Site icon Vistara News

Ganesha Chaturthi : ಗಣೇಶನ ಹಬ್ಬಕ್ಕೆ ಬೆಂಗಳೂರು- ಬೆಳಗಾವಿ ಮಧ್ಯೆ ವಿಶೇಷ ರೈಲು ಓಡಾಟ; Timings ಇಲ್ಲಿ ನೋಡಿ

Banagalore to Belagavi special train

ಬೆಂಗಳೂರು: ಗಣೇಶ ಚತುರ್ಥಿ (Ganesha Chaturthi) ಸಂದರ್ಭದಲ್ಲಿನ ಜನ ಸಂಚಾರದ ಒತ್ತಡ ಮನಗಂಡು ಭಾರತೀಯ ರೈಲ್ವೆ (Indian Railway) ಬೆಂಗಳೂರಿನಿಂದ ಬೆಳಗಾವಿಗೆ (Bangalore-Belagavi special train) ವಿಶೇಷ ರೈಲು ಸೇವೆ (Special train service) ಒದಗಿಸಲಿದೆ.

ಗಣೇಶ ಹಬ್ಬದ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ನೈಋುತ್ಯ ರೈಲ್ವೇ ಇಲಾಖೆ ಮಹಾ ಪ್ರಬಂಧಕರು ಬೆಂಗಳೂರಿನಿಂದ ಬೆಳಗಾವಿಗೆ ಬೆಳಗಾವಿಯಿಂದ ಬೆಂಗಳೂರಿಗೆ ಎರಡು ವಿಶೇಷ ರೈಲು ವ್ಯವಸ್ಥೆ ಮಾಡಿದ್ದಾರೆ.

  1. ಯಶವಂತಪುರ-ಬೆಳಗಾವಿ ರೈಲು ಸೆ.15ರಂದು ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಸೆ. 16ರ ಬೆಳಗ್ಗೆ 6 ಗಂಟೆಗೆ ಬೆಳಗಾವಿ ತಲುಪಲಿದೆ.
  2. ಬೆಳಗಾವಿ-ಯಶವಂತಪುರ ರೈಲು ಸೆ.16ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು 17ರಂದು ಬೆಳಗ್ಗೆ 4.30ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
  3. ಸೆ.17ರಂದು ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು 18ರಂದು ಬೆಳಗ್ಗೆ 6 ಗಂಟೆಗೆ ಬೆಳಗಾವಿ ತಲುಪಲಿದೆ.
  4. ಸೆ.18ರ ಸಂಜೆ 6.30ಕ್ಕೆ ಬೆಳಗಾವಿಯಿಂದ ಹೊರಟು 19 ರಂದು ಬೆಳಗ್ಗೆ 5.25ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.

ರೈಲು ಯಾವ ಯಾವ ನಿಲ್ದಾಣವನ್ನು ಎಷ್ಟು ಹೊತ್ತಿಗೆ ತಲುಪಲಿದೆ ಎಂಬ ಮಾಹಿತಿ ಇಲ್ಲಿದೆ

1.07389/07390 ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್

ಈ ವಿಶೇಷ ರೈಲು (07389) ಯಶವಂತಪುರ ಮತ್ತು ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 15 ರಂದು ಸಂಜೆ 06:15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗ ಮಧ್ಯದ ನಿಲ್ದಾಣಗಳು ಮತ್ತು ತಲುಪುವ ಸಮಯ

ತುಮಕೂರು-07:03/07:05pm
ಅರಸೀಕೆರೆ-08:15/08:20pm
ಬೀರೂರು-08:58/09:00pm
ದಾವಣಗೆರೆ-10:20/10:22pm
ಹರಿಹರ-10:36/10:38pm
ಹಾವೇರಿ12:03/12:05am
ಹುಬ್ಬಳ್ಳಿ-02:00/02:10am
ಮತ್ತು ಧಾರವಾಡ -02:38/02:40 am

ಇದೇ ರೈಲು ಹಿಂದಿರುಗುವಾಗ 07390 ಬೆಳಗಾವಿ ಮತ್ತು ಯಶವಂತಪುರ ಎಕ್ಸ್‌ಪುಸ್ ರೈಲು ಎಂದಾಗುತ್ತದೆ. ಸೆಪ್ಟೆಂಬರ್ 16 ರಂದು ಸಂಜೆ 05:30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 04:30 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

special trains

ಈ ರೈಲು ಮಾರ್ಗ ಮಧ್ಯದ ನಿಲ್ದಾಣಗಳು ಮತ್ತು ತಲುಪುವ ಸಮಯ

    ಧಾರವಾಡ-07:48/07:50pm
    ಹುಬ್ಬಳ್ಳಿ-08:35/08:45pm
    ಹಾವೇರಿ- 09:58/10:00pm
    ಹರಿಹರ-10:43/10:45pm
    ದಾವಣಗೆರೆ-11:13/11:15pm
    ಬೀರೂರು- 12:38/12:40am
    ಅರಸೀಕೆರೆ-01:15/01:20am
    ತುಮಕೂರು 02:28/02:30a

    2. 07391/07392 ಯಶವಂತಪುರ-ಬೆಳಗಾವಿ ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌

    ಈ ವಿಶೇಷ ರೈಲು (07391) ಯಶವಂತಪುರ ಮತ್ತು ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಸಪ್ಟೆಂಬರ್ 17 ರಂದು ಸಂಜೆ 06:15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸುತ್ತದೆ.

    ಈ ರೈಲು ಮಾರ್ಗ ಮಧ್ಯದ ನಿಲ್ದಾಣಗಳು ಮತ್ತು ತಲುಪುವ ಸಮಯ

    ತುಮಕೂರು-07:03/07:05pm
    ಅರಸೀಕೆರೆ 08:15/08:20pm
    ಬೀರೂರು 08:58/09:00pm
    ದಾವಣಗೆರೆ 10:20/10:22pm
    ಹರಿಹರ-10:36/10:38 pm
    ಹಾವೇರಿ 12:03/12:05am
    ಹುಬ್ಬಳ್ಳಿ 02:00/02:10am
    ಧಾರವಾಡ 02:38/02:40am

    ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07392 ಬೆಳಗಾವಿ ಮತ್ತು ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಎಂದಾಗಲಿದೆ. ಸೆಪ್ಟೆಂಬರ್ 18ರಂದು ಸಂಜೆ 06:30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 05:25 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.

    ಈ ರೈಲು ಮಾರ್ಗ ಮಧ್ಯದ ನಿಲ್ದಾಣಗಳು ಮತ್ತು ತಲುಪುವ ಸಮಯ

    ಧಾರವಾಡ- 09:18/09:20pm
    ಹುಬ್ಬಳ್ಳಿ- 09:50/10:10pm
    ಹಾವೇರಿ-11:08/11:10pm
    ಹರಿಹರ-11:56/11:58pm
    ದಾವಣಗೆರೆ-12:18/12:20am
    ಬೀರೂರು-01:40/01:42am
    ಅರಸೀಕೆರೆ-02:27/0:30am
    ತುಮಕೂರು-03:50/03:52am

    special trains

    ಇದನ್ನೂ ಓದಿ: Ganesha Chaturthi 2023 : ಗೌರಿ-ಗಣೇಶ ಹಬ್ಬಕ್ಕಾಗಿ ಪ್ರಯಾಣಿಕರಿಗೆ KSRTC ಗುಡ್ ನ್ಯೂಸ್; 1200 ಹೆಚ್ಚುವರಿ ಬಸ್‌!

    Exit mobile version