Site icon Vistara News

Ind vs sa t20 | ಮಹತ್ವದ ಪಂದ್ಯಕ್ಕೆ ಸಜ್ಜಾಯ್ತು ಸಿಲಿಕಾನ್‌ ಸಿಟಿ, ಟ್ರಾಫಿಕ್‌ ಜಾಮ್‌ ತಪ್ಪಿಸಲು ಪ್ಲಾನ್‌ ಏನು?

Ind vs SA T20

ಬೆಂಗಳೂರು: Ind vs sa t20 | ಜೂನ್‌ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕ ಮತ್ತು ಭಾರತ ಕ್ರಿಕೆಟ್ ಕದನಕ್ಕೆ ಸಿಲಿಕಾನ್ ಸಿಟಿ ಸಿದ್ಧವಾಗಿದೆ. ಈಗಾಗಲೇ ಟಿಕೆಟ್‌ ಎಲ್ಲ ಸೋಲ್ಡ್‌ ಔಟ್‌ ಆಗಿದ್ದು, ಭಾರಿ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆಯಿದೆ. ಪಂದ್ಯಕ್ಕೆ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ನಗರದಲ್ಲಿ ಹಲವೆಡೆ ಟ್ರಾಫೀಕ್ ಜಾಮ್ ಉಂಟಾಗುವ ಸಾಧ್ಯತೆಯಿದ್ದು ಬದಲಿ ಸಂಚಾರ ಮಾರ್ಗಗಳನ್ನು ಸೂಚಿಸಲಾಗಿದೆ.

ವಾಹನ ಸವಾರರು ಬಳಸಬೇಕಾದ ಪರ್ಯಾಯ ಮಾರ್ಗಗಳ ವಿವರ:
ಸಾರ್ವಜನಿಕರು ಸಂಜೆ 4-00 ಗಂಟೆಯಿಂದ 7-00 ಗಂಟೆಯವರೆಗೆ ಮತ್ತು ರಾತ್ರಿ 10-00 ಗಂಟೆಯಿಂದ 12-00 ಗಂಟೆಯವರೆಗೆ ಕೆಳಕಂಡ ಮಾರ್ಗವನ್ನು ಬಳಸದೇ ಇರುವುದು ಸೂಕ್ತ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುವ ರಸ್ತೆಗಳು:

  1. ಎಂ.ಜಿ.ರಸ್ತೆ,
  2. ಕ್ಲೀನ್ಸ್ ರಸ್ತೆ,
  3. ಕಬ್ಬನ್ ರಸ್ತೆ
  4. ಸೆಂಟ್ರಲ್ ಸ್ಟ್ರೀಟ್

ಪರ್ಯಾಯ ಮಾರ್ಗಗಳ ವಿವರ:

  1. ಇನ್‌ಫೆಂಟ್ರಿ ರಸ್ತೆ ಹಾಗೂ ಬಾಳೇಕುಂದ್ರಿ ವೃತ್ತದಿಂದ ಸಿ.ಟಿ.ಓ. ವೃತ್ತದ ಕಡೆಗೆ ಬರುವ ವಾಹನಗಳು ಟ್ರಾಫಿಕ್ ಹೆಡ್‌ಕ್ವಾರ್ಟರ್ ಜಂಕ್ಷನ್ ಮೂಲಕ ಇನ್‌ಫೆಂಟ್ರಿ ರಸ್ತೆಯಲ್ಲಿ ಸಂಚರಿಸಿ ಮುಂದೆ ಸಾಗಬಹುದಾಗಿದೆ.
  2. ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದ ಕಡೆಗೆ ಬರುವ ವಾಹನಗಳು ಸಿದ್ದಲಿಂಗಯ್ಯ ವೃತ್ತದಲ್ಲಿ ಬಲ ತಿರುವು ಪಡೆದು ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಮುಂದೆ ಸಾಗಬಹುದಾಗಿದೆ.
  3. ಎಂ.ಜಿ.ರಸ್ತೆಯಿಂದ ಕ್ವೀನ್ಸ್ ವೃತ್ತದ ಕಡೆಗೆ ಬರುವ ವಾಹನಗಳು ವೆಬ್ ಜಂಕ್ಷನ್ ಬಳಿ ಬಲ ತಿರುವ ಪಡೆದು ಡಿಕನ್ಸನ್ ರಸ್ತೆ ಮೂಲಕ ಮುಂದೆ ಸಾಗಬಹುದಾಗಿದೆ.
  4. ಕಬ್ಬನ್ ರಸ್ತೆ ಹಾಗೂ ಮಣಿಪಾಲ್ ಸೆಂಟರ್ ಕಡೆಯಿಂದ ಸಿ.ಟಿ.ಓ. ವೃತ್ತದ ಕಡೆಗೆ ಬರುವ ವಾಹನಗಳು ಬಿ.ಆರ್.ವಿ. ಜಂಕ್ಷನ್ ಬಳಿ ಬಲ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್, ಶಿವಾಜಿನಗರ ಬಸ್‌ ನಿಲ್ದಾಣದ ಮೂಲಕ ಮುಂದೆ ಸಾಗಬಹುದಾಗಿದೆ.

