Site icon Vistara News

Fraud Case : ಮಸಾಜ್‌ ಥೆರಪಿಸ್ಟ್‌ಗೆ ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷ ಲೂಟಿ ಮಾಡಿದ ನಕಲಿ ಪೊಲೀಸ್‌

Fraud Case

ಬೆಂಗಳೂರು: ಪೊಲೀಸ್ ಎಂದು ನಂಬಿಸಿ (Fake Police) ಮಸಾಜ್ ಥೆರಪಿಸ್ಟ್‌ನಿಂದ ಲಕ್ಷಲಕ್ಷ ಸುಲಿಗೆ (Fraud case) ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಲಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಮಹೇಂದ್ರಕುಮಾರ್(33) ಎಂಬಾತ ತನ್ನ ನಿಜವಾದ ಹೆಸರನ್ನು ಮರೆಮಾಚಿ ತನ್ನ‌ ಹೆಸರು ಸುರೇಶ್ ಎಂದು ನಂಬಿಸಿ, ಜುಲೈ 3ರಂದು ಮಸಾಜ್‌ ಥೆರಪಿಸ್ಟ್‌ನನ್ನು ಬುಕ್ ಮಾಡಿದ್ದ. ಆನ್‌ಲೈನ್‌ ಮೂಲಕ 25 ವರ್ಷದ ಮಹಿಳಾ ಮಸಾಜ್‌ ಥೆರಪಿಸ್ಟ್ ಬುಕ್ ಮಾಡಿದ್ದ.

ಅಲ್ಲದೇ ಲೇಡಿ ಥೆರಪಿಸ್ಟ್‌ಗೆ ಕಾಲ್‌ ಮಾಡಿ ತಾನೊಬ್ಬ ಚಿತ್ರನಟ, ಹಲವು ಸಿನಿಮಾದಲ್ಲಿ ಆ್ಯಕ್ವಿಂಗ್‌ ಮಾಡಿದ್ದೀನಿ ಎಂದು ಪುಂಗಿ ಬಿಟ್ಟಿದ್ದ. ಬಳಿಕ ಥೆರಪಿಸ್ಟ್‌ನನ್ನು ರಾಮಮೂರ್ತಿನಗರದ ಅಪಾರ್ಟ್ಮೆಂಟ್‌ ಒಂದರ ಬಳಿ ಬರುವಂತೆ ಹೇಳಿದ್ದ. ಅದರಂತೆ ರಾತ್ರಿ‌ 10:30ರ ಸುಮಾರಿಗೆ ಸ್ಥಳಕ್ಕೆ ಬಂದಿದ್ದ ಮಹಿಳಾ ಥೆರಪಿಸ್ಟ್‌ನನ್ನು ಕಾರಿನಲ್ಲಿ ಕರೆದೊಯ್ದ ಮಹೇಂದ್ರಕುಮಾರ್‌, ಒಂದು ಕಿ ಮೀ ಹೋದ ಬಳಿಕ ಬ್ಲ್ಯಾಕ್‌ ಮೇಲ್ ಮಾಡಲು ಶುರು ಮಾಡಿದ್ದಾನೆ.

ಇದನ್ನೂ ಓದಿ: Suraj-Prajwal: ಸೂರಜ್‌-ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಇಂದು; ಸಹೋದರರಿಗೆ ಸಿಗುತ್ತಾ ರಿಲೀಫ್‌?

ತಾನು ಪೊಲೀಸ್ ಎಂದು ಹೇಳಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದೀರಾ ಎಂದು ಸುಳ್ಳು ಕೇಸ್ ಹಾಕುವುದಾಗಿ ಬೆದರಿಸಿದ್ದಾನೆ. ಯುವತಿ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕೇಸ್ ಹಾಕದಿರಲು 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ನಂತರ ಹೆದರಿದ ಯುವತಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಹಣ ಕೇಳಿದ್ದಾಳೆ.

