Site icon Vistara News

ಗಣೇಶ ಇಡುವ ವಿಚಾರಕ್ಕೆ ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮುಸುಕುಧಾರಿಗಳು ಎಸ್ಕೇಪ್

ಗುಂಪು ಘರ್ಷಣೆ

ಬೆಂಗಳೂರು : ಚಾಮರಾಜಪೇಟೆಯ ಆಜಾದ್ ನಗರದಲ್ಲಿ ಗಣೇಶ ಇಡುವ ವಿಚಾರಕ್ಕೆ ಗುಂಪು ಘರ್ಷಣೆ ಗುರುವಾರ (ಸೆ.22) ನಡೆದಿದೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮುಸುಕುಧಾರಿಗಳು ಎಸ್ಕೇಪ್ ಆಗಿದ್ದಾರೆ.

ಗಣೇಶ ಇಡುವ ವಿಚಾರಕ್ಕೆ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಗಣೇಶ ಕೂರಿಸಲು ಒಂದು ಗುಂಪು ಮುಂದಾಗಿತ್ತು. ಆದರೆ ಚಾಮರಾಜಪೇಟೆ ಪೊಲೀಸರು ಅನುಮತಿ ನೀಡಿರಲಿಲ್ಲ. ಇದೇ ವಿಚಾರಕ್ಕೆ ಹೆಲ್ಮೆಟ್ ಹಾಕಿಕೊಂಡು ಬಂದ ಒಂದು ಗುಂಪಿನ ಕಡೆಯವರು, ಇನ್ನೊಂದು ಗುಂಪಿನವರ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಇದನ್ನೂ ಓದಿ | ಗುಂಪು ಘರ್ಷಣೆ; ಹುಲಿಹೈದರ್‌ ಗ್ರಾಮದಲ್ಲಿ ಆ.25ರವರೆಗೆ 144 ಸೆಕ್ಷನ್‌ ವಿಸ್ತರಣೆ

Exit mobile version