Site icon Vistara News

Electric shock | ಹೈಟೆನ್ಷನ್‌ ವಿದ್ಯುತ್ ತಂತಿ ತಗುಲಿ ಶಾಕ್:‌ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವು

ಬೆಂಗಳೂರು: ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೈ ಟೆನ್ಷನ್ ತಂತಿ ತಗುಲಿ ವಿದ್ಯುತ್ ಶಾಕ್ ಸಂಭವಿಸಿದ ಪ್ರಕರಣದಲ್ಲಿ, ಚಿಕಿತ್ಸೆ ಫಲಕಾರಿಯಾಗದೆ (Electric shock ) ಗಾಯಾಳು ಬಾಲಕ ಮೃತಪಟ್ಟಿದ್ದಾನೆ.

ಕಳೆದ ಮೂರು ದಿನದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕ ಸುಪ್ರೀತ್‌, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ.‌

ಪಾರಿವಾಳ ಹಿಡಿಯುವ ಆತುರದಲ್ಲಿದ್ದ ಇಬ್ಬರು ಬಾಲಕರು ವಿದ್ಯುದಾಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಚಂದ್ರು, ಸುಪ್ರೀತ್‌ಗೆ ಸುಟ್ಟ ಗಾಯಗಳಾಗಿತ್ತು.

Exit mobile version