ಬೆಂಗಳೂರು: ಮದುವೆಯಾಗಿ ಮೂರೇ ದಿನಕ್ಕೆ ಪತ್ನಿಯನ್ನು ಬಿಟ್ಟು ಪತಿ ಪರಾರಿಯಾಗಿದ್ದು, ಕೇಳಿದರೆ ನಾನು ಮದುವೆಯನ್ನೇ ಆಗಿಲ್ಲ ಎನ್ನುತ್ತಿದ್ದಾನೆ. ಇಂಥದೊಂದು ವಿಚಿತ್ರ ಘಟನೆ ನಗರದ ಕೆ.ಆರ್.ಪುರಂನಲ್ಲಿ ನಡೆದಿದೆ.
ಧರಣಿ ಮತ್ತು ಸುರೇಶ್ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ತಾವು ಇದೇ ಫೆಬ್ರವರಿ 13ರಂದು ಮದುವೆಯಾಗಿದ್ದೇವೆ ಎಂದು ಧರಣಿ ಹೇಳುತ್ತಿದ್ದಾರೆ. ಫೆ.13ರಿಂದ 17ರವರೆಗೂ ಇಬ್ಬರೂ ಒಟ್ಟಿಗಿದ್ದರು. 18ರಂದು ಮನೆಗೆ ಕರೆದುಕೊಂಡು ಹೋಗ್ತೀನಿ ಎಂದವನು ಬಳಿಕ ನಾಪತ್ತೆಯಾಗಿದ್ದಾನೆ. ನಂತರ ಕೇಳಿದಾಗ, ನಾನು ವಿವಾಹವಾಗಲೇ ಇಲ್ಲ, ಸ್ನೇಹಿತನಾಗಿ ಮಾತ್ರ ಇದ್ದೆ. ಮದುವೆಯಾದ ಫೋಟೋಗಳು ಶಾರ್ಟ್ ಮೂವಿಗಾಗಿ ಶೂಟ್ ಮಾಡಿದ್ದು ಎನ್ನುತ್ತಿದ್ದಾನೆ!
ಧರಣಿ ಕೂಡ 2016ರಲ್ಲಿ ಮೊದಲ ವಿವಾಹವಾಗಿದ್ದರು. ನಂತರ ಪತಿಯನ್ನು ಬಿಟ್ಟು ದೂರವಾಗಿದ್ದರು. ಈ ವಿಚಾರ ಸುರೇಶ್‌ಗೆ ಗೊತ್ತಾದ ಬಳಿಕ ಮದುವೆ ಆಗಿದ್ದಾನೆ. ಈಗ ಬಿಟ್ಟುಹೋಗಿದ್ದಾನೆ ಎನ್ನುತ್ತಿದ್ದಾರೆ ಧರಣಿ. ಸದ್ಯ ಧರಣಿ ಕೆ.ಆರ್.ಪುರಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: Fraud Case: ನಕಲಿ ಐಪಿಎಸ್‌ನಿಂದ ಕೋಟಿ ಕೋಟಿ ಲೂಟಿ; ಅಸಲಿ ಪೊಲೀಸರನ್ನೂ ಯಾಮಾರಿಸಿದ್ದು ಹೇಗೆ?