ಬೆಂಗಳೂರು: ಬೆಂಗಳೂರಿನಲ್ಲೊಬ್ಬ ಖತರ್ನಾಕ್ ವಂಚಕನನ್ನು ಪೊಲೀಸರು ಬಂಧಿಸಿದ್ದು, ಬಂಧಿಸಲು ಹೋದ ಪೊಲೀಸರಿಗೇ ಆವಾಜ್ ಹಾಕಿದ್ದಾನೆ.
ಲೋಕೇಶ್ ಎಂಬಾತ ಶೇಷಾದ್ರಿಪುರಂ ಪೊಲೀಸರ ಬಲೆಗೆ ಬಿದ್ದ ವಂಚಕ. ಕಂಡವರ ಸೈಟ್‌ಗಳ ಮೇಲೆ ಲೋನ್ ಪಡೆದು ವಂಚಿಸುವುದು ಇವನ ಚಾಳಿ. ಸೇಲ್ ಅಗ್ರಿಮೆಂಟ್ ಹಾಕಿಸಿಕೊಂಡು ನಕಲಿ ದಾಖಲಾತಿ ಸೃಷ್ಟಿಸಿಕೊಂಡು ವಂಚಿಸುತ್ತಿದ್ದ. 2016ರಿಂದ ಆಕ್ಟಿವ್ ಆಗಿರುವ ಈತ ಬಂಧಿಸಲು ಹೋದರೆ ಜನಪ್ರತಿನಿಧಿಗಳ ಕೈಯಲ್ಲಿ ಪೋನ್ ಕಾಲ್ ಮಾಡಿಸುತ್ತಿದ್ದ.
ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಈತನ ಮೇಲೆ 7 ಪ್ರಕರಣಗಳು ದಾಖಲಾಗಿವೆ. ಕೋಟಿ ಕೋಟಿ ಲೋನ್ ಪಡೆದು ಬ್ಯಾಂಕ್‌ಗಳಿಗೆ ವಂಚಿಸಿದ್ದಾನೆ. ಬಂಧಿಸಲು ಹೋದ ಪೊಲೀಸರಿಗೆ ಚಾಲೆಂಜ್ ಮಾಡಿದ್ದಾನೆ. ʼʼವಿಜಯ್ ಮಲ್ಯ ಸಾವಿರಾರು ಕೋಟಿ ವಂಚನೆ ಮಾಡಿದರೂ ಕೇಳಲ್ಲ, ನಾನು ಮಾಡಿರೋ ಮೂರ್ನಾಲ್ಕು ಕೋಟಿ ಕೇಳೋಕೆ ಬರ್ತೀರಾ? ಅವರನ್ನೆಲ್ಲ ಏನೂ ಮಾಡಲ್ಲ.. ನಮ್ಮನ್ನ ಮಾತ್ರ ಪ್ರಶ್ನೆ ಮಾಡ್ತೀರಾ? ನಾನು ನಿಮಗೆ ವಂಚನೆ ಮಾಡಿಲ್ಲ, ಬದಲಿಗೆ ಬ್ಯಾಂಕಿನೋರ್ಗೆ ಮಾಡಿರೋದು. ನೀವೇಕೆ ತಲೆ ಕೆಡಿಸಿಕೊಳ್ತೀರಾ?ʼʼ ಎಂದು ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿದ್ದಾನೆ. ʼʼಜೈಲಿನಿಂದ ಬಂದಮೇಲೆ ಒಂದು ಕೈ ನೋಡ್ಕೋತೀನಿ. ನನ್ನ ಬಂಧಿಸಿರೋ ಯಾರನ್ನೂ ಬಿಡಲ್ಲ. ಎಲ್ಲರನ್ನೂ ಟ್ರಾನ್ಸ್‌ಫರ್ ಮಾಡಿಸ್ತೀನಿʼʼ ಎಂದು ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: GST Fraud: 500 ರೂ. ದುಡಿಯುವ ಬೀದಿ ಬದಿ ವ್ಯಾಪಾರಿ ವಿರುದ್ಧ 366 ಕೋಟಿ ರೂ. ಜಿಎಸ್‌ಟಿ ವಂಚನೆ ಕೇಸ್!