ಬೆಂಗಳೂರು: ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ (HD Devegowda) ಅವರು ಅನಾರೋಗ್ಯಕ್ಕೀಡಾದ (Health problem) ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಿಸಲಾಗಿದೆ.
90 ವರ್ಷದ ದೇವೇಗೌಡರಿಗೆ ಗುರುವಾರ ಬೆಳಗ್ಗೆ ಉಸಿರಾಟ ಸಮಸ್ಯೆ (Breathing Problem) ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ ಅವರು ಪರೀಕ್ಷೆ ನಡೆಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರು ಎನ್ನಲಾಗಿದೆ.
ದೇವೇಗೌಡರು ಆರೋಗ್ಯವಾಗಿಯೇ ಇದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಅವರು ಆಹಾರ ಸೇವನೆ ಮಾಡುತ್ತಿದ್ದಾರೆ, ಅವರ ಉಸಿರಾಟವೂ ಸಹಜ ಸ್ಥಿತಿಗೆ ಬರುತ್ತಿದೆ ಎಂದು ತಿಳಿದುಬಂದಿದೆ.
I learn that some exaggerated reports are appearing on news channels with regard to my health. I wish to clarify that I am in the hospital for only routine checks. I’ll be back home soon. There is no cause for any worry.
— H D Deve Gowda (@H_D_Devegowda) February 15, 2024
ಇದನ್ನೂ ಓದಿ: HD Devegowda : ಶ್ರೀರಾಮನಿಗೆ ಚಿನ್ನದ ಕತ್ತಿ ಸಮರ್ಪಿಸಿದ ಮಾಜಿ ಪ್ರಧಾನಿ ದೇವೇಗೌಡರು
HD Devegowda : ಕಳೆದ ವರ್ಷವೂ ಫೆಬ್ರವರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು
ದೇವೇಗೌಡರು ಕಳೆದ 2023ರ ಫೆಬ್ರವರಿ ತಿಂಗಳಲ್ಲಿ ಅನಾರೋಗ್ಯ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಕಳೆದ ವರ್ಷದ ಫೆಬ್ರವರಿ 28ರಂದು ಅವರಿಗೆ ಕಾಲು ಊತ ಜಾಸ್ತಿ ಆಗಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಜನರಲ್ ಚೆಕಪ್‍ಗೆಂದು ಬೆಂಗಳೂರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ಸಂದರ್ಭ ವೈದ್ಯರು ಪರಿಶೀಲಿಸಿ ಒಂದು ವಾರದ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು.
ಒಂದು ವಾರಗಳ ಕಾಲ ವಿಶ್ರಾಂತಿ ಪಡೆದ ಅವರು ಮಾರ್ಚ್ 6ರಂದು ಡಿಸ್ಚಾರ್ಚ್ ಆಗಿದ್ದರು. ಡಿಸ್ಚಾರ್ಜ್ ಆದ ಕೆಲವೇ ದಿನದಲ್ಲಿ ಅವರು ವೀಲ್ ಚೇರ್‌ನಲ್ಲೇ ಮೈಸೂರಿನಲ್ಲಿ ನಡೆದ ಜೆಡಿಎಸ್ ಚುನಾವಣಾ ಪೂರ್ವ ಪಂಚರತ್ನ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಮುಂದೆ ಆಗಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕಾರಣಿಗಳು ಅವರನ್ನು ಮನೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಮಾಡಿದ್ದರು.
ಅದಾದ ಬಳಿಕ ಎಚ್.ಡಿ ದೇವೇಗೌಡ ಅವರು ಪೂರ್ಣವಾಗಿ ಚೇತರಿಸಿಕೊಂಡಿದ್ದು, ದಿಲ್ಲಿಯಲ್ಲಿ ನಡೆದ ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆಯಲ್ಲಿ ಸಕ್ರಿಯರಾಗಿದ್ದರು. ಜತೆಗೆ ಜನವರಿ 22ರಂದು ನಡೆದ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.