Site icon Vistara News

Hanuman Chalisa : ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಇವರೇ ನೋಡಿ..

Hanuman Chalisa Accused

ಬೆಂಗಳೂರು: ಬೆಂಗಳೂರಿನ (Bangalore News) ನಗರ್ತ ಪೇಟೆಯ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ (Hanuman Chalisa) ಶ್ಲೋಕ ಹಾಕಿದ ಎಂಬ ಕಾರಣಕ್ಕಾಗಿ ಹಿಂದು ವ್ಯಾಪಾರಿಯೊಬ್ಬನ (Attack on Hindu Trader) ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ (Five people Arrested). ಅವರಲ್ಲಿ ಒಬ್ಬ ಅಪ್ರಾಪ್ತ ವಯಸ್ಸಿನವನೂ ಇದ್ದಾನೆ. ಸುಲೇಮಾನ್‌, ಷಹನವಾಜ್‌, ರೋಹಿತ್‌, ಡ್ಯಾನಿಷ್‌, ತರುಣ್‌ ಅಲಿಯಾಸ್‌ ದಡಿಯಾ ಎಂಬವರೇ ಹನುಮಾನ್‌ ಚಾಲೀಸಾ ಕೇಳಿಸಿಕೊಳ್ಳಲಾಗದೆ ಹಲ್ಲೆ ಮಾಡಿದವರು.

ಮಾರ್ಚ್‌ 17ರ ಭಾನುವಾರ ಸಾಯಂಕಾಲ 6.15ರ ಹೊತ್ತು. ನಗರ್ತ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಸಿದ್ಧಣ್ಣ ಗಲ್ಲಿಯಲ್ಲಿ ಕಾರ್ಯಾಚರಿಸುತ್ತಿರುವ ಕೃಷ್ಣ ಟೆಲಿಕಾಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಕೇಶ್‌ ಅವರು ಹನುಮಾನ್‌ ಚಾಲೀಸಾ ಹಾಕಿದ್ದರು.

ಆಗ ಅಲ್ಲಿಗೆ ಆಗಮಿಸಿದ ಸುಲೇಮಾನ್‌, ಷಹನವಾಜ್‌, ರೋಹಿತ್‌, ಡ್ಯಾನಿಷ್‌, ತರುಣ್‌ ಅಲಿಯಾಸ್‌ ದಡಿಯಾ ಮತ್ತು ಇನ್ನೊಬ್ಬ ವ್ಯಕ್ತಿ ಹಿಂದು ದೇವರ ಭಜನೆಯನ್ನು ಬಂದ್‌ ಮಾಡಲು ಹೇಳಿದ್ದಾರೆ. ಅಂಗಡಿಯಲ್ಲಿದ್ದ ಮುಖೇಶ್‌, ನನ್ನ ಅಂಗಡಿ ನನ್ನ ಇಷ್ಟ ಎಂದು ವಿರೋಧ ಮಾಡಿದ್ದಾರೆ. ಈಗ ಆಜಾನ್‌ ಟೈಮ್‌, ದೇವರ ಭಜನೆ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದರು. ಆದರೆ, ಮುಕೇಶ್‌ ಅವರ ಮಾತು ಕೇಳಿಲ್ಲ. ನಾನು ನಮ್ಮ ದೇವರ ಹಾಡು ಹಾಕಿದರೆ ನಿಮಗೇನು ತೊಂದರೆ ಎಂದು ಕೇಳಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪು ಮುಖೇಶ್‌ ಮೇಲೆ ದಾಳಿ ಮಾಡಿದ್ದಾರೆ. ಮುಖೇಶ್‌ ಸಹ ಆವೇಶದಿಂದ ಪ್ರತಿದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ನಾಲ್ಕೈದು ಮಂದಿ ಇದ್ದಿದ್ದರಿಂದ ಮುಖೇಶ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಿಕೊಂಡಿರುವ ಸುಲೇಮಾನ್‌, ಷಹನವಾಜ್‌, ರೋಹಿತ್‌, ಡ್ಯಾನಿಷ್‌, ತರುಣ್‌ ಅಲಿಯಾಸ್‌ ದಡಿಯಾ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : Hanuman Chalisa: ನಗರ್ತಪೇಟೆಯಲ್ಲಿ ಗುಡುಗಿದ ‘ಕೇಸರಿ’; ಕಠಿಣ ಕ್ರಮದ ಭರವಸೆ, ಪ್ರತಿಭಟನೆಗೆ ವಿರಾಮ

ಬಂಧಿತರ ಪ್ರವರ ಹೀಗಿದೆ ನೋಡಿ..

