Site icon Vistara News

ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ್‌ ರಾಜೀನಾಮೆ

ಬೆಂಗಳೂರು: ಮಾಜಿ ಸಚಿವ ರೇಣುಕಾಚಾರ್ಯ ಅವರ ಪುತ್ರಿಯ ನಕಲಿ ಜಾತಿ ಪ್ರಮಾಣಪತ್ರದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದ್ದ ಹಿರಿಯ ಐಪಿಎಸ್‌ ಅಧಿಕಾರಿ ರವೀಂದ್ರನಾಥ್ ಅವರು ಡಿಜಿಪಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ತಮ್ಮ ಅವಧಿಪೂರ್ವ ವರ್ಗಾವಣೆ ಮಾಡಿದ್ದ ಹಿನ್ನೆಲೆಯಲ್ಲಿ ಹಾಗೂ ಸರಕಾರದ ಮುಂದಿಟ್ಟ ಮನವಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬ ಕಾರಣದಿಂದ ಮನನೊಂದಿದ್ದರು. ಈ ಕಾರಣಕ್ಕೆ ರವೀಂದ್ರನಾಥ್‌ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜಿನಾಮೆ ಸಲ್ಲಿಸಿದ್ದಾರೆ.

ತಮ್ಮ ನಿರ್ಧಾರದ ಬಗ್ಗೆ ರಾಜೀನಾಮೆಯಲ್ಲಿ ವಿವರಿಸಿದ್ದಾರೆ. ಈ ಹಿಂದೆ ನಕಲಿ‌ಜಾತಿ ಪ್ರಮಾಣ ಪತ್ರದ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದು, ಅದಕ್ಕೆ ತಕ್ಕ ಯಾವುದೇ ಕ್ರಮವನ್ನು ಸರಕಾರ ಕೈಗೊಂಡಿಲ್ಲ. ಅಲ್ಲದೆ, ಸರಕಾರಕ್ಕೆ ಎಸ್‌ಸಿಎಸ್‌ಟಿ ಕಾಯ್ದೆಯಡಿ ಪೊಲೀಸ್ ಸಿಬ್ಬಂದಿಗೆ ಭದ್ರತಾ ಸಮಿತಿ ರಚಿಸಲು‌ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಅವರ ಈ ಮನವಿಯನ್ನು ಸರಕಾರ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.

ರವೀಂದ್ರನಾಥ್ ಸಲ್ಲಿಸಿದ ಮನವಿಗೆ ಸರಕಾರ ಬೆಂಬಲ ನೀಡುವ ಹೊರತಾಗಿ ಪದೇ ಪದೇ ವರ್ಗಾವಣೆ ಮಾಡುವ ಕಿರುಕುಳ ನೀಡಲಾಗಿದೆ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ʼನಾನು ಅತ್ಯಂತ ನೋವಿನಿಂದ ಈ ರಾಜಿನಾಮೆ ಸಲ್ಲಿಸುತ್ತಿದ್ದೇನೆ. ಸರಕಾರದ ಈ ರೀತಿಯ ನಡವಳಿಕೆಯಿಂದ ಬೇಸತ್ತು ನನ್ನಹುದ್ದೆಗೆ ರಾಜಿನಾಮೆ ಸಲ್ಲಿಸುತ್ತಿದ್ದೇನೆʼ ಎಂದು ಹೇಳುವ ಮೂಲಕ ತಮ್ಮ ಮನದ ಮಾತನ್ನು ತಿಳಿಸಿದ್ದಾರೆ.

ರವೀಂದ್ರನಾಥ್‌ ರಾಜೀನಾಮೆ ಪತ್ರ
Exit mobile version