ಬೆಂಗಳೂರು: ಜತೆಗೆ ಡೇಟಿಂಗ್ ಮಾಡುತ್ತಿದ್ದವನನ್ನು ತಾನು ಗರ್ಭಿಣಿ ಎಂದು ನಂಬಿಸಿ ಮದುವೆ ಮಾಡಿಕೊಂಡು ವಂಚಿಸಿದ ಘಟನೆ ನಡೆದಿದೆ.
ಅಮಿತ್ ಎಂಬಾತ ಸ್ವರಾಲಿ ಎಂಬ ಯುವತಿಯ ಜೊತೆ ಡೇಟಿಂಗ್ ನಡೆಸುತ್ತಿದ್ದ. ಈ ವೇಳೆ ಸ್ವರಾಲಿ, ಅಮಿತ್‌ನನ್ನು ಮದುವೆಯಾಗುವ ಉದ್ದೇಶದಿಂದ ತಾನು ಗರ್ಭಿಣಿ, ಕಿಮ್ಸ್‌ಗೆ ಹೋಗಿ ಗರ್ಭಪಾತ ಮಾಡಿಸಿಕೊಂಡಿದ್ದೇನೆಂದು ಸುಳ್ಳು ಹೇಳಿ ನಕಲಿ ವೈದ್ಯಕೀಯ ದಾಖಲೆಗಳನ್ನು ಸೃಷ್ಟಿಸಿ ಅಮಿತ್‌ನನ್ನು ನಂಬಿಸಿದ್ದಳು. ನಂತರ ಬಿಟಿಎಂ ಲೇಔಟ್‌ನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರು ಮದುವೆಯಾಗಿದ್ದರು.
ಮದುವೆಯ ಬಳಿಕ ಕಾರಣವಿಲ್ಲದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಮಿತ್‌ಗೆ ಸ್ವರಾಲಿ ಬೆದರಿಕೆ ಹಾಕುತ್ತಿದ್ದಳು. ಅಮಿತ್, ಪತ್ನಿಯನ್ನು ಮನೋವೈದ್ಯರಿಗೆ ತೋರಿಸಿ ಆಕೆಯ ಸ್ವಂತ ಊರು ಬೆಳಗಾವಿಗೆ ಬಿಟ್ಟು ಬಂದಿದ್ದ. ನಂತರ ಮತ್ತೆ ತಾನು ಗರ್ಭಿಣಿ ಎಂದು ಸುಳ್ಳು ಹೇಳಿ ಮತ್ತೆ ನಕಲಿ ದಾಖಲೆಗಳನ್ನು ಅಮಿತ್‌ಗೆ ನೀಡಿದ್ದಳು. ಆ ದಾಖಲೆಗಳನ್ನು ವೈದ್ಯರಿಗೆ ತೋರಿಸಿದಾಗ ಅದು ನಕಲಿ ದಾಖಲೆಗಳು ಎಂದು ತಿಳಿದುಬಂದಿದೆ.
ತನ್ನ ಮದುವೆಯಾಗಿದ್ದು ಕೂಡ ಇದೇ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎಂದು ಗೊತ್ತಾದ ಕೂಡಲೇ ಅಮಿತ್ ಪೊಲೀಸ್ ಠಾಣೆಗೆ ಪತ್ನಿ ವಿರುದ್ಧ ದೂರು ನೀಡಿದ್ದಾನೆ. ಸದ್ಯ ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Arshad Warsi: ಯೂಟ್ಯೂಬ್ ಮೂಲಕ ತಪ್ಪು ಮಾಹಿತಿ ನೀಡಿ ಷೇರು ಮಾರುಕಟ್ಟೆಯಲ್ಲಿ ವಂಚನೆ; ಅರ್ಷದ್ ವಾರ್ಸಿ ದಂಪತಿಗೆ ದಂಡ