ಬೆಂಗಳೂರು: ಮದುವೆ ನಿಶ್ಚಯಗೊಂಡಿದ್ದ 17 ವರ್ಷದ ಅಪ್ರಾಪ್ತ ವಯಸ್ಕೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಸವೇಶ್ವರನಗರದ ಕಮಲಾನಗರದ ನಿವಾಸಿ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಶಿವಮೊಗ್ಗ ಮೂಲದ 17 ವರ್ಷ 6 ತಿಂಗಳು ವಯಸ್ಸಿನ ರಕ್ಷಿತಾ, ಅಣ್ಣನ ಜೊತೆಗೆ ಬೆಂಗಳೂರಿನಲ್ಲಿ ವಾಸವಿದ್ದಳು. ಇತ್ತೀಚೆಗಷ್ಟೆ ರಕ್ಷಿತಾಗೆ ಮದುವೆ ನಿಶ್ಚಯವಾಗಿತ್ತು. ಆದರೆ ರಕ್ಷಿತಾಗೆ 18 ವರ್ಷ ತುಂಬಿರಲಿಲ್ಲ. 18 ವರ್ಷ ತುಂಬಿಕ ಬಳಿಕ ಪೋಷಕರು ಮದುವೆ ಮಾಡುವ ಯೋಚನೆಯಲ್ಲಿದ್ದರು. ಆದರೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಸವೇಶ್ವರನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Leena Nagwanshi Death | ನಟಿ ತುನಿಶಾ ಶರ್ಮಾ ಬೆನ್ನಲ್ಲೇ ಛತ್ತೀಸ್‌ಗಢದಲ್ಲಿ 22 ವರ್ಷದ ಯುಟ್ಯೂಬರ್ ಆತ್ಮಹತ್ಯೆ