Site icon Vistara News

Fire Accident : ಬೆಂಗಳೂರಿನ ಆರ್‌ಟಿ ನಗರದಲ್ಲಿ ಅಗ್ನಿ ಅವಘಡ; ಕಟ್ಟಡದೊಳಗೆ ಹಲವರು ಸಿಲುಕಿರುವ ಶಂಕೆ

Fire Accident in Bengaluru

ಬೆಂಗಳೂರು: ಬೆಂಗಳೂರಿನ (Bengaluru News) ಆರ್‌ಟಿ ನಗರದಲ್ಲಿರುವ (RT Nagar) ಮಿರಾಕಲ್‌ ಡ್ರೀಮ್ಸ್‌ ಕಟ್ಟಡದೊಳಗಿನ ನೆಲಮಹಡಿಯಲ್ಲಿದ್ದ ಜನರೇಟರ್‌ನಲ್ಲಿ ಆಕಸ್ಮಿಕ ಬೆಂಕಿ (Fire Accident) ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಮೂರು ಮಹಡಿಗೆ ಬೆಂಕಿ ಕೆನ್ನಾಲಿಗೆಗೆ ಕೆಳ ಮಹಡಿ ಹೊತ್ತಿ ಉರಿಯುತ್ತಿದ್ದು, ಸ್ಥಳಕ್ಕೆ ಅಗ್ನಿಶಾಮಕ ವಾಹನ ದೌಡಾಯಿಸಿದೆ.

ಕಟ್ಟಡದ ಮೇಲ್ಮಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆರ್‌ಟಿ ನಗರ ಪೊಲೀಸರು ಕಟ್ಟಡದೊಳಗೆ ಸಿಲುಕಿದ್ದ ಏಳು ಮಂದಿಯನ್ನು ರಕ್ಷಿಸಿ ಹೊರಗೆ ಕರೆ ತಂದಿದ್ದಾರೆ. ಕಟ್ಟಡದ ಕಿಟಿಕಿ ಗಾಜು ಒಡೆದು, ಪಕ್ಕದ ಕಟ್ಟಡದಿಂದ ಏಣಿ ಸಹಾಯದಿಂದ ರಕ್ಷಿಸಲಾಗುತ್ತಿದೆ. ಕಟ್ಟಡದ ಮೇಲ್ಭಾಗದಲ್ಲಿ ಇನ್ನು 10ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಕಟ್ಟಡದ ಸುತ್ತಲು ದಟ್ಟ ಹೊಗೆ ಆವರಿಸಿದೆ. ಸ್ಥಳದಲ್ಲಿ ಇನ್ನೆರಡು ಅಗ್ನಿಶಾಮಕ ವಾಹನ ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ 5ಕ್ಕೂ ಹೆಚ್ಚು ನೀರಿನ ಟ್ಯಾಂಕರ್‌ಗಳನ್ನು ತರಿಸಿಕೊಂಡಿದ್ದಾರೆ. ಇನ್ನೂ ರಸ್ತೆಯ ಎರಡು‌ ಬದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಜನರನ್ನು ‌ನಿಯಂತ್ರಿಸಲು ಪೊಲೀಸರು ಹೈರಾಣಾಗಿದ್ದಾರೆ.

ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಐಡಿಎಸ್‌ (IDS business solicitation) ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಆವರಿಸಿ, ತದನಂತರ ಬೇಸ್‌ಮೆಂಟ್‌ಗೂ ಹರಡಿತ್ತು. ಬೆಂಕಿಯಿಂದಾಗಿ ಬೇಸ್‌ಮೆಂಟ್‌ನಲ್ಲಿದ್ದ ಆಯುರ್ವೇದಿಕ್ ಔಷಧಿಗಳು, 6 ಬೈಕ್ ಗಳು ಬೆಂಕಿಗಾಹುತಿ ಆಗಿದ್ದವು. 1 ಮತ್ತು 2ನೇ ಮಹಡಿಯಲ್ಲಿ ಮಿರಾಕಲ್ ಡ್ರಿಂಕ್ ಆಯುರ್ವೇದಿಕ್ ಕಚೇರಿಗಳಿದ್ದವು. ಅಲ್ಲಿಗೂ ದಟ್ಟವಾದ ಹೊಗೆ ಆವರಿಸಿತ್ತು. ಮಿರಾಕಲ್ ಡ್ರಿಂಕ್ಸ್‌ನ ಗ್ರೌಂಡ್ ಫ್ಲೋರ್ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಹಾಗೂ ಹೊಗೆಯಿಂದ ಕಟ್ಟಡದಿಂದ ಹೊರಬರಲು ಸಿಬ್ಬಂದಿ ಪರದಾಡಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆದಿದೆ. ಏಣಿ ಮೂಲಕ ಪಕ್ಕದ ಕಟ್ಟಡದಿಂದ ಸಿಬ್ಬಂದಿಯನ್ನು ಸ್ಥಳಾಂತರ ಮಾಡಲಾಯಿತು. ಸದ್ಯ ಬೆಂಕಿ ನಂದಿಸುವ ಕಾರ್ಯ ಮುಗಿದಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕೆಲವರಿಗೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರತ್ಯಕ್ಷ್ಯದರ್ಶಿ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಸಚಿವ ಭೈರತಿ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು ಖಾಸಗಿ ಕಟ್ಟಡವೊಂದರಲ್ಲಿ ಬಾಡಿಗೆ ಕೊಟ್ಟಿದ್ದರು. ಶುಕ್ರವಾರ ಮಧ್ಯಾಹ್ನ 12.45ರ ಸಮಯದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಪೊಲೀಸರಿಂದ ಮಾಹಿತಿ ಪಡೆದಾಗ ಶಾರ್ಟ್ ಸರ್ಕ್ಯೂಟ್‌ನಿಂದ ಆಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ 11 ಮಂದಿ ಒಳಗಡೆ ಸಿಲುಕಿದ್ದರು. ಎಲ್ಲರನ್ನೂ ರಕ್ಷಣೆ ಮಾಡಲಾಗಿದ್ದು, ಅದರಲ್ಲಿ ಓರ್ವನಿಗೆ ಸ್ವಲ್ಪ ತೊಂದರೆಯಾಗಿದೆ. ಒಟ್ಟು ಎಂಟು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version