Site icon Vistara News

ನಕಲಿ ಸಿಮ್‌ ಬಳಸಿ ಬೆದರಿಕೆ, ಹನಿಟ್ರ್ಯಾಪ್‌ ಮಾಡುತ್ತಿದ್ದವರು ಪೊಲೀಸ್‌ ಬಲೆಗೆ

ಹನಿಟ್ರ್ಯಾಪ್

ಬೆಂಗಳೂರು: ನಕಲಿ ಸಿಮ್‌ ಬಾಕ್ಸ್‌ಗಳನ್ನು ಬಳಸಿ ಬೆದರಿಕೆ ಒಡ್ಡಿ ಹಣ ಸುಲಿಗೆ ಮಾಡುವ ಮತ್ತು ಹನಿಟ್ರ್ಯಾಪ್‌ ಮಾಡುವ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ.

ಇಂಟರ್ನ್ಯಾಷನಲ್‌ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾಡಿ ಇವರು ನೂರಾರು ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ವಂಚಿಸಿದ್ದರು. ರವಿಚಂದ್ರ, ಸುಬೇರ್‌, ಮನು, ಇಸ್ಮಾಯಿಲ್‌ ಅಬ್ದುಲ್ಲಾ, ಸಾಹಿರ್‌, ಜೋಹರ್‌ ಶರಿಫ್‌ ಆರೋಪಿಗಳಾಗಿದ್ದಾರೆ. ವಿದೇಶಿ ಕರೆಗಳಿಗೆ ಒಂದು ನಿಮಿಷಕ್ಕೆ ₹ 10 ಇದ್ದರೆ ಈ ಮಾರ್ಗವಾಗಿ ಕೇವಲ ₹ 1ನಲ್ಲಿ ಕರೆ ಮಾಡಬಹುದು ಎಂದು ಒಂದು ತಿಂಗಳಲ್ಲಿ ಹದಿನೇಳು ಲಕ್ಷ ಹಣ ಗಳಿಸಿದ್ದಾರೆ. ಅರೋಪಿಗಳ ಗಳಿಕೆಗಿಂತ ಹತ್ತು ಪಟ್ಟು ಹಣ ಸರಕಾರಕ್ಕೆ ವಂಚನೆ ಆಗುತ್ತಿತ್ತು.

