Site icon Vistara News

Fraud Case : ಹೋಮ್ ಲೋನ್ ಕೊಡಿಸುವ ನೆಪದಲ್ಲಿ ಖತರ್ನಾಕ್‌ ದಂಪತಿಯ ನಯವಂಚನೆ

Fraud on the pretext of home loan

ಬೆಂಗಳೂರು: ಕಡಿಮೆ ಬಡ್ಡಿಗೆ ಹೋಮ್‌ ಲೋನ್‌ (home Loan) ಕೊಡಿಸುವುದಾಗಿ ನಂಬಿಸಿ ಪ್ರೊಸೆಸಿಂಗ್ ಫೀಜ್ ಹೆಸರಿನಲ್ಲೇ ಸುಮಾರು 6 ಲಕ್ಷ ರೂ. ಹಣವನ್ನು ಗುಳುಂ (Fraud Case) ಮಾಡಿರುವ ಘಟನೆ ನಡೆದಿದೆ. ರಾಜಗೋಪಾಲನಗರ ಹೆಗ್ಗನಹಳ್ಳಿ ನಿವಾಸಿ ರಾಧ ಮೋಸ ಹೋದವರು.

ರಾಧ ಅವರಿಗೆ ಸುಮಾರು ಒಂದೂವರೆ ಕೋಟಿ ಮೌಲ್ಯದ ಮನೆ ಇತ್ತು. ಮನೆ ಮೇಲೆ ಲೋನ್ ಮಾಡಿಸಿ ಹೊಸ ಬ್ಯುಸಿನೆಸ್‌ ಶುರು ಮಾಡಲು ರಾಧ ಪ್ರಯತ್ನಿಸುತ್ತಿದ್ದರು. ಇದೇ ವೇಳೆ ರಾಧಾರಿಗೆ ಅದೇ ಏರಿಯಾದ ನಿವಾಸಿ ಕಮಲ ಎಂಬಾಕೆ ಪರಿಚಯವಾಗಿತ್ತು. ಈ ಸಲುಗೆಯಲ್ಲೇ ಬ್ಯುಸಿನೆಸ್‌ ಬಗ್ಗೆ ಹೇಳಿದ್ದರು. ಆಗ ಕಮಲ ಹಾಗೂ ಶಿವಮಾದಯ್ಯ ದಂಪತಿ ರಾಧಗೆ 45 ಲಕ್ಷ ರೂ. ಲೋನ್ ಕೊಡಿಸುವುದಾಗಿ ಹೇಳಿದ್ದರಂತೆ.

ಆದರೆ ಇಂತಿಷ್ಟು ಖರ್ಚು ಆಗುತ್ತೆ ಎಂದಿದ್ದರಂತೆ. ಇವರನ್ನೂ ಪೂರ್ತಿಯಾಗಿ ನಂಬಿದ್ದ ರಾಧ ಒಂದೇ ದಿನದಲ್ಲಿ ಸುಮಾರು ಆರು ಲಕ್ಷ ಹಣವನ್ನು ನಗದು ಜತೆಗೆ ಅಕೌಂಟ್‌ನ ಮೂಲಕವು ಕಮಲಾ ಹಾಗೂ ಶಿವಮಾದಯ್ಯ ದಂಪತಿಗೆ ನೀಡಿದ್ದಾರೆ. ಹಣ ಪಡೆದ ನಂತರ ಲೋನ್ ಕೊಡಿಸದೇ ಯಮಾರಿಸಿದ್ದಾರೆ. ಲೋನ್‌ಗಾಗಿ ಕೊಟ್ಟ ಹಣವನ್ನು ವಾಪಸ್ ಕೊಡದೇ ವಂಚಿಸಿದ್ದಾರೆ.

