ಬೆಂಗಳೂರು: ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿಯನ್ನು ಪೊಲೀಸರು ತವರಿಗೆ ವಾಪಸ್ ಕಳಿಸಿದ್ದಾರೆ.
ಎಫ್ಆರ್‌ಆರ್‌ಓ ಅಧಿಕಾರಿಗಳ ನೆರವಿನಿಂದ ಪಾಕ್ ಮೂಲದ ಇಕ್ರಾ ಜೀವನಿಯನ್ನು ಗಡಿಪಾರು ಮಾಡಲಾಗಿದ್ದು, ವಾಘಾ ಗಡಿಯಲ್ಲಿ ಪಾಕ್ ಅಧಿಕಾರಿಗಳಿಗೆ ಆಕೆಯನ್ನು ಬೆಳ್ಳಂದೂರು ಪೊಲೀಸರು ಹಸ್ತಾಂತರಿಸಿದ್ದಾರೆ.
ಜನವರಿ 19ರಂದು ಪಾಕ್ ಯುವತಿಯನ್ನು ಬೆಳ್ಳಂದೂರಿನ ಜುನ್ನಸಂದ್ರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆನ್‌ಲೈನ್ ಲೂಡೋ ಗೇಮ್ ಆಡುವ ವೇಳೆ ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಯಾದವ್ ಎಂಬಾತನ ಪ್ರೀತಿಯ ಬಲೆಗೆ ಇಕ್ರಾ ಜೀವನಿ ಬಿದ್ದಿದ್ದಳು. 2022 ಸೆಪ್ಟೆಂಬರ್‌ನಲ್ಲಿ ನೇಪಾಳ ಮೂಲಕ ಪಾಕ್ ಯುವತಿಯನ್ನು ಭಾರತಕ್ಕೆ ಮುಲಾಯಂ ಸಿಂಗ್ ಕರೆಸಿಕೊಂಡಿದ್ದ.
ಮದುವೆಯಾಗಿ ಬಿಹಾರ ಮೂಲಕ ಭಾರತದೊಳಗೆ ಬಿಹಾರದ ಬೀರ್ ಗಂಜ್ ಮೂಲಕ ಆಕೆಯನ್ನು ಭಾರತಕ್ಕೆ ಕರೆತಂದಿದ್ದ ಮುಲಾಯಂ ಸಿಂಗ್. ರೈಲಿನಲ್ಲಿ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ದಂಪತಿ ಬೆಂಗಳೂರಿನ ಜುನ್ನಸಂದ್ರದಲ್ಲಿ ಕಳೆದ ಆರು ತಿಂಗಳಿಂದ ನೆಲೆಸಿದ್ದರು. ಪಾಕ್‌ಗೆ ಆಕೆ ಕರೆ ಮಾಡಿದ ಜಾಡು ಹಿಡಿದ ಪೊಲೀಸರು, ಒಂದು ತಿಂಗಳು ನಿರಂತರ ಗಡಿಪಾರು ಪ್ರಕ್ರಿಯೆಯ ಬಳಿಕ ಈಗ ಆಕೆಯನ್ನು ಪಾಕ್‌ಗೆ ಕಳಿಸಿದ್ದಾರೆ.
ಇದನ್ನೂ ಓದಿ: Pakistan Girl: ತವರಿಗೆ ಹೋಗಲು ಒಲ್ಲೆ ಎನ್ನುತ್ತಿರೋ ಪಾಕ್ ಮಹಿಳೆ; ಪತಿ ಮುಲಾಯಂ ಸಿಂಗ್ ಯಾದವ್ ವಿಚಾರಣೆಗೆ ಸಿದ್ಧತೆ