ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್ ಬಳಿ ಬಿಬಿಎಂಪಿಯು ಸುಸಜ್ಜಿತ, ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್‌ಅನ್ನು (Parking Complex) ನಿರ್ಮಿಸಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟನೆ ಮಾಡಿದರು. ಇದು ದೇಶದ ಮೊದಲ ಸ್ಮಾರ್ಟ್ ಪಾರ್ಕಿಂಗ್ ಕಾಂಪ್ಲೆಕ್ಸ್ ಎನಿಸಿದ್ದು, ವಾಹನ ಪಾರ್ಕಿಂಗ್ ಜತೆಗೆ ಹತ್ತಾರು ಸೌಕರ್ಯಗಳಿವೆ.
ಮಹಾನಗರದ ಜನರಿಗೆ ಇನ್ನು ಪಾರ್ಕಿಂಗ್ ಸೇವೆ ಲಭ್ಯವಿರಲಿದೆ. 2022ರಲ್ಲಿ ಬಿಬಿಎಂಪಿ ನಗರೋತ್ಥಾನ ಯೋಜನೆಯಡಿ 78 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸೊಲ್ಯೂಷನ್ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್‌ನಿಂದ ನಿರ್ವಹಣೆ ಮಾಡಲಾಗುತ್ತದೆ. ಪಾರ್ಕಿಂಗ್ ಕಾಂಪ್ಲೆಕ್ಸ್‌ನಲ್ಲಿ 600 ಕಾರುಗಳು ಹಾಗೂ 750 ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇದೆ. ಹಾಗಾದರೆ, ಪಾರ್ಕಿಂಗ್ ಶುಲ್ಕ ಎಷ್ಟು? ಯಾವ ವಾಹನಕ್ಕೆ ಎಷ್ಟು ರೂಪಾಯಿ ಎಂಬುದರ ಮಾಹಿತಿ ಇಲ್ಲಿದೆ.
ಪಾರ್ಕಿಂಗ್ ಶುಲ್ಕ ಹೀಗಿದೆ…
ಮೊದಲ 1 ಗಂಟೆವರೆಗೆ
ಬೈಕ್ – 15 ರೂಪಾಯಿ
ಕಾರು – 25 ರೂಪಾಯಿ
1-2 ಗಂಟೆವರೆಗೆ
ಬೈಕ್ – 25 ರೂಪಾಯಿ
ಕಾರು – 40 ರೂಪಾಯಿ
2-4 ಗಂಟೆವರೆಗೆ
ಬೈಕ್ – 40 ರೂಪಾಯಿ
ಕಾರು – 65 ರೂಪಾಯಿ
4-6 ಗಂಟೆಗೆ
ಬೈಕ್ – 55 ರೂಪಾಯಿ
ಕಾರು – 90 ರೂಪಾಯಿ
6-10 ಗಂಟೆ
ಬೈಕ್ – 85 ರೂಪಾಯಿ
ಕಾರು – 110 ರೂಪಾಯಿ
10-12 ಗಂಟೆ
ಬೈಕ್ – 100 ರೂಪಾಯಿ
ಕಾರು – 165 ರೂಪಾಯಿ
ಹೀಗಿದೆ ಅತ್ಯಾಧುನಿಕ ಪಾರ್ಕಿಂಗ್ ಕಾಂಪ್ಲೆಕ್ಸ್
India's first smart parking complex built by our Govt in the heart of the city Gandhinagar Bengaluru. Man behind this project non other then @dineshgrao pic.twitter.com/g1RoYLCfoj
— kashyap Nandan (@kashyapnandan_) June 21, 2024
ಉಚಿತ ಪಿಕ್ಅಪ್, ಡ್ರಾಪ್ ಸೌಲಭ್ಯ
ಸಿಟಿ ಸಿವಿಲ್ ಕೋರ್ಟ್, ಕೆಆರ್ ವೃತ್ತ, ವಿಧಾಸೌಧ, ಎಂಎಸ್ ಬಿಲ್ಡಿಂಗ್, ಹೈಕೋರ್ಟ್, ಪೋತೀಸ್ ಸರ್ಕಲ್, ಚಿಕ್ಕಪೇಟೆ ಮೆಟ್ರೋ ನಿಲ್ದಾಣ, ಬಿವಿಕೆ ಅಯ್ಯಂಗಾರ್ ರಸ್ತೆ, ರಾಯನ್ ಸರ್ಕಲ್, ಉಪ್ಪಾರಪೇಟೆ ಪೊಲೀಸ್ ಠಾಣೆ, ಮೆಜೆಸ್ಟಿಕ್ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮಾರ್ಗಗಳಲ್ಲಿ ಉಚಿತ ಪಿಕ್ ಅಪ್, ಡ್ರಾಪ್ ಸೌಲಭ್ಯದ ವಾಹನಗಳು ಕಾರ್ಯನಿರ್ವಹಿಸುತ್ತವೆ.
ಏನೆಲ್ಲ ಸೌಲಭ್ಯ?
ಉಚಿತ ವೈಫೈ, ಕಾರ್ ಸ್ಪಾ, ಶೌಚಾಲಯ, ಕುಡಿಯುವ ನೀರು, ಇವಿ ಚಾರ್ಜಿಂಗ್, ಕಾಫಿ ಶಾಪ್, ವ್ಹೀಲ್ ಚೇರ್, ಎಸ್‌ಒಎಸ್, ಆ್ಯಂಬುಲೆನ್ಸ್ ಸೇರಿ ಹಲವು ಸೌಲಭ್ಯಗಳು ಇವೆ.
ಇದನ್ನೂ ಓದಿ: Stabbing Case : ಪಾರ್ಕಿಂಗ್ ವಿಚಾರದಲ್ಲಿ ಜಗಳ; ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದ ನಟಿ ಅನುಷ್ಕಾ ಶೆಟ್ಟಿಯ ಮಾವ