Site icon Vistara News

Fraud Case : ಶಾಸಕರ ನಕಲಿ ಸಹಿ ಬಳಸಿ ಕೆಲಸ ಗಿಟ್ಟಿಸಿಕೊಂಡ‌ ಖತರ್ನಾಕ್‌ ಖದೀಮರು

fraud case

ಬೆಂಗಳೂರು: ಶಾಸಕರ ಹೆಸರಿನಲ್ಲಿ ನಕಲಿ ಸಹಿ, ನಕಲಿ ಲೆಟರ್ ಹೆಡ್ ಸೃಷ್ಟಿಸಿ ಕೆಲಸ ಪಡೆದ ಆರೋಪ ಕೇಳಿ (Fraud Case ) ಬಂದಿದೆ. ನಕಲಿ ಲೆಟರ್ ಸೃಷ್ಟಿಸಿ ಕೆಲಸ ಪಡೆದ ಆರೋಪದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿದೆ. ಬೆಂಗಳೂರಿನ ವಿಧಾನಸೌಧ ಠಾಣಾ ಪೊಲೀಸರು ರಾಮನಗರದ ಸ್ವಾಮಿ(35), ಅಂಜನ್ ಕುಮಾರ್(28) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಮತ್ತೊಬ್ಬ ಆರೋಪಿ ಸ್ವಾಮಿ ಎಂಬಾತನ ಪತ್ನಿ ವಿನುತಾಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಾಮಿ ಕೆಲಸ ಮಾಡಿಕೊಂಡಿದ್ದ. ಆದರೆ ಕೆಲವು ದಿನಗಳ ನಂತರ ಕೆಲಸ ತೊರೆದು ರಾಜಕಾರಣಿಗಳ ಒಡನಾಟ ಬೆಳೆಸಿಕೊಂಡಿದ್ದ.

ಶಾಸಕ ಶಾಮನೂರು ಶಿವಶಂಕರಪ್ಪ ಸಹಿ ನಕಲಿ ಮಾಡಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ್ದ. ಆರೋಪಿ ಸ್ವಾಮಿ ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದು ವಿನುತಾ, ಅಂಜನ್‌ ಎಂಬುವವರಿಗೆ ಶಾಸಕರ ಆಪ್ತ ಸಹಾಯಕರ ಹುದ್ದೆ ಕೊಡಿಸಿದ್ದ.

ಇದನ್ನೂ ಓದಿ: Actor Darshan: ರೌಡಿಶೀಟರ್‌ ಮಗನ ಜೊತೆ ಜೈಲಿನಿಂದ ವಿಡಿಯೋ ಕಾಲ್;‌ ತನಿಖೆಗೆ ಗೃಹ ಸಚಿವರ ಸೂಚನೆ

ಲೆಟರ್ ಹೆಡ್ ಬಳಸಿ ಪತ್ನಿ ವಿನುತಾಗೆ ಶಿವಶಂಕರಪ್ಪ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸ್ಸು ಮಾಡಲಾಗಿತ್ತು. ವಿಧಾನಸಭಾ ಸಚಿವಾಲಯ ಸಿಬ್ಬಂದಿ ಈ ನಕಲಿ ಲೆಟರ್ ಹೆಡ್ ನಂಬಿ ವಿನುತಾಗೆ 2023ರ ಮೇ ನಲ್ಲಿ ಕೆಲಸ ನೀಡಿದ್ದರು. ಬಳಿಕ ಕೆಲಸಕ್ಕೆ ಬಾರದೆ ಪ್ರತಿ ತಿಂಗಳು 30 ಸಾವಿರ ಸಂಬಳವನ್ನು ವಿನುತಾ ಪಡೆದಿದ್ದಳು.

ಆನಂತರ ಗರ್ಭಿಣಿಯಾದ ಬಳಿಕ ಕೆಲಸದಿಂದ ಬಿಡುಗಡೆಗೊಳಿಸಲು ವಿನುತಾ ಪತ್ರ ಬರೆದಿದ್ದಳು. ಇದರ ಬಗ್ಗೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಅಧಿಕಾರಿಗಳು ವಂಚನೆ ಬಗ್ಗೆ ವಿಧಾನಸೌಧ ಠಾಣೆಗೆ ದೂರು‌ ನೀಡಿದ್ದರು.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಶಾಸಕ ಎಸ್.ರಘು ಹೆಸರಿನಲ್ಲೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಶಾಸಕ ರಘು ಹೆಸರಿನಲ್ಲಿ ನಕಲಿ ಲೆಟರ್ ಸೃಷ್ಟಿಸಿ ಅಂಜನ್ ಕುಮಾರ್ ಎಂಬಾತನಿಗೆ ಕೆಲಸ ಕೊಡಿಸಿದ್ದ. ಸದ್ಯ ಇಬ್ಬರನ್ನೂ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದಾವಣಗೆರೆಯಲ್ಲಿ ತಾಮದ್ರ ತಂತಿ ಕದಿಯುತ್ತಿದ್ದ ಕಳ್ಳರು ಅರೆಸ್ಟ್‌

ದಾವಣಗೆರೆಯ ಹರಿಹರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತಾಮ್ರದ ತಂತಿ ಹಾಗೂ ಎಲೆಕ್ಟ್ರಿಕಲ್ ಸಾಮಗ್ರಿ ಎಗರಿಸಿದ್ದ ಖತರ್ನಾಕ್ ಕಳ್ಳರ ಬಂಧನವಾಗಿದೆ. ಪೈಪ್ಸ್ ಮತ್ತು ಸ್ಪೀಂಕ್ಲರ್ ತಯಾರಿಕಾ ಘಟಕದಲ್ಲಿ ಕಳ್ಳತನ ಮಾಡಿದ್ದ ಹರಿಹರ ಮೂಲದ ಸೈಯದ್ ನೂರುದ್ದೀನ್ , ಮಹ್ಮದ್ ಆಸೀಫ್ ,ಇರ್ಷದ್ ಬಂಧಿತ ಆರೋಪಿಗಳು. ಘಟಕದಲ್ಲಿ 12 ಲಕ್ಷದ ಮೌಲ್ಯದ ಸಾಮಾಗ್ರಿ ಕದ್ದು ಪರಾರಿಯಾಗಿದ್ದರು.
ತಾಮ್ರದ ತಂತಿ ಮತ್ತು ಎಲೆಕ್ಟ್ರಿಕಲ್ ಸಾಮಗ್ರಿ, ಕೃತ್ಯಕ್ಕೆ ಬಳಸಿದ ಓಮಿನಿ ಮತ್ತು 02 ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಹರಿಹರ ತಾಲೂಕಿನ ಹನಗವಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೊಟ್ರೇಶ್ ನಾಯ್ಕ ಎಂಬುವವರಿಗೆ ಸಂಬಂಧಿಸಿದ ಗ್ರೀನ್ ರಾಯಲ್ ಘಟಕದಲ್ಲಿ ಕಳ್ಳತನವಾಗಿತ್ತು. ಆರೋಪಿತರ ಮೇಲೆ ವಿವಿಧೆಡೆ ಠಾಣೆಯಲ್ಲಿ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಹರಿಹರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version