Site icon Vistara News

Fraud Case : ಹೆಣ್ಮಕ್ಕಳಿಗೆ ಗಾಳ ಹಾಕಿ ಹಣ ಲೂಟಿ ಮಾಡುತ್ತಿದ್ದ ಮ್ಯಾಟ್ರಿಮೋನಿ ವಂಚಕ ಅರೆಸ್ಟ್‌

Fraud Case in Bengaluru

ಬೆಂಗಳೂರು: ಶ್ರೀಮಂತ ಯುವತಿಯರು, ವಯಸ್ಸು ಮೀರಿದ ಮಹಿಳೆಯರನ್ನು ಮದುವೆಯಾಗುತ್ತೇನೆಂದು ಯಾಮಾರಿಸಿ ಹಣಕಾಸು ದೋಚುವ ಖದೀಮನೊಬ್ಬ (Fraud Case) ಸಿಕ್ಕಿಬಿದ್ದಿದ್ದಾನೆ. ಜೆ.ಪಿ ನಗರ ಪೊಲೀಸರು ಮ್ಯಾಟ್ರಿಮೋನಿ ವಂಚಕನನ್ನು (Matrimony fraudster) ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ಪ್ರೋಫೈಲ್‌ ಹಾಕಿ ವರರನ್ನು ಹುಡುಕುವ ವಧುವನ್ನೇ ಟಾರ್ಗೆಟ್ ಮಾಡಿ ಚೀಟಿಂಗ್ ಮಾಡುತ್ತಿದ್ದ ದೀಪಕ್‌ ಬಂಧಿತ ಆರೋಪಿಯಾಗಿದ್ದಾನೆ.

ಜೆ.ಪಿ ನಗರದ 41 ವರ್ಷದ ಮಹಿಳೆಯೊಬ್ಬರು ಮ್ಯಾಟ್ರಿಮೋನಿಯಲ್ಲಿ ವರಾನ್ವೇಷಣೆ ಮಾಡುತ್ತಿದ್ದರು. ಈ ವೇಳೆ ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ದೀಪಕ್ ಎಂಬಾತನ ಪರಿಚಯವಾಗಿತ್ತು. ಮಧುರೈನಲ್ಲಿ ತಾನೊಬ್ಬ ಬ್ಯಾಂಕ್ ಉದ್ಯೋಗಿ ಎಂದು ನಂಬಿಸಿದ್ದಲ್ಲದೇ ಮಹಿಳೆಯನ್ನು ಮದುವೆ ಆಗುವುದಾಗಿ ಹೇಳಿದ್ದಾನೆ.

ಮದುವೆ ಆಗುವ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಸಂತ್ರಸ್ತೆ ಆತನೊಟ್ಟಿಗೆ ನಿತ್ಯ ಫೋನ್‌ ಕಾಲ್‌ನಲ್ಲಿ ಮಾತನಾಡುತ್ತಿದ್ದರು. ದಿನಕಳೆದಂತೆ ಇವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದೆ. ಹೀಗಿದ್ದಾಗ ಒಂದು ದಿನ ವಂಚಕ ದೀಪಕ್‌, ಮಹಿಳೆಗೆ ಮಾರ್ಚ್‌ 3ರಂದು ಫೋನ್‌ ಮಾಡಿ ತನ್ನ ವಾಲೇಟ್‌ ಕಳೆದು ಹೋಗಿದೆ. ತುರ್ತಾಗಿ 30 ಸಾವಿರ ರೂ. ಹಣ ಬೇಕಿದೆ ಎಂದು ಆಕೆಯನ್ನು ಪುಸಲಾಯಿಸಿ ಹಣ ಹಾಕಿಸಿಕೊಂಡಿದ್ದ.

ಇದನ್ನೂ ಓದಿ: Group clash : ರಾಯಚೂರಲ್ಲಿ ಗುಂಪು ಘರ್ಷಣೆ; ರಾಡ್‌, ದೊಣ್ಣೆಯಿಂದ ಬಡಿದಾಟ

ಕೆಲ ದಿನದ ನಂತರ ಮಹಿಳೆಗೆ ಫೋನ್‌ ಮಾಡಿದ ದೀಪಕ್‌, ತಾನು ಉಪಯೋಗಿಸುತ್ತಿರುವ ಫೋನ್‌ ನಂಬರ್‌ ಆಫೀಸ್‌ದು, ಇದರಲ್ಲಿ ಖಾಸಗಿಯಾಗಿ ಮಾತನಾಡಲು ಆಗುತ್ತಿಲ್ಲ. ನಿನ್ನ ಹೆಸರಲ್ಲಿ ಸಿಮ್‌ವೊಂದನ್ನು ಖರೀದಿಸಿ ಕೊಡು ಎಂದಿದ್ದ. ತಾನು ಕಳಿಸುವ ಆಫೀಸ್ ಬಾಯ್‌ಗೆ ಸಿಮ್ ಕಾರ್ಡ್ ಕೊಟ್ಟು ಕಳಿಸು ಎಂದಿದ್ದ. ಅದರಂತೆ ತನ್ನ ಹೆಸರಲ್ಲಿ ಸಿಮ್ ಖರೀದಿಸಿ ಆರೋಪಿ ದೀಪಕ್‌ ಕಳಿಸಿ ಹುಡುಗನಿಗೆ ಕೊಟ್ಟು ಕಳುಹಿಸಿದ್ದರು.

ಈ ಎಲ್ಲ ಘಟನೆಗಳಿಂದ ಅನುಮಾನಗೊಂಡ ಮಹಿಳೆ, ಈ ವಿಚಾರವನ್ನೆಲ್ಲ ತಮ್ಮ ಸ್ನೇಹಿತರೊಟ್ಟಿಗೆ ತಿಳಿಸಿದ್ದಾರೆ. ಅವರು ಖುದ್ದು ವಿಚಾರ ಮಾಡಿದಾಗ ಈತನ ವಂಚನೆ ಬಯಲಾಗಿದೆ. ಮದುವೆ ಆಗುವುದಾಗಿ ನಂಬಿಸಿ ಆಕೆಯಿಂದಲೇ ಹಣ ಪಡೆದು, ನಂತರ ಸಿಮ್‌ ಖರೀದಿಸಿ ಬೇರೆರೊಬ್ಬರಿಗೆ ವಂಚಿಸುತ್ತಿದ್ದ. ಆರೋಪಿ ದೀಪಕ್ ಇದೇ ರೀತಿಯಾಗಿ ಹಲವು ಮಹಿಳೆಯರಿಗೆ ವಂ‍ಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಹಿಳೆ ಜೆ.ಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆ ನಡೆಸಿ ಆರೋಪಿ ದೀಪಕ್‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version