ಬೆಂಗಳೂರು : ಬೆಂಗಳೂರು ನಗರ ಹಾಗೂ ಕರ್ನಾಟಕದಾದ್ಯಂತ ನೀರಿನ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ನೀರಿನ ಸಂಪರ್ಕಕ್ಕೆ ವಾಟರ್ ಏರಿಯೇಟರ್ (water aerator) ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಏರಿಯೇಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಏರಿಯೇಟರ್ ಗೆ ಆನ್‌ಲೈನ್ ಫ್ಲಾಟ್ ಫಾರಂಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಹಾಗೂ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ಏರಿಯೇಟರ್ ಸರಬರಾಜು ಮಾಡಲು ಆರಂಭಿಸಿದೆ.
ಅತ್ಯಂತ ವೇಗವಾಗಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ವೇದಿಕೆಯಾಗಿರುವ ಸ್ವಿಗ್ಗಿ ಮಾರ್ಟ್‌ನಲ್ಲೂ ಏರಿಯೇಟರ್ ಹುಡುಕುವವರ ಸಂಖ್ಯೆ ಶೇಕಡಾ 1400 ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸ್ವಿಗ್ಗಿ ಇನ್‌ಸ್ಟಾ ಮಾರ್ಟ್, ಅರ್ಥ ಫೋಕಸ್ ಎನ್ನುವ ಕಂಪನಿಯ ಜೊತೆ ಕೈಜೋಡಿಸಿದೆ. ಈ ಮೂಲಕ ಕೇವಲ 10 ನಿಮಿಷಗಳಲ್ಲಿ ಬೇಡಿಕೆ ಸಲ್ಲಿಸುವ ಗ್ರಾಹಕರುಗಳಿಗೆ ಏರಿಯೇಟರ್ ಅನ್ನು ತಲುಪಿಸಲು ಆರಂಭಿಸಿದೆ.
ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್ ಬುಕಿಂಗ್
ಈ ಮೂಲಕ ಬೆಂಗಳೂರು ಜಲಮಂಡಳಿಯ ನೀರಿನ ಸದ್ಬಳಕೆಯ ಮಹತ್ವಕಾಂಕ್ಷಿ ಯೋಜನೆಯಾದ ಏರಿಯೇಟರ್ ಅಳವಡಿಕೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ಏರಿಯೇಟರ್‌ಗಳ ಬಳಕೆಯಿಂದ ಬಹಳಷ್ಟು ನೀರಿನ ಉಳೀತಾಯವನ್ನು ಮಾಡಬಹುದಾಗಿದೆ. ಕಿಚನ್ ಟ್ಯಾಪ್‌ಗಳಲ್ಲಿ ಅಳವಡಿಸುವುದರಿಂದ ಶೇಕಡಾ 70 ರಷ್ಟು ಮತ್ತು ಶವರ್‌ಗಳಿಂದ ಶೇಕಡಾ 50 ರಷ್ಟು ನೀರು ಉಳಿತಾಯ ಮಾಡಬಹುದಾಗಿದೆ. ಸ್ವಿಗ್ಗಿ ಇಸ್ಟಾ ಮಾರ್ಟ್‌ನಲ್ಲಿ ಕಿಚನ್, ಬಾತ್ ಮತ್ತು ಬೇಸಿನ್ ಟ್ಯಾಪ್ ಹಾಗೂ ಶವರ್‌ಗಳಲ್ಲಿ ಅಳವಡಿಸಬಹುದಾದ ಫ್ಲೋ ರಿಸ್ಟ್ರಿಕ್ಟರ್ ಅನ್ನು ದಾಸ್ತುನು ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯನ್ನು ತಿಳಿಸಲಾಗಿದೆ.
ಮಾ.21ರಿಂದ ನಲ್ಲಿಗಳಿಗೆ ಏರಿಯೇಟರ್ ಕಡ್ಡಾಯ ಮಾಡಿದ್ದ ಬೆಂಗಳೂರು ಜಲಮಂಡಳಿ
ರಾಜಧಾನಿಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ (Bangalore Water Crisis) ಉಲ್ಬಣವಾಗುತ್ತಿದೆ. ಹೀಗಾಗಿ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಹಲವು ಕ್ರಮ ಕೈಗೊಂಡಿರುವ ಬೆಂಗಳೂರು ಜಲಮಂಡಳಿಯು(ಬಿಡಬ್ಲ್ಯುಎಸ್‌ಎಸ್‌ಬಿ), ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ ಮಾಡಿ (Aerators for Taps) ಆದೇಶ ಹೊರಡಿಸಿತ್ತು.
ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಜಲಮಂಡಲಿ ಕ್ರಮ ಕೈಗೊಂಡಿದ್ದು, ಮಾರ್ಚ್ 21 ರಿಂದ 31ರೊಳಗೆ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್ ಅಳವಡಿಸಲು ಸೂಚನೆ ನೀಡಿತ್ತು.
ಏರಿಯೇಟರ್ ಅಳವಡಿಕೆಯಿಂದ ಶೇ. 60 ರಿಂದ 85ರಷ್ಟು ನೀರಿನ ಉಳಿತಾಯ ಸಾಧ್ಯವಾಗಲಿದೆ. ವಾಣಿಜ್ಯ ಮಳಿಗೆಗೆಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ವಾಷ್ ಬೇಸಿನ್, ಕಿಚನ್, ಕೈ ಮತ್ತು ಕಾಲು ತೊಳೆಯುವ ಸ್ಥಳಗಳು, ಸ್ವಚ್ಛತೆಗಾಗಿ ಮೀಸಲಿರುವ ನಲ್ಲಿಗಳಿಂದ ಹೆಚ್ಚಿನ ನೀರು ಪೋಲಾಗುವುದನ್ನು ತಡೆಯಲು ಕ್ರಮ ಏರಿಯೇಟರ್ ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಲಾಗಿತ್ತು.