ವಂಚನೆ ಮಾಡಿರುವ ಕಮಲಾ ಹಾಗೂ ಶಿವಮಾದಯ್ಯ ದಂಪತಿ

ನಾಳೆಯೇ ಲೋನ್ ಆಗಿಬಿಡುತ್ತೆ. ಕೇವಲ ಒಂದು ಪರ್ಸೆಂಟ್ ಬಡ್ಡಿಗೆ ಲೋನ್ ಸಿಗತ್ತೆ ಎಂದು ಆಸೆ ತೋರಿಸಿದ್ದಾರೆ. ಹೀಗಾಗಿ ರಾಧ ಮನೆಯ ಬೆಳ್ಳಿ ಸಾಮಾನು, ಮಕ್ಕಳ ಸ್ಕೂಲ್ ಫೀಜ್‌ಗೆ ಇಟ್ಟಿದ್ದ ಹಣದ ಜತೆಗೆ ಬಡ್ಡಿಗೆ ಹಣವನ್ನೂ ಪಡೆದು ಕಮಲಾ ಹಾಗೂ ಶಿವಮಾದಯ್ಯ ದಂಪತಿಗೆ ನೀಡಿದ್ದಾರೆ. ಅಲ್ಲದೇ ಲೋನ್‌ಗೆ ಎಲ್ಲ ರೆಡಿಯಾಗಿದೆ ಬೆಳಗ್ಗೆ ನೂರಾ ಒಂದು ರೂಪಾಯಿ ದೇವರಿಗೆ ಹರಕೆ ಕಟ್ಟಿ ಬಂದು ಲೋನ್ ಹಣ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಅದರಂತೆ ಮರುದಿನ ಫೋನ್ ಮಾಡಿ ವಿಚಾರಿಸಿದರೆ ನೀನು ಯಾವ ದುಡ್ಡು ಕೊಟ್ಟಿಲ್ಲ, ಏನು ಮಾಡುತ್ತೀಯೋ ಮಾಡಿಕೋ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ಸದ್ಯ ಪ್ರಕರಣ ಸಂಬಂಧ ಮೋಸ ಹೋದ ರಾಧ ಅವರು ರಾಜಗೋಪಾಲನಗರ ಠಾಣೆಯಲ್ಲಿ ಕಮಲಾ ಹಾಗೂ ಶಿವಮಾದಯ್ಯ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ರಾಧ ಹಾಗೂ ಕಮಲ ಇಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇಡೀ ಘಟನೆಯ ಅಸಲಿ ಸತ್ಯ ಏನೆಂಬುದು ಪೊಲೀಸರ ಮುಂದಿನ ವಿಚಾರಣೆಯಿಂದ ಹೊರಬರಬೇಕಿದೆ.

ಇದನ್ನೂ ಓದಿ: Namma Metro: ಮೆಟ್ರೋ ಮಹಿಳಾ ಸಿಬ್ಬಂದಿಗೆ ಮೈ-ಕೈ ಮುಟ್ಟಿ ಕಿರಿಕಿರಿ; ಸಹಕರಿಸದೇ ಹೋದ್ರೆ ವರ್ಗಾವಣೆ ಬೆದರಿಕೆ

ಸೂಪರ್ ಸ್ಟಾರ್ ರಜನಿಕಾಂತ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಕಾಸ್ಟಿಂಗ್ ಡೈರೆಕ್ಟರ್‌

ಬೆಂಗಳೂರು: ನಟಿ ಆಗಬೇಕೆಂಬ ಮಹಾದಾಸೆಗೆ ಬಿದ್ದ ಯುವತಿಯೊಬ್ಬಳು ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದಾಳೆ. ಸ್ಟಾರ್‌ ನಟರ ಹೆಸರೇಳಿಕೊಂಡು ವ್ಯಕ್ತಿಯೊಬ್ಬ ಯುವತಿಯಿಂದ ಹಣ ಸುಲಿಗೆ (Fraud Case) ಮಾಡಿದ್ದಾನೆ.

ರಜನಿಕಾಂತ್ ಅವರ ಹೊಸ ಸಿನಿಮಾ Thalaiver 171- code red ಸಿನಿಮಾ ಹೆಸರು ಬಳಸಿಕೊಂಡು ಮೋಸ ಮಾಡಲಾಗಿದೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂಬಾತ ರಜನಿಕಾಂತ್ ಚಿತ್ರದಲ್ಲಿ ಪಾತ್ರವೊಂದು ಖಾಲಿ ಇದೆ ಎಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಹರಿಬಿಟ್ಟಿದ್ದ.

ಇದನ್ನು ನೋಡಿ ಯುವತಿಯೊಬ್ಬಳು ಸುರೇಶ್ ಕುಮಾರ್‌ನನ್ನು ಸಂಪರ್ಕ ಮಾಡಿದ್ದಳು. ನಂತರ ಕಾಸ್ಟಿಂಗ್‌ಗೆ ಇಷ್ಟು ಹಣ ಖರ್ಚಾಗುತ್ತೆ ಎಂದು ಸಬೂಬು ಹೇಳಿ, ಹಂತ ಹಂತವಾಗಿ 3,94,000 ರೂ. ಹಣವನ್ನು ದೋಚಿದ್ದಾನೆ. ಇತ್ತ ಯುವತಿಯಿಂದ ಹಣ ಸುಲಿಗೆ ಮಾಡಿ, ಅವಕಾಶವನ್ನು ಕೊಡದೆ, ಹಣವನ್ನೂ ವಾಪಾಸ್ ಕೊಡದೆ ಪರಾರಿ ಆಗಿದ್ದಾನೆ.

ಇತ್ತ ಹಣವೂ ಇಲ್ಲದೆ ಅವಕಾಶವೂ ಇಲ್ಲದೇ ಮೋಸ ಹೋದ ಯುವತಿ ಕಂಗಲಾಗಿದ್ದಾಳೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ವಿರುದ್ಧ ಐಟಿ ಆಕ್ಟ್ ನಡಿ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version