Site icon Vistara News

Free Health Camp | ಕೇಸರಿ ಫೌ೦ಡೇಶನ್‌ನಿಂದ ಆ.26ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

health camp

ಬೆಂಗಳೂರು: ಕೇಸರಿ ಫೌಂಡೇಶನ್‌, ಮುತ್ತೂಟ್‌ ಫೈನಾನ್ಸ್‌ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ (Free Health Camp) ಆಯೋಜಿಸಲಾಗಿದೆ. ಇದೇ ಆಗಸ್ಟ್‌ 26ರಂದು ಬೆಳ್ಳಗ್ಗೆ 6.30ರಿಂದ ಮಧ್ಯಾಹ್ನ 2ಗಂಟೆ ವರೆಗೆ ತಪಾಸಣೆ ನಡೆಯಲಿದೆ.

ಉಚಿತ ಆರೋಗ್ಯ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಕೊಬ್ಬು, ಹೆಪಟೈಟಿಸ್ ಬಿ ವೈರಸ್ ಹಾಗೂ ಕ್ರಿಯೇಟಿನೈನ್ ಪರೀಕ್ಷೆ ಮಾಡಲಾಗುತ್ತದೆ. ಶಿಬಿರದಲ್ಲಿ ಉಚಿತ ಕನ್ನಡಕವನ್ನು ಹಾಗೂ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಕೊಡಿಸಲಾಗುವುದು.

ಬೆಂಗಳೂರಿನ ಥಣಿಸಂದ್ರ ಬಸ್ ನಿಲ್ದಾಣದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮುಂಭಾಗ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೇಸರಿ ಫೌಂಡೇಶನ್‌ನ ಸಂಸ್ಥಾಪಕ ತಮ್ಮೇಶ್‌ಗೌಡ ಎಚ್‌.ಸಿ ಇವರನ್ನು ಸಂಪರ್ಕಿಸಬಹುದಾಗಿದೆ. ಆಸಕ್ತರು 9591735999 ಅಥವಾ 9945566359 ಸಂಖ್ಯೆಗೆ ಸಂಪರ್ಕಿಸಬಹುದಾಗಿದ್ದು, ರಕ್ತ ಪರೀಕ್ಷೆ ಮಾಡಿಸಲು ಬರುವವರು ಖಾಲಿ ಹೊಟ್ಟೆಯಲ್ಲಿ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆಗೆ ತಾತ್ಕಾಲಿಕ ತಡೆ

Exit mobile version