ಹಬ್ಬದ ವೇಳೆ ಉಪವಾಸವಾದ ಕಾರಣ ಮುಸ್ಲಿಂ ಸಮುದಾಯದ ಕೆಲವರು ಅಲ್ಲಿಯೇ ಓಡಾಡುತ್ತಿದ್ದರು. ಬೆಂಕಿ ಉರಿಯುವುದು ಕಂಡ ಕೂಡಲೇ ಅಗ್ನಿಶಾಮಕ ಹಾಗೂ ಪೊಲೀಸರಿಗೆ ಕರೆ ಮಾಡಿದ್ದ. ಮೊದಮೊದಲು ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದರು. ಆದರೆ ರಬ್ಬರ್ ಆಗಿರುವ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಹರಡಿಕೊಂಡಿತ್ತು.

ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದರು. ಸುಮಾರು ಆರು ಗಂಟೆಗಳ ಕಾಲ ಒಟ್ಟು 13 ಅಗ್ನಿಶಾಮಕ ವಾಹನಗಳಿಂದ 40 ಜನ ಸಿಬ್ಬಂದಿ ನಿರಂತರವಾಗಿ ಬೆಂಕಿ ಆರಿಸಲು ಶ್ರಮಪಟ್ಟಿದ್ದರು. ಅಧಿಕಾರಿಗಳಿಗೆ ಸ್ಥಳೀಯರು ಜತೆಯಾಗಿ ಸಾಥ್‌ ನೀಡಿದರು. ಸದ್ಯ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣನಾ ಅಥವ ಬೇರೆ ಯಾವ ರೀತಿ ಬೆಂಕಿ ದುರಂತ ನಡೆದಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version