ಈ ವೇಳೆ ಯುವತಿ ಸ್ನೇಹಿತರಿಂದ ಮಹೇಂದ್ರನಿಗೆ ಆನ್‌ಲೈನ್‌ ಮೂಲಕ ಹಣ ವರ್ಗಾವಣೆ ಆಗಿದೆ. ಒಟ್ಟು 1 ಲಕ್ಷದ 50 ಸಾವಿರ ಹಣವನ್ನು ಪಡೆದುಕೊಂಡು, ನಂತರ ಯುವತಿಯನ್ನು ಇಡೀ ರಾತ್ರಿ‌ ಹೆಬ್ಬಾಳ ಸೇರಿ ಹಲವೆಡೆ ಸುತ್ತಾಡಿಸಿದ್ದಾನೆ. ಬೆಳಗಿನ ಜಾವ ಏರ್‌ಪೋರ್ಟ್‌ ಬಳಿ ಇಳಿಸಿ ಈ ಕೂಡಲೇ ಸ್ವಂತ ಊರಿಗೆ ಹೊರಡುವಂತೆ ಬೆದರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಬಳಿಕ ಅಲ್ಲಿಂದ ಯುವತಿ ನೇರವಾಗಿ ಪೊಲೀಸ್‌ರ ಬಳಿ ತೆರಳಿ ನಡೆದದ್ದನ್ನು ಹೇಳಿದ್ದಾಳೆ. ಆಕೆ ನೀಡಿದ ದೂರಿನ ಮೇಲೆ ರಾಮಮೂರ್ತಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಡಾಗ್ ಬ್ರೀಡಿಂಗ್ ಕೆಲಸ ಮಾಡುತ್ತಿದ್ದ ಮಹೇಂದ್ರ ಈ ರೀತಿ ಸುಲಿಗೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಮೋಜಿನ ಜೀವನಕ್ಕಾಗಿ ಹಣ ಹೊಂದಿಸಲು ಈ ರೀತಿಯ ಸುಲಿಗೆಗೆ ಇಳಿದಿದ್ದ. ಈತನ ಬಂಧನದ ನಂತರ ಇದೇ ರೀತಿ ಹಲವರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿಂದೆಯೂ ಮಾರತ್ತಳ್ಳಿ, ಪುಲಿಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ನಕಲಿ ಪೊಲೀಸ್

ಮತ್ತೊಂದು ಪ್ರಕರಣದಲ್ಲಿ ಇನ್ನೊಬ್ಬ ವಂಚಕ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ವಿಶ್ವನಾಥ್ ಅಲಿಯಾಸ್‌ ವಿಷ್ಣುಗೌಡ ವಂಚನೆ ಮಾಡಿರುವ ಆರೋಪಿ ಆಗಿದ್ದಾನೆ. ಗನ್ ಹಿಡಿದು ಪೊಲೀಸ್ ಡ್ರೆಸ್ ಧರಿಸಿದ್ದ ವಿಶ್ವನಾಥ್‌ನ ಫೋಟೋ ನೋಡಿ ವಿಚ್ಚೇಧಿತ ಮಹಿಳೆಯೊಬ್ಬರು ಪೊಲೀಸ್ ಎಂದುಕೊಂಡಿದ್ದರು. ಬಾಳು ಕೊಡುತ್ತೇನೆ ಎಂದು ನಂಬಿಸಿ, 40 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದಾನೆಂದು. ಜತೆಗೆ ಮಹಿಳೆಯ ತಂಗಿಯೂ ಅಸಭ್ಯವಾಗಿ ಲೈಂಗಿಕ ದೌರ್ಜನ್ಯ ಮಾಡಿರುವ ಆರೋಪವೂ ವಿಷ್ಣುಗೌಡನ ಮೇಲಿದೆ. ಗಣಪತಿನಗರ ನಿವಾಸಿಯಾಗಿರುವ ವಿಷ್ಣುಗೌಡ, ಮಹಿಳೆಯ ಜತೆ ದೈಹಿಕ ಸಂಪರ್ಕವನ್ನು ಇಟ್ಟುಕೊಂಡಿದ್ದ. ನಂತರ ಅಸಲಿ ಬಣ್ಣ ಬಯಲಾದ ಬಳಿಕ ಮಹಿಳೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version