ಮುಖೇಶ್ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಲ್ಲಿ ಪ್ರಮುಖನಾಗಿರುವ ಸುಲೇಮಾನ್ ಬಾಡಿಗೆ ವಾಹನಕ್ಕೆ ಕಾರು ಚಾಲಕನಾಗಿ ಹೋಗುತ್ತಿದ್ದ. ಷಹನವಾಜ್‌ಗೆ ಯಾವುದೇ ಕೆಲಸವಿಲ್ಲ. ರೋಹಿತ್ ಮೆಡಿಕಲ್ ಸ್ಟೋರ್ ಗಳಿಗೆ ಔಷಧ ಸಪ್ಲೈ ಮಾಡೋ ಕೆಲಸ ಮಾಡುತ್ತಿದ್ದ. ತರುಣ್ ಖಾಸಗಿ ಆಸ್ಪತ್ರೆಯೊಂದರಲ್ಲಿ ವಾರ್ಡ್ ಬಾಯ್ ಆಗಿದ್ದ.

21 ದಿನದ ಹಿಂದೆ ಹೋಟೆಲ್‌ ಮಾಲೀಕನ ಮೇಲೆ ಹಲ್ಲೆ ಮಾಡಿದ್ದ ಗ್ಯಾಂಗ್‌

ಸುಲೇಮಾನ್‌ ಮತ್ತು ಗ್ಯಾಂಗ್‌ ಈ ಭಾಗದಲ್ಲಿ ಇಂಥ ದುಷ್ಟ ಕೃತ್ಯಗಳಲ್ಲಿ ಭಾಗಿಯಾಗುವುದು ಇದು ಮೊದಲ ಸಲವೇನೂ ಅಲ್ಲ. ಮುಕೇಶ್‌ ನ ಅಂಗಡಿಗೇ ಈ ಹಿಂದೆ ಹಲವು ಬಾರಿ ಬಂದು ಬೇರೆ ಬೇರೆ ವಸ್ತುಗಳನ್ನು ಕೇಳಿತ್ತು. ಅವರು ಹಣ ಕೊಡದೆ ದಬಾಯಿಸಿ, ಬೆದರಿಸಿ ಹೋಗುತ್ತಾರೆ ಎಂಬ ಕಾರಣಕ್ಕೆ ಮುಕೇಶ್‌ ಕೊಡುತ್ತಿರಲಿಲ್ಲ ಎನ್ನಲಾಗಿದೆ.

ಕಳೆದ 21 ದಿನಗಳ‌ ಹಿಂದೆಯಷ್ಟೇ ಹೋಟೆಲ್‌ ಬ್ಯುಸಿನೆಸ್‌ ನಡೆಸುತ್ತಿದ್ದ ಸತೀಶ್‌ ಎಂಬವರ ಮೇಲೆ ಈ ಗ್ಯಾಂಗ್‌ ಹಲ್ಲೆ ಮಾಡಿದೆ. ಈ ಗ್ಯಾಂಗ್‌ನ ಕೆಲವರು ಸತೀಶ್‌ ಅವರ ಹೋಟೆಲ್‌ಗೆ ಹೋಗಿ ಫ್ರೀಯಾಗಿ ಊಟ ಕೊಡಬೇಕು ಎಂದು ಕೇಳಿದ್ದಾರೆ. ಊಟ ಕೊಟ್ಟಿಲ್ಲ ಎಂದು ಹೋಟೆಲ್‌ ಮಾಲೀಕ ಸತೀಶ್ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದರು.

ಈ ಬಗ್ಗೆ ದೂರು ನೀಡಿದರೂ ಪೊಲೀಸರು ದೂರು ಸ್ವೀಕರಿಸಿರಲಿಲ್ಲ ಎನ್ನಲಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರ ಮುಂದೆ ಸಾರ್ವಜನಿಕರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಆರೋಪಿಗಳಿಗೆ ಪೊಲೀಸರ ಬೆಂಬಲವೂ ಇರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Exit mobile version