ಬೆಂಗಳೂರು: ಸಂಘ ಪರಿವಾರದ ಆರೋಗ್ಯ ಭಾರತೀಯ ಸ್ವಾಸ್ಥ್ಯ ಕಾರ್ಯಕ್ರಮದ ಭಾಗವಾಗಿ ನಗರದ ಬಸವನಗುಡಿ ಗಾಂಧಿ ಬಜಾರ್ ಮುಖ್ಯರಸ್ತೆಯ ಅಬಲಾಶ್ರಮದಲ್ಲಿ ಆಗಸ್ಟ್ 7ರಂದು(ಭಾನುವಾರ) ಆರೋಗ್ಯ ತಪಾಸಣಾ ಶಿಬಿರ (Health Camp) ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಕ್ಯಾನ್ಸರ್, ನರರೋಗ, ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ. ಹಾಗೆಯೇ ಶಿಬಿರದಲ್ಲಿ ಇಸಿಜಿ ಮತ್ತು ರಕ್ತ ಪರೀಕ್ಷೆ ನಡೆಸಲಾಗುತ್ತದೆ. ವಿಶೇಷವಾಗಿ ಮಧುಮೇಹ, ನರರೋಗ, ಅಂಗೈ ಅಂಗಾಲು ಪಾದಗಳ ಉರಿ ಮತ್ತು ಪಾರ್ಶ್ವವಾಯು, ನರಗಳ ಸೆಳೆತ ಇದ್ದವರು ತಪಾಸಣೆ ಮಾಡಿಸಿಕೊಳ್ಳಬಹುದು. ಶಿಬಿರಕ್ಕೆ ಆಗಮಿಸುವವರು ಶೀಘ್ರವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಅಬಲಾಶ್ರಮ ಆಡಳಿತ ಮಂಡಳಿ ಕೋರಿದೆ. ಸಂಘ ಪರಿವಾರದ ಆರೋಗ್ಯ ಭಾರತೀಯ ಸ್ವಾಸ್ಥ್ಯ ಕಾರ್ಯಕ್ರಮದಡಿ ಪ್ರತಿ ತಿಂಗಳು ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗುತ್ತದೆ.
ಇದನ್ನೂ ಓದಿ | Run for Health | ಆರೋಗ್ಯಕ್ಕಾಗಿ ಮುಂಜಾನೆ ಓಟ ಹಿರಿಯ, ಕಿರಿಯರ ಉತ್ಸಾಹ