Site icon Vistara News

Govt. Employees : ಸರ್ಕಾರಿ ನೌಕರರು ಕೋರ್ಟ್‌ನಲ್ಲಿ ಜಾಮೀನು ಪಡೆದರೂ ಶಿಸ್ತುಕ್ರಮದಿಂದ ವಿನಾಯಿತಿ ಇಲ್ಲ

Govt Employees

ಬೆಂಗಳೂರು: ಕ್ರಿಮಿನಲ್ ನ್ಯಾಯಾಲಯದಲ್ಲಿ (Criminal court) ದಂಡನೆಗೆ ಒಳಗಾದ ಸರ್ಕಾರಿ ನೌಕರರ (Govt. Employees) ವಿರುದ್ಧ ಶಿಸ್ತುಕ್ರಮ ಜರುಗಿಸುವ (Disciplinary Action) ಬಗ್ಗೆ ರಾಜ್ಯ ಸರ್ಕಾರ (Karnataka Government) ಮಹತ್ವದ ಆದೇಶ ಹೊರಡಿಸಿದೆ. ಒಂದೊಮ್ಮೆ ಸರ್ಕಾರಿ ನೌಕರರು ಕ್ರಿಮಿನಲ್‌ ಪ್ರಕರಣದಲ್ಲಿ ಜಾಮೀನು ಪಡೆದರೂ ಅವರ ಮೇಲಿನ ಶಿಸ್ತುಕ್ರಮವನ್ನು ತಡೆ ಹಿಡಿಯುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 14(i)ರ ಅನ್ವಯಿಕೆಗೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಈ ಆದೇಶದಲ್ಲಿ ಸುಪ್ರೀಂಕೋರ್ಟ್‌ ಈ ಹಿಂದೆ ನೀಡಿದ ತೀರ್ಪು (The Deputy Director of Collegiate Education Vs S.Nagoor Meera (AIR 1995 SC 1364) ಮತ್ತು ಪ್ರತಿಪಾದಿಸಿರುವ ವಿಚಾರಗಳನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿದೆ : Govt Employees Conference: ಬೆಂಗಳೂರಿನಲ್ಲಿ ಫೆ.27ರಂದು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ

ಏನಿದೆ ಆದೇಶದಲ್ಲಿ?

  1. ಕ್ರಿಮಿನಲ್ ನ್ಯಾಯಾಲಯದಲ್ಲಿ ದಂಡನೆಗೆ ಒಳಗಾದ ಸರ್ಕಾರಿ ನೌಕರನು ಕ್ರಿಮಿನಲ್ ನ್ಯಾಯಾಲಯದ ದಂಡನಾ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾನೆ ಎಂಬ ಕಾರಣಕ್ಕಾಗಿ ಆತನ ಮೇಲಿನ ಕ್ರಮವನ್ನು ತಡೆ ಹಿಡಿಯುವಂತಿಲ್ಲ.
  2. ಆರೋಪಿತ ವ್ಯಕ್ತಿಯು ಮೇಲನವಿ ಸಲ್ಲಿಸಿದ್ದಾನೆ, ಮೇಲಿನ ನ್ಯಾಯಾಲಯವು ಕ್ರಿಮಿನಲ್ ನ್ಯಾಯಾಲಯದ ದಂಡನೆ ಆದೇಶವನ್ನು ನಿಲಂಬನೆಯಲ್ಲಿಟ್ಟಿದೆ ಎಂಬುದೂ ಶಿಸ್ತು ಕ್ರಮ ತಡೆಗೆ ಕಾರಣವಾಗುವುದಿಲ್ಲ.
  3. ಮೇಲ್ಮನವಿ ಅರ್ಜಿ ಇತ್ಯರ್ಥದಲ್ಲಿರುವಾಗ ಜಾಮೀನಿನ ಮೇಲೆ ಬಿಡುಗಡೆ ಪಡೆದಿದ್ದಾನೆ ಎಂಬ ಕಾರಣಕ್ಕಾಗಿಯೂ ಕ್ರಮದಿಂದ ಹಿಂದೆ ಸರಿಯುವಂತಿಲ್ಲ.
  4. ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 14(i) ರನ್ನಯ ಕ್ರಮ ಜರುಗಿಸುವುದನ್ನು ತಡೆ ಹಿಡಿಯದೆ ಸಂವಿಧಾನದ 311(2)ರಡಿ ಎರಡನೇ ಪರಂತುಕದ ಸಮರ್ಥನೆ ಪಡೆದಿರುವ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 14(1) ರನ್ವಯ ಶಿಸ್ತಿನ ಕ್ರಮ ಕೈಗೊಳ್ಳತಕ್ಕದ್ದು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ.
  5. 26.6.1996ರ ಸುತ್ತೋಲೆ ಹಾಗೂ ಮೇಲೆ ನೀಡಲಾದ ಸೂಚನೆಗಳನ್ನು ಉಲ್ಲಂಘಿಸುವ ಪುಕರಣಗಳಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸತಕ್ಕದ್ದು ಎಂದು ಸೂಚಿಸಲಾಗಿದೆ.
  6. ಸರ್ಕಾರದ ಎಲ್ಲಾ ಅವರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯವರು ಈ ಸೂಚನೆಗಳನ್ನು ಅವರವರ ಕಾರ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೇಮಕಾತಿ ಮತ್ತು ಶಿಸ್ತುಪ್ರಾಧಿಕಾರಿಗಳ ಗಮನಕ್ಕೆ ತರಲು ಸೂಚಿಸಿದೆ ಎಂದು ಹೇಳಿದೆ.
Exit mobile version