ಬೆಂಗಳೂರು: ವಯಸ್ಸಾದವರನ್ನೇ ಟಾರ್ಗೆಟ್ ಮಾಡಿ ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ಖತರ್ನಾಕ್ ವಂಚಕನ್ನು ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕ ಶಶಿಕುಮಾರ್(48) ಬಂಧಿತ ಆರೋಪಿ. ಈತ ಎಟಿಎಂನಲ್ಲಿ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ. ವಯಸ್ಸಾದವರು ಎಟಿಎಂಲ್ಲಿ ಹಣ ಪಡೆಯಲು ಪಾಡು ಪಡುತ್ತಿದ್ದರೆ, ಈತ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಧಾವಿಸಿ, ಅವರ ಕಾರ್ಡ್‌ನ ಪಿನ್ ತಿಳಿದು, ಕಾರ್ಡ್ ಅದಲು ಬದಲು ಮಾಡಿಕೊಳ್ಳುತ್ತಿದ್ದ. ನಂತರ ಅವರ ಕಾರ್ಡ್‌ನಿಂದ ಹಣವನ್ನೆಲ್ಲ ಖಾಲಿ ಮಾಡುತ್ತಿದ್ದ.
ಕದ್ದ ಕಾರ್ಡ್‌ನಲ್ಲಿ ಚಿನ್ನಾಭರಣ ಖರೀದಿಸಿ, ಅದೇ ಚಿನ್ನ ಬೇರೆಡೆಗೆ ಅಡ ಇಟ್ಟು ಬಂದ ಹಣದಿಂದ ಕುದುರೆ ರೇಸ್ ಆಡುತ್ತಿದ್ದ. ಆನ್‌ಲೈನ್ ಗೇಮ್ ಸೇರಿದಂತೆ ಜೂಜಾಟ ಸಹ ಆಡುತ್ತಿದ್ದ. ಪ್ರಕರಣ ಸಂಬಂಧ ಈಶಾನ್ಯ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Yashaswini Scheme: ಯಶಸ್ವಿನಿ ಕಾರ್ಡ್ ಮಾಡಿಕೊಡುವುದಾಗಿ ವಂಚನೆ; ಯಶಸ್ವಿನಿ ಟ್ರಸ್ಟ್‌ನಿಂದ ದೂರು