ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala seetharaman) ಅವರ ಪಿಎ ತಾನು ಎಂದು ಹೇಳಿಕೊಂಡು ಇಂಡಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ (MS Dhoni) ಅವರ ಮ್ಯಾನೇಜರ್‌ಗೆ ವಂಚಿಸಿದ ಘಟನೆ (Fraud Case) ನಡೆದಿದೆ. ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ (Tirupati Temple) ದೇವರ ಸ್ಪೆಷಲ್ ದರ್ಶನ ಮಾಡಿಸಿಕೊಡುತ್ತೇನೆ ಎಂದು ಹೇಳಿ ವಂಚಕನೊಬ್ಬ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಂಎಸ್ ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಎಂಬವರಿಗೆ ಬರೋಬ್ಬರಿ ಆರುವರೆ ಲಕ್ಷ ರೂಪಾಯಿಗಳಷ್ಟು ವಂಚಿಸಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ತಾನು; ತಾನು ಐಎಎಸ್ ಅಧಿಕಾರಿಯಾಗಿದ್ದು, ತಿರುಪತಿಯಲ್ಲಿ ಹನ್ನೆರಡು ಮಂದಿಗೆ ದೇವರ ವಿಶೇಷ ದರ್ಶನ ಮಾಡಿಸುತ್ತೇವೆ; ರೂಮ್ ವ್ಯವಸ್ಥೆ ಇರುತ್ತದೆ. ಪ್ರೋಟೋಕಾಲ್ ಮೂಲಕ ಯಾರನ್ನಾದ್ರೂ ಕಳಿಸುವ ಅಧಿಕಾರ ತನಗಿದೆ ಎಂದು ಒಬ್ಬಾತ ವಂಚಿಸಿದ್ದಾನೆ.
ಸ್ನೇಹಿತರ ಕುಟುಂಬವನ್ನು ಕಳಿಸುವ ನಿಟ್ಟಿನಲ್ಲಿ ಮೂರು ಲಕ್ಷ ರೂಪಾಯಿ ಹಣವನ್ನು ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಅವರು ಪೋನ್ ಪೇ ಮಾಡಿದ್ದರು. ಸಾಯಿ ಟ್ರಸ್ಟ್ ಹೆಸರಿಗೆ ಮೂರು ಲಕ್ಷ ಹಣ ಪಡೆದಿರುವ ಆರೋಪವಿದೆ. ಹಣ ಪಡೆದು ಹಿಂತಿರುಗಿಸದ ಹಿನ್ನೆಲೆಯಲ್ಲಿ ಸ್ವಾಮಿನಾಥನ್ ಅವರು ಹೆಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
ಹಾಸನದಲ್ಲಿ ಸರಣಿ ಕಳ್ಳತನ
ಹಾಸನ: ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದಲ್ಲಿ ಸರಣಿ ಕಳ್ಳತನ ನಡೆದಿದೆ. ಎರಡು ಅಂಗಡಿಗಳಲ್ಲಿ ಕಳ್ಳತನ, ಒಂದು ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಒಂದು ಬೈಕ್‌ನಲ್ಲಿ ಬಂದಿರುವ ಮೂವರು ಚೋರರು ಕೃತ್ಯ ಎಸಗಿದ್ದಾರೆ.
ಸಕಲೇಶಪುರ ಪಟ್ಟಣದ ಬಿ.ಎಂ.ರಸ್ತೆಯ ಬಾಲಾಜಿ ಟ್ರೇಡರ್ಸ್, ಮಲ್ಲಮ್ಮನ ರಸ್ತೆಯ ಮಹತಿ ಸೂಪರ್ ಮಾಕೆರ್ಟ್‌ನಲ್ಲಿ ಕಳ್ಳತನ ನಡೆದಿದ್ದು, ಮಾಸ್ಕ್ ಧರಿಸಿ ರೋಲಿಂಗ್ ಶಟರ್ ಮುರಿದು ಇಬ್ಬರು ಕಳ್ಳರು ಒಳಪ್ರವೇಶಿಸಿದ್ದಾರೆ. ಮಲ್ನಾಡ್ ಆಟೋಮೊಬೈಲ್‌ನಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಮಹತಿ ಸೂಪರ್ ಮಾರ್ಕೆಟ್‌ನಲ್ಲಿ 70 ಸಾವಿರ ನಗದು, ಬಾಲಾಜಿ ಟ್ರೇಡರ್ಸ್‌ನಲ್ಲಿ 20 ಸಾವಿರ ಹಣ ಹಾಗೂ ಸಿಗರೇಟ್ ಪ್ಯಾಕ್‌ಗಳನ್ನು ಕದ್ದೊಯ್ದಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Drone Prathap: ಡ್ರೋನ್ ಪ್ರತಾಪ್ ಮತ್ತೊಂದು ‘ದೋಖಾ’ ಬಯಲು! ಏನಿದು ವಂಚನೆ?