ಬೆಂಗಳೂರು: ನಗರದ ಕಾಳಿದಾಸ ಲೇಔಟ್ ನಲ್ಲಿ ನಡೆದ ರಾಜಕಾಲುವೆ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ 1 ಲಕ್ಷ ರೂ. ದಂಡ ವಿಧಿಸಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ರಾಜಕಾಲುವೆಯ ಹೂಳು ತೆಗೆಯದ ಕಾರಣ ಹೆಚ್ಚು ಅನಾಹುತ ಆಗಿದೆ. ಹೂಳು ತೆಗೆಯುವ ವಿಚಾರದಲ್ಲಿ ಶಾರ್ಟ್ ಟೈಂ ಟೆಂಡರ್ ನೀಡಿದ್ದೇವೆ. ಇನ್ನೊಂದು ತಿಂಗಳಲ್ಲಿ ಅನ್ ಲೈನ್ಡ್ ಪ್ರದೇಶದಲ್ಲಿ ಹೂಳು ತೆಗೆಯಲಾಗುವುದು ಮತ್ತು ಲೈನ್ಡ್ ಪ್ರದೇಶದಲ್ಲಿ ಗುತ್ತಿಗೆದಾರರಿಂದಲೇ ಹೂಳು ತೆಗೆಸಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | BBMP ನೂತನ ಮುಖ್ಯ ಆಯುಕ್ತರಿಂದ ಸಿಟಿ ರೌಂಡ್ಸ್: ಕಾಮಗಾರಿಗಳ ಪರಿಶೀಲಿಸಿದ ತುಷಾರ್ ಗಿರಿನಾಥ್
ಗಾಯಗೊಂಡವರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ . ಗಾಯಾಳುಗಳಿಗೆ ಗುತ್ತಿಗೆದಾರರಿಂದ ಹಣ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದವರು ಹೇಳಿದ್ದಾರೆ.
ಹತ್ತು ದಿನದಲ್ಲಿ ರಸ್ತೆಗಳು ಗುಂಡಿಮುಕ್ತ
ಈಗಾಗಲೇ ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಳೆಯಿಂದಾಗಿ ಈ ಕಾರ್ಯಕ್ಕೆ ತೊಡಕಾಗಿತ್ತು. ಸದ್ಯ 5,500 ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಇನ್ನು 10 ದಿನಗಳಲ್ಲಿ ಎಲ್ಲ ಗುಂಡಿಗಳನ್ನು ಸಂಪೂರ್ಣ ಮುಚ್ಚಲಾಗುವುದು. ಪೈಥಾನ್ ಯಂತ್ರದ ಮೂಲಕ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ | ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಗೌರವ್ ಗುಪ್ತ ಸ್ಥಾನಕ್ಕೆ ತುಷಾರ್ ಗಿರಿನಾಥ್: 15 IAS ಅಧಿಕಾರಿಗಳ ವರ್ಗಾವಣೆ