ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಇಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ (Australia Pakistan cricket match) ತಂಡಗಳ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯಾಟ (ICC World Cup 2023) ನಡೆಯಲಿದೆ. ಸ್ಟೇಡಿಯಂನ ಸುತ್ತ ಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಪಂದ್ಯಾಟದ ವೇಳೆ ಪ್ಯಾಲೆಸ್ತೀನ್ (Palestine slogans) ಪರ ಸಹಾನುಭೂತಿಪರರು ಕಪ್ಪು ಧ್ವಜ (black flag) ಪ್ರದರ್ಶಿಸಲು ಹಾಗೂ ಘೋಷಣೆ ಕೂಗಲು ಸಿದ್ಧತೆ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆಗಳಿಗೆ (intelligence) ಮಾಹಿತಿ ದೊರೆತಿದ್ದ ಹಿನ್ನೆಲೆಯಲ್ಲಿ, ಭಾರಿ ಬಂದೋಬಸ್ತ್ ಮಾಡಲಾಗಿದೆ. ಕ್ರೀಡಾಂಗಣ ಸುತ್ತಲೂ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದ್ದು, ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾರೆ.
ಪಂದ್ಯಾಟ ಮಧ್ಯಾಹ್ನ ಎರಡು ಗಂಟೆಗೆ (2pm) ಆರಂಭವಾಗಲಿದೆ. ಒಳಹೋಗಲು ಮುಂಜಾನೆಯಿಂದಲೇ ಕ್ರಿಕೆಟ್ ಪ್ರೇಮಿಗಳು ಸ್ಟೇಡಿಯಂ ಬಳಿ ಜಮಾಯಿಸಿದ್ದಾರೆ.
ಪ್ರತೀ ಗೇಟ್ ಬಳಿಯೂ ಪೊಲೀಸ್ ಸಿಬ್ಬಂದಿ ಹಾಗೂ ಕ್ವೀನ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಕ್ರಿಕೆಟ್ ಮ್ಯಾಚ್ ನೋಡಲು ಭಾರೀ ಸಂಖ್ಯೆಯಲ್ಲಿ ವೀಕ್ಷಕರ ಬರುವ ಸಾಧ್ಯತೆಯಿದೆ. ಕ್ವೀನ್ಸ್ ರಸ್ತೆ ಮತ್ತು ಕಬ್ಬನ್ ರಸ್ತೆ ಬಳಿ ಸಂಚಾರ ದಟ್ಟಣೆ ಸಾಧ್ಯತೆ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆಯಾಗದಂತೆ ಸಂಚಾರಿ ಪೊಲೀಸರಿಂದ ನಿಗಾ ಇಡಲಾಗಿದೆ.
ಕ್ರಿಕೆಟ್ ಪಂದ್ಯಾಟದ (world cup cricket match) ವೇಳೆ ಪ್ಯಾಲೆಸ್ತೀನ್ ಪರ (Israel Palestine War) ಘೋಷಣೆ ಕೂಗಲು, ಧ್ವಜ ಪ್ರದರ್ಶಿಸಲು ಕೆಲವು ಸಂಘಟನೆಗಳು ಮುಂದಾಗಿವೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ (intelligence) ದೊರೆತಿತ್ತು. ಇಸ್ರೇಲ್- ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ವಿರುದ್ಧ ಹಾಗೂ ಪ್ಯಾಲೆಸ್ತೀನ್ ಬಂಡುಕೋರರ ಪರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗಮನ ಸೆಳೆಯಲು ಹಲವು ವಿಧದ ಸಿದ್ಧತೆ ಹಲವು ಸಂಘಟನೆಗಳಿಂದ ನಡೆಯುತ್ತಿದೆ. ಸಾವಿರಾರು ಜನ ಸೇರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗುವುದು ಇವುಗಳಲ್ಲಿ ಒಂದಾಗಿದೆ.
ಪಂದ್ಯದ ಸಂದರ್ಭದಲ್ಲಿ ಪ್ರೇಕ್ಷಕರ ಸೋಗಿನಲ್ಲಿ ಒಳನುಸುಳಿ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲು ಹಲವರು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ. ಈಗಾಗಲೇ ರಾಜಧಾನಿಯ ಎಂಜಿ ರಸ್ತೆಯಲ್ಲಿ ಪಾಲೆಸ್ತೀನ್ ಪರ ಪ್ರತಿಭಟನೆ ನಡೆಸಲಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿ 25 ಜನರನ್ನು ಪ್ರಿವೆನ್ಷನ್ ಆಕ್ಟ್‌ನಡಿ ಕಬ್ಬನ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಪಂದ್ಯಾಟ ವೀಕ್ಷಿಸಲು ಇತರ ಹಲವು ದೇಶಗಳಿಂದಲೂ ವೀಕ್ಷಕರು ಆಗಮಿಸಲಿದ್ದಾರೆ. ಇದು ಬಂಡುಕೋರರ ಪರ ಸಹಾನುಭೂತಿ ಹೊಂದಿರುವವರಿಗೆ ಪ್ರಶಸ್ತ ಸಮಯವೆನಿಸಿದೆ. ಇದರ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಪೊಲೀಸರು, ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಭಿತ್ತಿಪತ್ರ, ಕಪ್ಪು ಕರವಸ್ತ್ರ, ಕಪ್ಪು ಕೊಡೆ, ಅನುಮಾನಾಸ್ಪದ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ. ಪ್ರತಿಯೊಬ್ಬರನ್ನೂ ಕಟ್ಟುನಿಟ್ಟಾದ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತದೆ.
ಇದನ್ನೂ ಓದಿ: ICC World Cup 2023: ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಆಫರ್ ನೀಡಿದ ನಮ್ಮ ಮೆಟ್ರೋ