Site icon Vistara News

50 ಪ್ರಯಾಣಿಕರನ್ನು ನಿಲ್ದಾಣದಲ್ಲೇ ಬಿಟ್ಟು ಟೇಕಾಫ್ ಆದ ವಿಮಾನ!

air travel

ದೇವನಹಳ್ಳಿ: 50 ಜನ ಪ್ರಯಾಣಿಕರನ್ನು ಟರ್ಮಿನಲ್‌ನಲ್ಲೇ ಬಿಟ್ಟು ವಿಮಾನವೊಂದು ಟೇಕಾಫ್ ಆದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ʼಗೋ‌ ಫಸ್ಟ್ ಏರ್‌ಲೈನ್ಸ್ʼ ನಿರ್ಲಕ್ಷ್ಯದಿಂದ ಇದು ಘಟಿಸಿದೆ.

ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಗೋ ಫಸ್ಟ್ ವಿಮಾನ ಸುಮಾರು 50 ಜನ ಪ್ರಯಾಣಿಕರನ್ನು ಟರ್ಮಿನಲ್‌ನಲ್ಲೇ ಬಿಟ್ಟು ಟೇಕಾಫ್ ಆಯಿತು. ಬೋರ್ಡಿಂಗ್ ‌ಗೇಟ್‌ನಿಂದ‌ ಮೊದಲ ಬಸ್ ಹೋಗಿತ್ತು. ಎರಡನೇ ‌ಬಸ್ ವಿಮಾನದ ‌ಬಳಿ‌ ಹೋಗುವ ಮೊದಲೇ ಟೇಕಾಫ್ ಆಗಿದೆ. ಬೋರ್ಡಿಂಗ್ ಆದರೂ ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕ್ಷಮೆಯಾಚಿಸಿದ ಗೋ ಫಸ್ಟ್‌ ಏರ್‌ಲೈನ್ಸ್ ಕ್ಷಮೆ ಯಾಚಿಸಿದೆ. 50 ಪ್ರಯಾಣಿಕರ ಪೈಕಿ ಕೆಲವರಿಗೆ ಮತ್ತೊಂದು ವಿಮಾನದಲ್ಲಿ ಅವಕಾಶ ನೀಡಿದೆ. ಇನ್ನೂ ಕೆಲವರಿಗೆ ಹಣ ವಾಪಸ್ ‌ನೀಡಿದೆ. ಈ ಘಟನೆ ಬಗ್ಗೆ ಹಲವು ಪ್ರಯಾಣಿಕರು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | TATA Group | ಏರ್‌ಬಸ್, ಬೋಯಿಂಗ್ ಸೇರಿ 500 ವಿಮಾನ ಖರೀದಿಸಲಿದೆಯೆ ಏರ್‌ ಇಂಡಿಯಾ?

Exit mobile version