ಇದನ್ನೂ ಓದಿ | ಪಾಕ್‌ ಮಹಿಳೆಯ ಜಾಲದಲ್ಲಿ ಭಾರತೀಯ ಸೈನಿಕ; ಹನಿಟ್ರ್ಯಾಪ್‌ ಆದವನೀಗ ಜೈಲಿನಲ್ಲಿ

ಕಾಲ್‌ ಸೆಂಟರ್‌ ಮಾದರಿಯಲ್ಲಿ ದಂಧೆ ಶುರು ಮಾಡಿಕೊಂಡಿದ್ದ ಅರೋಪಿಗಳು ಸಿಮ್‌ ಬಾಕ್ಸ್‌ ಮತ್ತು ಸಿಪ್‌ ಟ್ರಂಕ್ಸ್‌ ಬಳಸುತ್ತಿದ್ದರು. ಚೀನಾದಿಂದ ಸಿಮ್‌ ಬಾಕ್ಸ್‌ ಹಾಗೂ ಟ್ರಂಕ್ಸ್‌ಗಳನ್ನು ಖರೀದಿ ಮಾಡಿದ್ದರು. ಏಳು ಲ್ಯಾಪ್‌ಟ್ಯಾಪ್‌, 204 ಸಿಮ್‌ ಕಾರ್ಡ್‌. ಹದಿನಾಲ್ಕು ಸಿಮ್‌ ಬಾಕ್ಸ್‌, ಇಂಟರ್‌ ನೆಟ್‌ ವೈಫೈ ರೂಟರ್ಸ್‌,  ಮೊಬೈಲ್ ಫೋನ್‌ಗಳು ಪೊಲೀಸರು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದು, ಇನ್ನೂ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಮಹದೇವಪುರ ಹಾಗು ಚಿಕ್ಕಬಾಣವಾರ ಕೃತ್ಯ ಎಸಗಿದ್ದಾರೆ. ಬಾಡಿಗೆಗೆ ಮನೆಗಳನ್ನು ಪಡೆದುಕೊಂಡು ಕೃತ್ಯ ಎಸಗುತ್ತಿದ್ದರು. ಇಂಟರ್ನೆಟ್‌ ಬಳಸಿ ನಂಬರ್ ಬದಲಾವಣೆ ಕರೆ ಬಂದಿದ್ದು, ಈ ಮೂಲದ ದುಬೈನಿಂದ ಪುತ್ತೂರಿನ ವ್ಯಕ್ತಿಯೊಬ್ಬನಿಗೆ ಬೆದರಿಗೆ ಹಾಕಿದ್ದ ಕೇಸ್ ದಾಖಲಾಗಿತ್ತು.. ಈ ರೀತಿ ಅಕ್ರಮ ಕೃತ್ಯ ಎಸಗುತ್ತಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಮಂಗಳೂರಿನ ವ್ಯಕ್ತಿಯೊಬ್ಬನಿಗೆ ಕೊಲೆ ಬೆದರಿಕೆ ಹಾಕಿದ್ದು ಕೂಡ ಬಯಲಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅಪರಾಧ ಹೇಗೆ ನಡೆಯುತ್ತದೆ?

ಇದು ಒಂದು ರೀತಿ ಫೋನ್ ಕರೆಗಳ ಡಾರ್ಕ್ ವೆಬ್. ಕರೆ ಮಾಡಿದವರ ನಂಬರ್ ಕರೆ ಸ್ವೀಕರಿಸಿದ ವ್ಯಕ್ತಿಗೆ ಗೊತ್ತಾಗುವುದಿಲ್ಲ. ಬದಲಾಗಿ ಬೇರೆ ನಂಬರ್‌ನಿಂದ ಕರೆ ಬಂದ ರೀತಿ ಕಾಣಿಸುತ್ತದೆ. ಹೀಗಾಗಿ ಕೇಸ್ ದಾಖಲಾಗಿದ್ದರೂ ಯಾರು ಕರೆ ಮಾಡಿದ್ದರು ಅನ್ನುವುದು ಗೊತ್ತಾಗುವುದಿಲ್ಲ. ಕರೆ ಬಂದಿದ್ದ ನಂಬರ್ ಸಿಡಿಆರ್ ಪಡೆದಿದ್ದರೆ ಆ ನಂಬರ್‌ಗೆ ಉಳಿದ ಮಾಹಿತಿ ಏನೂ ಸಿಗುವುದಿಲ್ಲ. ಹೀಗಾಗಿ ಅಪರಾಧ ಕೃತ್ಯಕ್ಕೆ ಈ  ಮಾರ್ಗ ಬಳಕೆ ಮಾಡಲಾಗಿದೆ. ಇಂಟರ್ನ್ಯಾಷನಲ್ ಕಾಲ್‌, ಹನಿಟ್ರ್ಯಾಪ್‌, ಬೆದರಿಕೆ ಕರೆಗಳು, ಡ್ರಗ್ಸ್ ಮಾಫಿಯಾ, ಟೆರರಿಸ್ಟ್ ಆಕ್ಟಿವಿಟಿ, ಅಂಡರ್ ವರ್ಡ್ ಕಾಲ್‌ಗಳು ಪ್ರಕಾರದ ರೀತಿ ಕರೆಗಳು ಬರುತ್ತಿದ್ದವು.

ಇದನ್ನೂ ಓದಿ | Honey trap | ಡಾಕ್ಟರ್‌ ರೂಮ್‌ಗೆ ಯುವತಿ ಕಳುಹಿಸಿ ಕೋಟಿ ರೂ. ಕಿತ್ತಿದ್ದ ಟೀಮ್‌ ಅರೆಸ್ಟ್

Exit mobile version