Site icon Vistara News

Town Hall |‌ ಗಣೇಶ ಹಬ್ಬದ ಆಫರ್; ಪುಟ್ಟಣ್ಣ ಚೆಟ್ಟಿ ಪುರಭವನ ಬಾಡಿಗೆ ಇಳಿಕೆ

Town Hall

ಬೆಂಗಳೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪುಟ್ಟಣ್ಣ ಚೆಟ್ಟಿ ಪುರಭವನ(Town Hall) ಬಾಡಿಗೆ ಭಾರಿ ಇಳಿಕೆಯಾಗಿದೆ. ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಿಸಲು ಹಾಗೂ ಕನ್ನಡ ರಂಗಭೂಮಿಗೆ ರಂಗ ವೇದಿಕೆಗಳ ಕೊರತೆ ನೀಗಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಡೆತನದಲ್ಲಿರುವ ಟೌನ್ ಹಾಲ್‌ ಬಾಡಿಗೆ ದರ ಪರಿಷ್ಕರಿಸಲಾಗಿದೆ.

ಕನ್ನಡ ರಂಗಭೂಮಿಗೆ ಬಿಬಿಎಂಪಿ ವತಿಯಿಂದ ಗೌರಿ-ಗಣೇಶ ಹಬ್ಬದ ಉಡುಗೊರೆಯಾಗಿ ಬಾಡಿಗೆ ದರ ಕಡಿಮೆ ಮಾಡಿದ್ದು, ಕನ್ನಡ ರಂಗಭೂಮಿಯ ಎಲ್ಲ ನಾಟಕ – ಪ್ರಸಂಗಗಳಿಗೆ ಹಾಗೂ ವಿಶೇಷ ಅನುಮತಿ ಪಡೆದ ಕಾರ್ಯಕ್ರಮಗಳಿಗೆ ಪರಿಷ್ಕೃತ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು. ಪರಿಷ್ಕೃತ ದರಗಳು ಹಾಗೂ ರಿಯಾಯಿತಿ ಸೌಲಭ್ಯವು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್ ಪುರ ತಿಳಿಸಿದ್ದಾರೆ.

ಈ ಹಿಂದೆ ಪೂರ್ತಿ ದಿನ ಬೆಳಗ್ಗೆ 8.00 ರಿಂದ ರಾತ್ರಿ 10.00 ಗಂಟೆಯವರೆಗೆ ಎ.ಸಿ(Air Conditioner) ಇದ್ದರೆ 75,000 ರೂಪಾಯಿ ಹಾಗೂ ನಾನ್ ಎ.ಸಿ (Non Air Conditioner) 60,000 ರೂಪಾಯಿ ಬಾಡಿಗೆ ನಿಗದಿಪಡಿಸಲಾಗಿತ್ತು. ದರ ಪರಿಷ್ಕರಣೆ ನಂತರ ಪೂರ್ತಿ ದಿನಕ್ಕೆ ಎ.ಸಿಗೆ 60,000 ರೂಪಾಯಿ ಹಾಗೂ ನಾನ್ ಎ.ಸಿಗೆ 50,000 ದರ ನಿಗದಿಪಡಿಸಲಾಗಿದ್ದು, ತೆರಿಗೆಗಳು ಪ್ರತ್ಯೇಕವಾಗಿರುತ್ತದೆ‌.

ಇದನ್ನೂ ಓದಿ | Milk Price Hike | ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಕೆ?; ಸಿಎಂ ಮುಂದೆ ಪ್ರಸ್ತಾವನೆ!

ಅಲ್ಲದೆ, ಮೊದಲಾರ್ಧ ದಿನ (ಬೆಳಗ್ಗೆ 8.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ) ಹಾಗೂ ದ್ವಿತೀಯಾರ್ಧ ದಿನ (ಮಧ್ಯಾಹ್ನ 3.00 ರಿಂದ ರಾತ್ರಿ 10.00 ಗಂಟೆಯವರೆಗೆ)ಕ್ಕೆ ಎ.ಸಿಗೆ 30,000 ಹಾಗೂ ನಾನ್ ಎ.ಸಿ.ಗೆ 25,000 ರೂಪಾಯಿ ದರ ನಿಗದಿಪಡಿಸಿದ್ದು, ತೆರಿಗೆ ಪ್ರತ್ಯೇಕವಾಗಿರುತ್ತದೆ‌. ಬೆಂಗಳೂರಿನ ಸಾಂಸ್ಕೃತಿಕ ಹಾಗೂ ರಂಗಭೂಮಿ ಸಂಘಟನೆಗಳು ಇದರ ಸದುಪಯೋಗ ಪಡೆಯಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ | Rain News | ಬೆಂಗಳೂರು-ಮೈಸೂರು ಹೆದ್ದಾರಿ ಕಾಲುವೆಗಳು ಮುಚ್ಚಿದ್ದಕ್ಕೆ ಪ್ರವಾಹ; ಸಿಎಂ ಬೊಮ್ಮಾಯಿ

Exit mobile version