ಬೆಂಗಳೂರು: ಪ್ರಿಯಕರನಿಂದ 26 ಲಕ್ಷ ರೂಪಾಯಿ ಹಣ ಪೀಕಿಸಿದ ಯುವತಿ, ಬೇರೊಬ್ಬನನ್ನು ಮದುವೆಯಾದ ಘಟನೆ ವರದಿಯಾಗಿದೆ. ಈ ಕುರಿತು ಯಮುನಾ ಎಂಬಾಕೆಯ ವಿರುದ್ಧ ದೂರು ಕ್ರಿಕೆಟರ್ ಕೀರ್ತಿರಾಜ್ ಎಂಬವರು ವಂಚನೆ (Fraud Case) ದೂರು ನೀಡಿದ್ದಾರೆ.
ಕೀರ್ತಿರಾಜ್ ಎಂಬಾತನಿಗೆ 2 ವರ್ಷದ ಹಿಂದೆ ಯಮುನಾ ಪರಿಚಯವಾಗಿದ್ದಳು. ಪರಿಚಯ ಪ್ರೀತಿಗೆ ತಿರುಗಿ ಮದುವೆ ಹಂತಕ್ಕೆ ಹೋಗಿತ್ತು. ತಾನು ತೀರ ಬಡವಳಿದ್ದೇನೆ, ಮದುವೆ ಖರ್ಚು ನೀನೇ ನೋಡಿಕೊಳ್ಳಬೇಕು ಎಂದು ಯಮುನಾ ಹೇಳಿದ್ದರು. ಹೇಗೂ ಮದುವೆಯಾಗುತ್ತೇವಲ್ಲ ಎಂದು ನಂಬಿ ಕೀರ್ತಿರಾಜ್ ಹಂತ ಹಂತವಾಗಿ ಆಕೆಗೆ 26 ಲಕ್ಷ ರೂ. ಹಣ ನೀಡಿದ್ದ.
ಕೆಲವು ದಿನಗಳ ಬಳಿಕ ಅದೇ ಹಣ ಬಳಸಿ ನಾಗೇಂದ್ರ ಎಂಬಾತನನ್ನು ಯಮುನಾ ಮದುವೆ ಮಾಡಿಕೊಂಡಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆ ಯಮುನಾಳನ್ನು ಕೀರ್ತಿರಾಜ್ ವಿಚಾರಿಸಿದ್ದ. ʼಅದೊಂದು ದೊಡ್ಡ ಕತೆ, ನಿನಗೆ ಹಣ ಮರಳಿ ಕೊಡುತ್ತೇನೆʼ ಎಂದು ಯಮುನಾ ಯಾಮಾರಿಸಿದ್ದಳು. ಆದರೆ ನಂತರ ಹಣ ವಾಪಸ್ ಬಾರದ ಹಿನ್ನೆಲೆಯಲ್ಲಿ ಮತ್ತೆ ಹಣ ಕೇಳಲು ಹೋದ ಕೀರ್ತಿರಾಜ್ ಮೇಲೆ ಯಮುನಾ, ಆಕೆಯ ತಮ್ಮ ಹಾಗೂ ನಾಗೇಂದ್ರ ಎಂಬಾತ ಹಲ್ಲೆ ನಡೆಸಿದ್ದಾರೆ. ಕೀರ್ತಿರಾಜ್ ಕಾರನ್ನೂ ಜಖಂ ಮಾಡಿದ್ದಾರೆ.
ಇದೇ ವೇಳೆ ಯಮುನಾ, ʼಹೌದು, ನಿಮ್ಮ ದುಡ್ಡಲ್ಲೇ ಮದುವೆಯಾಗಿದ್ದು, ಏನು ಮಾಡುತ್ತೀರೋ ಮಾಡಿಕೊಳ್ಳಿʼ ಎಂದು ಧಮಕಿ ಹಾಕಿದ್ದಳು. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೀರ್ತಿರಾಜ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Fraud Case : ಪೊಲೀಸ್ ಅಧಿಕಾರಿ ಎಂದು ನಂಬಿಸಿ ಯುವತಿಯ ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್; ನಾಟಕ ಕಲಾವಿದ ಅರೆಸ್ಟ್