19.06.2022 ರಂದು ಮಧ್ಯಾಹ್ನ 2-00 ಗಂಟೆಯಿಂದ ರಾತ್ರಿ 12-30 ವರಗೆ ಈ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ:

  1. ಕ್ವೀನ್ಸ್‌ ರಸ್ತೆ: ಬಾಳೇಕುಂದ್ರಿ ವೃತ್ತದಿಂದ ಕ್ಲೀನ್ಸ್‌ ವೃತ್ತದವರೆಗೆ ರಸ್ತೆಯ ಎರಡೂ ಕಡೆ.
  2. ಎಂ.ಜಿ ರಸ್ತೆ: ಕ್ವೀನ್ಸ್‌ ವೃತ್ತದಿಂದ ಕಾವೇರಿ ಎಂಪೋರಿಯಂ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ.
  3. ಲಿಂಕ್ ರಸ್ತೆ: ಎಂ.ಜಿ. ರಸ್ತೆಯಿಂದ ಕಬ್ಬನ್‌ ರಸ್ತೆವರೆಗೆ.
  4. ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ.
  5. ಸೆಂಟ್ರಲ್ ಸ್ಟ್ರೀಟ್: ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ ರಸ್ತೆಯ ಎರಡೂ ಕಡೆ.
  6. ಕಬ್ಬನ್‌ ರಸ್ತೆ: ಸಿ.ಟಿ.ಓ, ವೃತ್ತದಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ.
  7. ಸೆಂಟ್ ಮಾರ್ಕ್ಸ್ ರಸ್ತೆ: ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರಗೆ.
  8. ಮ್ಯೂಸಿಯಂ ರಸ್ತೆ: ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆವರೆಗೆ.
  9. ಕಸ್ತೂರಬಾ ರಸ್ತೆ: ಕ್ವಿನ್ಸ್‌ ವೃತ್ತದಿಂದ ಹಡ್ನನ್ ವೃತ್ತದವರೆಗೆ.
  10. ಮಲ್ಯ ಆಸ್ಪತ್ರೆ ರಸ್ತೆ: ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ.
  11. ಕಬ್ಬನ್‌ಪಾರ್ಕ್ ಒಳ ಭಾಗದ ಪ್ರೆಸ್ ಕ್ಲಬ್ ಮುಂಭಾಗ ಹಾಗೂ ಬಾಲಭವನ ಫೌಂಟೇನ್ ರಸ್ತೆ.
  12. ಲ್ಯಾವೆಲ್ಲಿ ರಸ್ತೆ: ಕ್ವೀನ್ಸ್‌ ವೃತ್ತದಿಂದ ವಿಠಲ್ ಮಲ್ಯ ರಸ್ತೆಯ ಜಂಕ್ಷನ್‌ವರೆಗೆ
  13. ವಿಠಲ್ ಮಲ್ಯ ರಸ್ತೆ: ಸಿದ್ದಲಿಂಗಯ್ಯ ವೃತ್ತದಿಂದ ಬಿಷಪ್ ಕಾಟನ್ ಶಾಲೆಯವರೆಗೆ‌
  14. ಕಬ್ಬನ್ ರಸ್ತೆ: ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ಬಿ.ಎಂ.ಟಿ.ಸಿ ಬಸ್‌ಗಳಿಗೆ ಮಾತ್ರ ನಿಲುಗಡೆಗೆ ಅವಕಾಶ.

ಕ್ರಿಕೆಟ್ ಪ್ರೇಕ್ಷಕರಿಗೆ ವಾಹನ ನಿಲುಗಡೆ ಸ್ಥಳಗಳ ವಿವರ

19.06.2022 ರಂದು ಮಧ್ಯಾಹ್ನ 3-00 ಗಂಟೆಯಿಂದ ರಾತ್ರಿ 12-30 ಗಂಟೆವರೆಗೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುತ್ತದೆ.

ಇದನ್ನೂ ಓದಿ: ಭಾರತ- ದಕ್ಷಿಣ ಆಫ್ರಿಕಾ T20 Match: ಜೂನ್‌ 19ರಂದು ರಾತ್ರಿ 1 ಗಂಟೆವರೆಗೂ ಓಡಾಡಲಿದೆ ನಮ್ಮ ಮೆಟ್ರೊ

Exit mobile version